ವಿಜಯಪುರ: ಜಿಲ್ಲೆಯ ಆಲಮೇಲ ತಾಲೂಕಿನ ಮೋರಟಗಿ ಗ್ರಾಮ ಪಂಚಾಯತಿಯಡಿ ಹಮ್ಮಿಕೊಂಡ ರೋಜಗಾರ ದಿವಸ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೂಲಿಕಾರರನ್ನು ಉದ್ದೇಶಿಸಿ ಜಿಲ್ಲಾ ಪಂಚಾಯತಿ ಐಇಸಿ ಸಂಯೋಜಕರಾದ ಶ್ರೀ ಕಲ್ಲಪ್ಪ ನಂದರಗಿ ರವರು ಮಾತನಾಡಿದರು.
ಪ್ರತಿ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ 100 ದಿನಗಳ ಉದ್ಯೋಗವನ್ನು ಒದಗಿಸಿ ಅವರ ಜೀವನಕ್ಕೆ ಭದ್ರತೆ ಒದಗಿಸುವುದು. ದೀರ್ಘಕಾಲ ಬಾಳಿಕೆ ಬರುವ ಆಸ್ತಿಗಳನ್ನು ಸೃಜಿಸುವುದು. ಗ್ರಾಮೀಣ ಬಡಜನರ ಜೀವನೋಪಾಯದ ಮಟ್ಟ ಸುಧಾರಿಸುವುದು, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಗುರಿಯಾಗಿದೆ ಎಂದು ಹೇಳಿದರು. ನಿಮ್ಮ ಗ್ರಾಮಗಳ ಅಭಿವೃದ್ಧಿಯ ದೃಷ್ಠಿಯಿಂದ ಕೂಲಿಕಾರರು ಈ ಯೋಜನೆಯಡಿ ಕೆಲಸ ನಿರ್ವಹಿಸಿ, ಕೆಲಸ ನಿರ್ವಹಿಸಲು ಯಾವದೇ ಹಿಂಜರಿಕೆಯನ್ನು ಅನುಭವಿಸದೇ ಹೆಮ್ಮೆಯಿಂದ ಕೂಲಿ ಕೆಲಸ ನಿರ್ವಹಿಸಿ ಎಂದರು. ನರೇಗಾ ಯೋಜನೆಯಲ್ಲಿ ವೀಲಚೇತನರಿಗೆ, ಹಿರಿಯ ನಾಗರಿಕರಿಗೆ, ಗರ್ಭಿಣಿ ಮಹಿಳೆಯರಿಗೆ ಕೆಲಸದಲ್ಲಿ ವಿಶೇಷ ವಿನಾಯಿತಿ & ಆಧ್ಯತೆ ನೀಡಲಾಗುತ್ತಿದೆ. 25 ಜನ ಕೂಲಿಕಾರರು ಸೇರಿಕೊಂಡು ಒಂದೊಂದು ಕಾಯಕ ಸಂಘಗಳನ್ನು ರಚಿಸಿಕೊಂಡು ಸಂಘಟಕರಾಗುವದರ ಜೊತೆಗೆ ತಮ್ಮ ಹಕ್ಕನ್ನು ಪಡೆಯಬೇಕು ಎಂದರು.
ತಾಲೂಕು ಐ ಇ ಸಿ ಸಂಯೋಜಕರಾದ ಬಸವರಾಜ ಹುಣಸಗಿ ರವರು ಮಾತನಾಡಿ ನರೇಗಾ ಯೋಜನೆಯ ಕುರಿತು ಕೂಲಿಕಾರರ ಹಕ್ಕು ಮತ್ತು ಸೌಲಭ್ಯಗಳ ಕುರಿತಾಗಿ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದ ಸುಭಾಸ್ ಮಿಲಿಟರಿ ಮಾತನಾಡಿ ನಮ್ಮ ಗ್ರಾಮ ಪಂಚಾಯತಿಯು ಸದಾ ಕೂಲಿಕಾರರ ಹಿತದೃಷ್ಠಿಯನ್ನು ಬಯಸುತ್ತದೆ ಹೀಗಾಗಿ ಕೆಲಸ ಬಯಸಿ ಬರುವ ಪ್ರತಿಯೊಬ್ಬರಿಗೂ ಕೆಲಸ ನೀಡಲಾಗುತ್ತದೆ ಹಾಗೂ ಜಾಬ್ ಕಾರ್ಡ್ ಇರದೇ ಇರುವವರು ತಕ್ಷಣವೇ ಅರ್ಜಿ ಸಲ್ಲಿಸಿ ಕಾರ್ಡ್ ಮಾಡಿಸಿಕೊಳ್ಳಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಗ್ರಾಮ ಪಂಚಾಯಿತಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದ ಸುಭಾಸ್ ಮಿಲಿಟರಿ, ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಅಣ್ಣಾರಾಯ್ ಇಳಗೇರ, ತಾಲೂಕು ಐಇಸಿ ಸಂಯೋಜಕರಾದ ಬಸವರಾಜ ಹುಣಸಗಿ, ಸಂಪನ್ಮೂಲ ವ್ಯಕ್ತಿ ಸಾಬು ವಿಜಾಪುರ ಸೇರಿದಂತೆ ಕೂಲಿಕಾರರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
1 thought on “ಆಲಮೇಲ ತಾಲೂಕಿನ ಮೋರಟಗಿ ಗ್ರಾಮ ಪಂಚಾಯತಿಯಡಿ ಹಮ್ಮಿಕೊಂಡ ರೋಜಗಾರ ದಿವಸ ಕಾರ್ಯಕ್ರಮ.”