ಸಮಾನತೆ, ಹೋರಾಡಿದ ಏಕೈಕ ವ್ಯಕ್ತಿ ಬಾಬಾಸಾಹೇಬ ಅಂಬೇಡ್ಕರ್, ನಿತೀಶ ತೋರವಿ.
ಝಳಕಿ : ದೇಶಕ್ಕಾಗಿ ಹೋರಾಡಿದ ಕ್ರಾಂತಿಕಾರಿಗಳು, ವೀರರು, ಸಾಹಿಗಳನ್ನು ನಾವು ಕಂಡಿದ್ದೇವೆ ಅಂತಹ ಮಹಾನ ವ್ಯಕ್ತಿಗಳಿಗು ಪ್ರೇರಣೆ ನಮ್ಮ ಬಾಬಾಸಾಹೇಬ ಅಂಬೇಡ್ಕರರು ಎಂದು ಬಿ. ಎಸ್. ಪಿ. ವಿಜಯಪುರ ಜಿಲ್ಲಾ ಅಧ್ಯಕ್ಷರು ನಿತೀಶ ತೋರವಿ ಸಂತೋಷ ವ್ಯಕ್ತಪಡಿಸಿದರು.
ಝಳಕಿ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಯುವನೇತಾರ ರಾಜಕುಮಾರ ಬನಸೋಡೆ ನೇತೃತ್ವದಲ್ಲಿ ಡಾ!! ಬಾಬಾಸಾಹೇಬರ 135ನೇ ಜಯಂತೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದ ಸ್ವತಂತ್ರಕ್ಕಾಗಿ ಎಲ್ಲರು ಹೋರಾಡಿದ್ದಾರೆ, ಆದರೆ ಸಮಾನತೆ, ಏಕತೆಗಾಗಿ ಹೋರಾಡಿದವರು ಬಾಬಾಸಾಹೇಬರ ಮಾತ್ರ, ಮೇಲ್ವರ್ಗದ ಜನರು ಹಿಂದುಳಿದವರನ್ನು ಹೊಡೆದು ಅಳುವ ನೀತಿಯನ್ನು ಹೋಗಲಾಡಿಸಿ, ದೇಶಕ್ಕೆ ಸಂವಿಧಾನ ರಚಿಸಿ ಎಲ್ಲರು ಒಂದು ಅನ್ನೋ ಭಾವನೆ ಮೂಡಿಸಿದರು ಇಂತಹ ವ್ಯಕ್ತಿಯನ್ನು ನಾವು ಸದಾ ಚಿರಋಣಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಗ್ರಾ. ಪಂ ಅಧ್ಯಕ್ಷರು ಸಣ್ಣಪ್ಪ ತಳವಾರ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರು ರಾಘವೇಂದ್ರ ಕಾಪಸೆ, ಬಿ. ಎಸ್. ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ ಪೂಜಾರಿ, ಭೀಮಾಶಂಕರ್ ಝಳಕಿ, ಅಶೋಕ್ ಪಾಟೀಲ, ಸಿದ್ದರಾಮ ಬನಸೋಡೆ, ಪರಸಪ್ಪ ಚಲವಾದಿ ಯಲ್ಲಪ್ಪ ಬನಸೋಡೆ, ರಾಜಕುಮಾರ ಗಾಯಕವಾಡ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.