ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ
ಇಂಡಿ: ತಾಲೂಕ ಸರಕಾರಿ ಪದವೀಧರ ಪ್ರಾಥಮಿಕ (6-8) ಶಿಕ್ಷಕರ ಸಹಕಾರ ಸಂಘ ನಿ, ಇಂಡಿ ಅಸ್ತಿತ್ವಕ್ಕೆ ಬಂದಿದ್ದು, ನೂತನ ಅಧ್ಯಕ್ಷರಾಗಿ ನಗರದ ಕೆಬಿಎಂಪಿಎಸ್ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಶಶಿಕುಮಾರ ವಡ್ಡರ ಹಾಗೂ ಉಪಾಧ್ಯಕ್ಷರಾಗಿ ಚವಡಿಹಾಳದ ಎಚ್ ಪಿ ಎಸ್ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ನಿಂಗಪ್ಪ ಪುಠಾಣಿ, ಕಾರ್ಯದರ್ಶಿಯಾಗಿ ಬೆನಕನಹಳ್ಳಿಯ ಎಚ್ ಪಿ ಎಸ್ ಶಾಲೆಯ ಇಂಗ್ಲೀಷ್ ಶಿಕ್ಷಕ ಮಹಾದೇವ ಗಬಸಾವಳಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹಾಗೂ ಚುನಾವಣಾ ಅಧಿಕಾರಿಗಳಾದ ಸಂತೋಷ ಸದ್ದಲಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷ ಶಶಿಕುಮಾರ ವಡ್ಡರ ಮಾತನಾಡಿ, ಇಂಡಿ ತಾಲೂಕ ಸರಕಾರಿ ಪದವೀಧರ ಪ್ರಾಥಮಿಕ (6-8) ಶಿಕ್ಷಕರ ಸಹಕಾರ ಸಂಘ ನಿಯಮಿತವು ಇಡೀ ರಾಜ್ಯದಲ್ಲಿಯೇ ಮೊಟ್ಟ ಮೊದಲ ಪದವೀಧರ ಪ್ರಾಥಮಿಕ (6-8) ಶಿಕ್ಷಕರ ಸಹಕಾರ ಸಂಘವಾಗಿ ನಮ್ಮ ಇಂಡಿ ತಾಲೂಕ ಮೂಲಕ ಅಸ್ತಿತ್ವಕ್ಕೆ ಬಂದಿದ್ದು, ಸಂತಸ ತಂದಿದೆ. ಪದವೀಧರ ಪ್ರಾಥಮಿಕ (6-8) ಶಿಕ್ಷಕರ ಶ್ರೇಯೋಭಿವೃದ್ಧಿಗೆ ನಮ್ಮ ಸಂಘವು ಶ್ರಮಿಸುತ್ತದೆ. ಅವಿರೋಧವಾಗಿ ಆಯ್ಕೆ ಮಾಡಿದ ತಾಲೂಕಿನ ಸಮಸ್ತ ಪದವೀಧರ ಪ್ರಾಥಮಿಕ (6-8) ಶಿಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿ, ಎಲ್ಲರ ಸಹಕಾರದಿಂದ ಸಂಘದ ಬೆಳವಣಿಗೆಗೆ ಹಗಲಿರುಳು ಶ್ರಮಿಸುತ್ತೇನೆ ಎಂದು ಹೇಳಿದರು.
ಸಾಮಾನ್ಯ ವಿಭಾಗದ ನಿರ್ದೇಶಕರಾಗಿ ಚಂದ್ರಶೇಖರ ಹಕಾರಿ, ಸಂತೋಷಕುಮಾರ ಬಂಡೆ, ಹನಮಂತ್ರಾಯ ಪೂಜಾರಿ, ಪ್ರಭುಲಿಂಗ ಕವಟಗಿ, ಹನಮಂತ್ರಾಯ ಇಂಗಳಗಿ, ವಿಜಯಕುಮಾರ ಬೇನೂರ, ರಾಜಕುಮಾರ ಬೆಣ್ಣೆಸೂರ ಮತ್ತು ಮಹಿಳಾ ನಿರ್ದೇಶಕರಾಗಿ ರೇಣುಕಾ ಚೌಧರಿ, ಕವಿತಾ ವಗ್ಯಾನವರ, ಹಿಂದುಳಿದ ವರ್ಗ-ಅ ವಿಭಾಗದ ನಿರ್ದೇಶಕರಾಗಿ ಶಂಕರಲಿಂಗ ಕೋಳೆಕರ, ಪರಿಶಿಷ್ಟ ಪಂಗಡ ವಿಭಾಗದ ನಿರ್ದೇಶಕರಾಗಿ ಪುಂಡಲೀಕ ಲೋಣಿ, ಹಿಂದುಳಿದ ವರ್ಗ-ಬ ವಿಭಾಗದ ನಿರ್ದೇಶಕರಾಗಿ ನಿಂಗಪ್ಪ ಪುಠಾಣಿ, ಪರಿಶಿಷ್ಟ ಜಾತಿ ವಿಭಾಗದ ನಿರ್ದೇಶಕರಾಗಿ ಶಶಿಕುಮಾರ ವಡ್ಡರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಅವರನ್ನು ಸನ್ಮಾನಿಸಲಾಯಿತು.