ಇಂಡಿ: ಕೇಂದ್ರ ಸರಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಗುರುವಾರರಂದು ನಗರದ ಬಸವೇಶ್ವರ ವೃತ್ತದಲ್ಲಿ ಅಲ್ಲಿ ಸುಮಾರು ಎರಡು ಗಂಟೆಗಳ ಕಾಲ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಶಿರಸ್ಥೇದಾರ ರಮೇಶ ಮೂಗಿ ಆಗಮಿಸಿ ಮನವಿ ಪತ್ರ ಸ್ವಿಕರಿಸಿದರು.
ಪ್ರತಿಭಟನೆಯಲ್ಲಿ ಇಂಡಿ ಹಾಗೂ ಚಡಚಣ ತಾಲ್ಲೂಕಿನ ವಿವಿಧ ಸಂಘಟನೆಗಳ ಕಾರ್ಮಿಕರು ಇಂಡಿ ತಾಲ್ಲೂಕಿನ ಸಿಐಟಿಯು ಅಧ್ಯಕ್ಷರಾದ ಭಾರತಿ ವಾಲಿ ಹಾಗೂ ಚಡಚಣ ತಾಲೂಕು ಸಿಐಟಿಯು ಅಧ್ಯಕ್ಷರಾದ ಅಶ್ವಿನಿ ತಳವಾರ ಅವರ ನೇತೃತ್ವ ನಡೆದ ಪ್ರತಿಭಟನಡಯು ನಗರದ ಪ್ರವಾಸಿ ಮಂದಿರದಿಂದ ಸಾವಿರಾರು ಕಾರ್ಮಿಕರು ಸೇರಿ ಪ್ರತಿಭಟನೆ ಮಾಡುತ್ತ ಹೊರಟು ಬಸವೇಶ್ವರ ವೃತ್ತದ ಮೂಲಕ ಮಾಹಾವೀರ ವೃತ ಅಂಬೇಡ್ಕರ್ ವೃತ್ತ ಮೂಲಕ ಹಾದು ಮರಳಿ ಬಸವೇಶ್ವರ ವೃತ್ತಕ್ಕೆ ಆಗಮಿಸಿದರು.
ಇಂಡಿ ತಾಲೂಕು ನೌಕರರ ಸಂಘದ ಅಧ್ಯಕ್ಷರಾದ ಭಾರತಿ ವಾಲಿ ಮಾತನಾಡಿ ದುಡಿಯುವ ಕಾರ್ಮಿಕ ಹಕ್ಕು ಹಾಗೂ ಸರ್ವಜನಿಕ ಉದ್ಯಮಗಳನ್ನು ಉಳಿಸಲು, ರೈತರ ನ್ಯಾಯಬದ್ಧ ಬೇಡಿಕೆಗಳನ್ನು ಎತ್ತಿ ಹಿಡಿಯಲು ಹೋರಾಟ ಕೈಗೊಂಡಿದೆವೆ. ನಮ್ಮ ನ್ಯಾಯುತ ಹೋರಾಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಹೇಳಿದರು.
ಚಡಚಣ ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷ ಅಶ್ವಿನಿ ತಳವಾರ ಅವರು ಮಾತನಾಡಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಾರ್ಮಿಕರ ಸಂಘಗಳನ್ನು ನಿಯಂತ್ರಿಸಲು ಹಾಗೂ ಬಂಡವಾಳದ ದಾಳಿಯ ವಿರೋಧಿಸಿ ಕರ್ಮಿಕ ರ್ಗ ಚಳವಳಿಯನ್ನು ನಿಶ್ಯಕ್ತಗೊಳಿಸಲು ಉದ್ದೇಶಿಸಿದೆ. ಮನರೇಗಾ ಯೋಜನೆಯನ್ನು ವಿಬಿ ಜಿ ರಾಮ್ ಜಿ ಎಂದು ಬದಲಾಯಿಸಿ ಉದ್ಯೋಗ ಖಾತ್ರಿಯ ಹಕ್ಕನ್ನೇ ಕಸಿದುಕೊಂಡು ಹಳ್ಳಿಯ ಬಡಜನರ ಆಸರೆಯನ್ನು ಕಿತ್ತುಕೊಂಡಿದೆ ಎಂದರು.
ಕರ್ನಾಟಕ ರೈತ ಪ್ರಾಂತ ಸಂಘದ ಅಧ್ಯಕ್ಷ ಭೀಮರಾಯ ಪೂಜಾರಿ, ಬಿಸಿ ಊಟ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕಾಳಮ್ಮ ಬಡಿಗೇರ ಹಾಗೂ ಕೆಎಸ್ಸರ್ಟಿಸಿ ನೌಕರರ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಎಸ್ ಡಿ ಪಟ್ಟಣಶೆಟ್ಟಿ ಸೇರಿದಂತೆ ಅನೇಕರು ಮಾತನಾಡಿದರು.
ಈ ಸಂಧರ್ಭದಲ್ಲಿ ಇಂಡಿ ತಾಲೂಕು ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಗೀರಿಜಾ ಸಕ್ಕರಿ, ಚಡಚಣ ತಾಲೂಕು ಬಿಸಿ ಊಟ ನೌಕರರ ಸಂಘದ ಅಧ್ಯಕ್ಷ ಮಾಹಾನಂದ ದೊತರೇ,ಅಂಗನವಾಡಿ ನೌಕರರ ಸಂಘದ ಪ್ರಧಾನ ಕರ್ಯರ್ಶಿ ಶೋಭಾ ಕಬಾಡೆ, ಶೆಂಕ್ರೇಮ್ಮ ಪುಟಾಣಿ, ಸುಜಾತಾ ಬಿರಾದಾರ, ಬೌರಮ್ಮ ಪಾಟೀಲ, ಶೋಭಾ ಹೋಟಗಾರ, ಶಾಂತಾಬಾಯಿ ಜಾಮಗೊಂಡ, ರೇಣುಕಾ ಪೂಜಾರಿ, ಎಮ್ ಎಲ್ ಚೌದರಿ, ಲಾಲಮ್ಮಮದ ಶೇಖ್, ಬಸವರಾಜ ಪಾಟೀಲ, ಸಿದ್ದು ಪೂಜಾರಿ, ಶಿವಾನಂದ ಹಿರೇಮಠ, ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕೇಲ ಕಾಲ ರಸ್ತೆ ತಡೆದು ಪ್ರತಿಭಟಿಸಿದರು. ಮುಂಜಾಗ್ರಾತ ಕ್ರಮವಾಗಿ ಇಂಡಿ ನಗರ ಪೊಲೀಸ್ ಠಾಣೆ ಪಿಎಸ್ಐ ಪ್ರದೀಪ್ ಬೀಸೆ ಅವರ ನೇತೃತ್ವದಲ್ಲಿ ವ್ಯಾಪಕ ಪೋಲಿಸ್ ಬಂದು ಬಸ್ತ ಕೈಗೊಳ್ಳಲಾಯಿತು.
ಇಂಡಿ ಕಂದಾಯ ಇಲಾಖೆಯ ಶಿರಸ್ಥೇದಾರ ರಮೇಶ ಮೋಗಿ ಆಗಮಿಸಿ ಮನವಿ ಪತ್ರ ಸ್ವಿಕರಿಸಿದರು.