ಅರಣ್ಯ ಇಲಾಖೆಯಿಂದ ರೈತರಿಗೆ ಸಸಿ ವಿತರಣೆ
ಇಂಡಿ
ತಾಲೂಕಿನ ಅರಣ್ಯ ಇಲಾಖೆಯಿಂದ ರೈತರಿಗೆ ಸಸಿ ಪ್ರಾದೇಶಿಕ ವಲಯ ಮತ್ತು ಸಾಮಾಜಿಕ ವಲಯದಿಂದ ವಿತರಣೆ ಮಾಡಲಾಯಿತು. ಒಬ್ಬ ರೈತನಿಗೆ ಒಂದು ಎಕರೆ ಜಮೀನಿಗೆ ೧೬೦ ಸಸಿ ವಿತರಣೆ ಮಾಡಲಾಯಿತು.
ರೈತರ ಆಧಾರ ಕಾರ್ಡು ಮತ್ತು ಜಮೀನು ಉತಾರೆ ಆಧಾರದ ಮೇಲೆ ನೀಡಲಾಗಿದೆ.
ಪ್ರಾದೇಶಿಕ ವಲಯದಲ್ಲಿ ೮೧೨ ಮಹಾಗನಿ, ಹೆಬ್ಬೆವು, ಸೀತಾಫಲ, ಶ್ರೀಗಂಧ ರಕ್ತ ಚಂದನ ಪ್ರತಿ ಅಗಿಗೆ ರೂ ೬ ರಂತೆ ಮತ್ತು ೬೯ ನಿಂಬೆ, ನುಗ್ಗೆ, ಸೀತಾಫಲ, ಬಾರೆ ಸಾಗವಾನಿ ಪೇರು ಅಗಿಗಳಿದ್ದು ಅವು ಪ್ರತಿ ಒಂದಕ್ಕೆ ರೂ ಮೂರು ರೂ ದಂತೆ ವಿತರಿಸಲಾಯಿತು.
ಸಾಮಾಜಿಕ ವಲಯದಲ್ಲಿ ೮೧೨ ಪ್ರತಿಯೊಂದಕ್ಕೆ ರೂ ೬ ರಂತೆ ನಿಂಬೆ, ನುಗ್ಗೆ, ಸೀತಾಫಲ, ಬಾರೆ ಶ್ರೀಗಂಧ ರಕ್ತಚಂದನ ಮತ್ತು ೬೯ ಪ್ರತಿಯೊಂದಕ್ಕೆ ರೂ ಮೂರರಂತೆ ನಿಂಬೆ ನುಗ್ಗೆ ಸೀತಾಫಲ, ಬಾರೆ ಶ್ರೀಗಂಧ ರಕ್ತಚಂದನ ಸಸಿ ನೀಡಿದರು.
ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಎಸ್.ಜಿ.ಸಂಗಾಲಕ ಮತ್ತು ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಮಂಜುನಾಥ ಧುಳೆ , ಡಿಆರಎಫ್ ಓ ಎಚ್.ಎಂ.ಮಲ್ಲಿ, ಹಣಮಂತ ಲೋಣಿ, ಪ್ರವೀಣ ಹಚ್ಯಾಳಕರ, ವಿಕಾಸ ವಿಭೂತಿ, ಅನೀಲ ಭಟ ಗಜಾನನ ತಳವಾರ, ಸಸಿ ವಿತರಿಸಿದರು.
https://youtu.be/GTABkrPjSoY?si=Eno85rqsoe_AlhXg