ರಾಜ್ಯ ಶೈಕ್ಷಣಿಕ ಮಹಾಸಮ್ಮೇಳನದ ಪೂರ್ವಭಾವಿ ಸಭೆ
ಮತ್ತು
ಮಾನ್ಯ ಶಾಸಕರ ಭೇಟಿ
ಶೈಕ್ಷಣಿಕ ಮಹಾ ಸಮ್ಮೇಳನಕ್ಕೆ ಇಂಡಿ ತಾಲೂಕ ಶಿಕ್ಷಕರ ಸಂಪೂರ್ಣ ಬೆಂಬಲ
ಇಂಡಿ: ಫೆಬ್ರುವರಿ 28 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಶೈಕ್ಷಣಿಕ ಮಹಾ ಸಮ್ಮೇಳನಕ್ಕೆ ಶಿಕ್ಷಕರ ಸಂಪೂರ್ಣ ಬೆಂಬಲ ಇದೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅಲ್ಲಾಬಕ್ಷ ವಾಲಿಕಾರ ಸರ್ ಹಾಗೂ ತಾಲೂಕ ಘಟಕ ಅಧ್ಯಕ್ಷರಾದ ಶ್ರೀ ವೈಟಿ ಪಾಟೀಲ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅಲ್ತಾಫ್ ಬೋರಾಮಣಿ, ಪ್ರಾಥಮಿಕ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಎಸ್ ವ್ಹಿ ಹರಳಯ್ಯ ಸರ್, ಜಿಲ್ಲಾ ಶಿಕ್ಷಕರ ಸಂಘದ ಹಿರಿಯ ಉಪಾಧ್ಯಕ್ಷರಾದ ಶ್ರೀ ಕಾಂತು ಇಂಡಿ ಸರ್, ಶ್ರೀ ಪಬ್ಬು ಚಾಂದಕವಟೆ ಮತ್ತು ಎಲ್ಲ ಪದಾಧಿಕಾರಿಗಳು ಸರ್ವ ನಿರ್ದೇಶಕರು ಅವರು ತಿಳಿಸಿದ್ದಾರೆ.
ಈ ಸಂಬಂಧ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಶಿಕ್ಷಕರ ಬಗ್ಗೆ ಶಿಕ್ಷಕರ ಸಂಘಟನೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಶಿಕ್ಷಕ-ಶಿಕ್ಷಕರ ಮಧ್ಯದಲ್ಲಿ ದ್ವೇಷದ ಭಾವನೆಯನ್ನು ಮೂಡಿಸುವ ಸಲುವಾಗಿ ಕೆಲ ಪಟ್ಟ ಭದ್ರ ಹಿತಾಸಕ್ತಿಗಳ ಕುತಂತ್ರವಾಗಿದೆ ಎಂದು ಆರೋಪಿಸಿದ್ದಾರಲ್ಲದೆ ಶಿಕ್ಷಕರ ಸಂಘಟನೆಯ ಒಗ್ಗಟ್ಟು ಮುರಿಯಲು ಹಗಲುಗಳೆನ್ನದೆ ನಿದ್ದೆಗಡುತ್ತಿದ್ದಾರೆ. ಅವರ ಆಸೆ ಎಂದು ಕೈಗೊಳ್ಳಲು ಸಾಧ್ಯವಿಲ್ಲ.ಶಿಕ್ಷಕರು ದಿನದಿಂದ ದಿನಕ್ಕೆ ಹೆಚ್ಚು ಒಗ್ಗಟ್ಟಾಗಿರುವ ಮೂಲಕ ಸಮ್ಮೇಳನಕ್ಕೆ ಬೆಂಬಲವನ್ನು ಸೂಚಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಶಿಕ್ಷಕರ ಸಂಘಕ್ಕೆ ತನ್ನದೇ ಆದ ಐತಿಹಾಸಿಕ ಇತಿಹಾಸವಿದೆ. ಶಿಕ್ಷಕರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಇತರ ಸಂಘಟನೆಗಳಿಗೆ ಮಾದರಿಯಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ ಪಿಎಸ್ಟಿ ಮತ್ತು ಜಿಪಿಟಿ ಭೇದಭಾವ ಇಲ್ಲದೆ ಅವರಿಗೂ ಕೂಡ ಬಡ್ತಿ ಯಲ್ಲಿ ಅವಕಾಶಗಳನ್ನು ಕೊಡಿಸುತ್ತ ಇದೆ. ಈಗಾಗಲೇ ಸಚಿವ ಸಂಪುಟದಲ್ಲಿ ಅನುಮೋದನೆಯಾಗಿದೆ.ಮುಖ್ಯ ಗುರುಗಳು ಮತ್ತು ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಗೆ ಇಬ್ಬರಿಗೆ ಅವಕಾಶಗಳನ್ನು ಕೊಡಿಸಿದೆ.ನಮ್ಮ ಮಧ್ಯದಲ್ಲಿ ಎಷ್ಟೇ ಕೆಟ್ಟ ಸಂದೇಶಗಳ ಸಾರಿದರೂ ಶಿಕ್ಷಕರ ಸಂಘಟನೆ ಅನನ್ಯವಾಗಿದೆ ಎಂದು ತಿಳಿಸಿದರು.
ಸಂಘದ ಸದುದ್ದೇಶ ಸಂಘದ ತತ್ವ ಸಂಘದ ಹೋರಾಟಗಳಿಗೆ ಹಿಂದಿನಿಂದಲೂ ಶಿಕ್ಷಕರು ಬೆನ್ನೆಲುಬಾಗಿ ನಿಂತು ಸ್ವಾಭಿಮಾನದಿಂದ ಇದನ್ನು ಬೆಂಬಲಿಸುತ್ತಿದ್ದಾರೆ ಮತ್ತು ಸಹಕಾರ ನೀಡುತ್ತಿದ್ದಾರೆ. ಅದರಂತೆ ಶಿಕ್ಷಕರ ಮಹಾಸಮ್ಮೇಳನಕ್ಕೆ ಐದು ನೂರು ರೂಪಾಯಿಗಳನ್ನು ಶಿಕ್ಷಕರು ಸ್ವಯಂ ಪ್ರೇರಣೆಯಿಂದ ಕೊಡುತ್ತಿದ್ದಾರೆ. ಅಲ್ಲದೆ ಫೆಬ್ರುವರಿ 28ರಂದು ನಡೆಯುವ ಶೈಕ್ಷಣಿಕ ಮಹಾ ಸಮ್ಮೇಳನಕ್ಕೆ ಶಿಕ್ಷಕರ ಸಾಗರವೇ ಹರಿದು ಬರಲಿದೆ. ಇದೊಂದು ಐತಿಹಾಸಿಕ ಶೈಕ್ಷಣಿಕ ಸಮಾವೇಶವಾಗಿ ಚರಿತ್ರೆಯ ಪುಟದಲ್ಲಿ ಸೇರಲಿದೆ. ಹಾಗಾಗಿ ಪ್ರತಿಯೊಬ್ಬ ಶಿಕ್ಷಕರು ಇದಕ್ಕೆ ಬೆಂಬಲಿಸಿ ನೀವು ಬನ್ನಿ ನಿಮ್ಮ ಕುಟುಂಬದವರನ್ನು ಕರೆತನ್ನಿ ಎಂದು ಶಿಕ್ಷಕ ಬಂಧುಗಳಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅಲ್ಲಾಬಕ್ಷ ವಾಲಿಕಾರ ಸರ್ ಪೂರ್ವ ಭಾವಿ ಸಭೆಯಲ್ಲಿ ಸಂಘಟನೆಯ ಎಲ್ಲಾ ಪದಾಧಿಕಾರಿಗಳಿಗೆ ಹೇಳಿದರು.