ಇಂಡಿ : ಬಳ್ಳೊಳ್ಳಿ ಗ್ರಾಮದಲ್ಲಿ ಕಸ, ಚರಂಡಿ ನೀರು, ಹಂದಿಗಳ ಓಡಾಟ ಕಂಡು ಕಾಣದಂತೆ ಗ್ರಾಮ ಪಂಚಾಯತ ಆಡಳಿತ.
ಇಂಡಿ : ಬಳ್ಳೊಳ್ಳಿ ಗ್ರಾಮದಲ್ಲಿ ಹೆದ್ದಾರಿ ಪಕ್ಕದ ರಸ್ತೆಯ ಬದಿ ಹಲವಾರು ಮನೆಗಳು, ಕಟ್ಟಿಗೆ ಅಡ್ಡೆ ಇದ್ದು ಇದರ ಪಕ್ಕದಲ್ಲಿ ಕಸ, ಚರಂಡಿ ನೀರು, ಹಂದಿಗಳ ಓಡಾಟ ಕಂಡು ಕಾಣದಂತೆ ಗ್ರಾಮ ಪಂಚಾಯತ ಆಡಳಿತ ಮಂಡಳಿಯ ವರ್ತನೆ ಎಂದು ಗ್ರಾಮದ ಯುವಕರ ಅಮಸಿದ್ದ ಬಡಿಗೇರ ಇವರ ಆರೋಪ.
ಬಳ್ಳೊಳ್ಳಿ ಗ್ರಾಮ ಪಂಚಾಯತ ಅಧಿಕಾರಿಗಳು ದಿನಾಲು ಇದೆ ರಸ್ತೆಯ ಬಂದಿಯಿಂದ ಸಂಚರಿಸುತ್ತಾರೆ, ಇಲ್ಲಿ ಹೊಲಸು ಕಂಡರೂ ಕಣ್ಮುಚ್ಚಿ ತಿರುಗಾಡುತ್ತಾರೆ, ಕಸದ ರಾಶಿ, ಚರಂಡಿ ನೀರಿನಿಂದ ಗಬ್ಬೆದ್ದ ವಾಸನೆ, ಕಡಿಯೋ ಹುಳದ ಹಾವಳಿ ಹೆಚ್ಚಾಗಿದೆ, ಇದರಿಂದಾಗಿ ದಿನಾಲು ಆಸ್ಪತ್ರೆಗೆ ಅಲೆದಾಡುವಂತಾಗಿದೆ, ಮುಂದೆ ಯಾವ ರೋಗ ರೂಜಿನೆಗಳು ಬರುತ್ತವೆ ಅನ್ನೋ ಭಯ ಉಂಟಾಗಿದೆ, ಮೇಲಧಿಕಾರಿಗಳು ಇತ್ತ್ ಗಮನ ಹರಿಸಿ ಸ್ವಚ್ಛತೆ ಮಾಡುವಂತೆ ಪ್ರಕಟಣೆ ಮೂಲಕ ವಿನಂತಿಸಿಕೊಂಡರು.