ವ್ಹಿಬಿಜಿ, ರಾಮ್ ಜಿ ಯೋಜನೆಯಡಿ ಬರಗಾಲದಲ್ಲಿ ಗ್ರಾಮದಲ್ಲೇ ಉದ್ಯೋಗ ಮಹದೇವಪ್ಪ ಏವುರ.
ಝಳಕಿ : ಇಂಡಿ ತಾಲೂಕಿನ ಝಳಕಿ ಗ್ರಾಮ ಪಂಚಾಯತ ಸಭಾ ಭವನದಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಆ್ಯಂಡ್ ಅಜೀವಿಕಾ ಮಿಷನ್(ಗ್ರಾಮೀಣ) ಕಾಯ್ದೆ 2025- 26ನೇ ಸಾಲಿನ ವ್ಹಿ ಬಿಜಿ, ರಾಮಜಿ ಯೋಜನೆಯ ಐಇಸಿ ಚಟುವಟಿಕೆ ಅಡಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಹಾಗೂ ಕಾಯಕ ಬಂಧುಗಳಿಗೆ ಮತ್ತು ಅಕುಶಲ ಕೂಲಿಕಾರರಿಗೆ ಜಾಗೃತಿ ಅಭಿಯಾನ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಹದೇವಪ್ಪ ಏವೂರ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅವರು ತಾಲೂಕಿನಲ್ಲಿ ಬರಗಾಲದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಗ್ರಾಮೀಣ ಕೂಲಿ ಕಾರ್ಮಿಕರು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುವ ಅಗತ್ಯವಿಲ್ಲ.
ಗ್ರಾಮ ಪಂಚಾಯಿತಿಗಳಲ್ಲಿ ಜಾರಿಯಲ್ಲಿರುವ ವಿಬಿ-ಜಿ ರಾಮ್ಜಿ ಯೋಜನೆ ಅಡಿಯಲ್ಲಿ ಸ್ಥಳೀಯ ಮಟ್ಟದಲ್ಲೇ ಉದ್ಯೋಗಾವಕಾಶ ಕಲ್ಪಿಸಲಾಗಿದ್ದು, ಆಸಕ್ತರು ಗ್ರಾಮ ಪಂಚಾಯಿತಿ ಕಚೇರಿಯನ್ನು ಸಂಪರ್ಕಿಸಿ ಯೋಜನೆಯ ಸೌಲಭ್ಯ ಪಡೆಯಬೇಕು ಎಂದು ತಿಳಿಸಿದರು.
ಅದೇ ರೀತಿ ಯೋಜನೆಯಡಿ ಕೇವಲ ಉದ್ಯೋಗವಷ್ಟೇ ಅಲ್ಲದೆ ಗ್ರಾಮೀಣ ಭಾಗದಲ್ಲಿ ಬಾಳಿಕೆ ಬರುವ ಮೂಲಸೌಕರ್ಯಗಳ ನಿರ್ಮಾಣಕ್ಕೂ ಆದ್ಯತೆ ನೀಡಲಾಗಿದೆ. ಫಲಾನುಭವಿಗಳು ತಮ್ಮ ಜೀವಿತಾವಧಿಯಲ್ಲಿ 5 ಲಕ್ಷ ರೂ.ವರೆಗೆ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ. ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಅನುಮೋದಿತ ಕಾಮಗಾರಿಗಳಲ್ಲಿ ಕೂಲಿಕಾರರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಯೋಜನೆಯಡಿ ಜಾನುವಾರು ಶೆಡ್, ಎರೆಹುಳು ತೊಟ್ಟಿ, ತೋಟಗಾರಿಕೆ ವಿಸ್ತರಣೆ, ತೆರೆದ ಬಾವಿ, ಕೃಷಿ ಹೊಂಡ (ಫಾರ್ಮ್ ಪಾಂಡ್) ಸೇರಿದಂತೆ ವಿವಿಧ ವೈಯಕ್ತಿಕ ಕಾಮಗಾರಿಗಳನ್ನು ಒತ್ತು 318 ಕಾಮಗರಿಗಳನ್ನು ಕೈಗೊಳ್ಳಬಹುದು, ಸಮುದಾಯ ಕಾಮಗಾರಿಗಳಲ್ಲಿ ಬರ ನಿಯಂತ್ರಣ ಕಾಮಗಾರಿ, ಮಣ್ಣಿನ ಚೆಕ್ ಡ್ಯಾಂ, ಮುಖ್ಯ ಕಾಲುವೆ, ಪ್ರವಾಹ ತಿರುವು ಚರಂಡಿ, ಜಲ ಕೊಯ್ಲು ಹೊಂಡ, ಸಮುದಾಯ ಮೆಟ್ಟಿಲು ಬಾವಿ ಪುನಶ್ಚೇತನ, ನೀರಾವರಿ ಬಾವಿ, ಸರ್ಕಾರಿ ಶಾಲೆಗಳ ಕಂಪೌಂಡ್ ಗೋಡೆ, ಅಡುಗೆ ಕೋಣೆ, ಶೌಚಾಲಯ ನಿರ್ಮಾಣ ಹಾಗೂ ಆಟದ ಮೈದಾನ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ಉದ್ಯೋಗ ಪಡೆಯುವ ಅವಕಾಶವಿದೆ ಎಂದು ಮಾಹಿತಿ ನೀಡಿದರು.
ಸಹಾಯಕ ನಿರ್ದೇಶಕರು ಸಂಜಯ ಖಡೆಗೆಕರ್ ಮಾತನಾಡಿ ಜುಲೈ -1 ರಿಂದ ನರೇಗಾ ಯೋಜನೆ ಬದಲಾಗಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕ ಮೀಷನ್ ಗ್ರಾಮೀಣ ಕಾಯ್ದೆ 2025 ವ್ಹಿಬಿ-ಜಿ, ರಾಮಜಿ ಯೋಜನೆ ಜಾರಿಗೆ ಬಂದಿರುವ ಕುರಿತು ತಿಳಿಸಿದರು,
ಹೊಸ ಕೂಲಿ ದರ 370/- ರೂ ರಿಂದ 382/- ರೂ ಗೆ ಹೆಚ್ಚಿಸಲಾಗಿರುವ ಕುರಿತು ಹಾಗೂ ಮಾನವ ದಿನಗಳನ್ನು 100 ರಿಂದ 125ಕ್ಕೆ ಹೆಚ್ಚಿಸಲಾಗಿರುವ ಬಗ್ಗೆ ಕರ ಪತ್ರ ಹಂಚಿಕೆ ಮಾಡಿ, ಒಂದು ಕುಟುಂಬವು ಒಂದು ಆರ್ಥಿಕ ವರ್ಷದಲ್ಲಿ 125 ದಿನಗಳು ಕೆಲಸ ನಿರ್ವಹಿಸಿದಲ್ಲಿ ರೂ. 47750/- ಗಳು ಸಿಗಲಿದೆ ಎಂದು ಕೂಲಿಕಾರರಿಗೆ ಯೋಜನೆಯ ಮಾಹಿತಿಯನ್ನು ತಿಳಿಸಿ ಕೆಲಸಕ್ಕೆ ಬರುವಂತೆ ಪ್ರೇರೇಪಿಸಿದರು.
ಗ್ರಾಮೀಣ ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕುಟುಂಬಗಳಿಗೆ ಮೂಲಕ ವಲಸೆ ಹೋಗುವ ಪರಿಸ್ಥಿತಿಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ, ನಿರಂತರ ಕೂಲಿ ಉದ್ಯೋಗ ದೊರೆಯುವುದರಿಂದ ಕುಟುಂಬಗಳ ಆದಾಯ ಹೆಚ್ಚಳವಾಗಿ, ಜೀವನ ನಿರ್ವಹಣೆಗೆ ಆರ್ಥಿಕ ಭದ್ರತೆ ಒದಗುತ್ತದೆ.
ವಿಬಿ-ಜಿ ರಾಮ್ ಜಿ ಯೋಜನೆಯು ಗ್ರಾಮೀಣ ಜನರಿಗೆ ಉದ್ಯೋಗ ಭದ್ರತೆ, ಆದಾಯ ಹೆಚ್ಚಳ, ಕೃಷಿ ಅಭಿವೃದ್ಧಿ, ಮೂಲಸೌಕರ್ಯ ಸುಧಾರಣೆ ಹಾಗೂ ಶಾಶ್ವತ ಜೀವನೋಪಾಯದ ಅವಕಾಶಗಳನ್ನು ಕಲ್ಪಿಸುವ ಮೂಲಕ ಗ್ರಾಮೀಣ ಜೀವನಮಟ್ಟ ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ವಿಬಿ-ಜಿ ರಾಮ್ ಜಿ ಯೋಜನೆಯ ಉದ್ದೇಶವು ಕೇವಲ ಉದ್ಯೋಗ ಒದಗಿಸುವುದಕ್ಕೆ ಸೀಮಿತವಾಗದೆ, ಗ್ರಾಮೀಣ ಪ್ರದೇಶಗಳಲ್ಲಿ ಶಾಶ್ವತ ಅಭಿವೃದ್ಧಿಗೆ ಪೂರಕವಾದ ಆಸ್ತಿಗಳ ನಿರ್ಮಾಣ ಹಾಗೂ ಗ್ರಾಮೀಣ ಜೀವನಮಟ್ಟ ಸುಧಾರಿಸುವುದಾಗಿದೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಬಹುದು ಅಥವಾ 82775 06000 ಉಚಿತ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಮಾಹಿತಿ ಶಿಕ್ಷಣ ಹಾಗೂ ಸಂವಹನ ಸಂಯೋಜಕರು ರಾಮಗೌಡ ಸರಬಡಗಿ ರವರು ತಿಳಿಸಿದರು.
ಝಳಕಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಲಕ್ಷ್ಮಣ ಪಾಟೀಲ ಸರ್ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು.
ಈ ಸಮಯದಲ್ಲಿ ಸಣ್ಣಪ್ಪ ತಳವಾರ, ಅಪ್ಪಾಸಾಹೇಬ ಬನಸೋಡೇ, ಮಧುಕರ ಕೊಡತೇ, ಸಿಬ್ಬಂದಿ ಲಾಲಸಾಬ ಮುಲ್ಲಾ, ಮುದಕಣ್ಣ ತಳವಾರ, ಗ್ರಾಮದ ಮುಖಂಡರು, ಸ್ವ ಸಹಾಯ ಸಂಘದ ಸದಸ್ಯರು , ಕಾಯಕ ಬಂಧುಗಳು, ಗ್ರಾಮ ಕಾಯಕ ಮಿತ್ರ , ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.