ಇಂಡಿ ನಗರದಲ್ಲಿ ಅಕ್ರಮ ಅಕ್ಕಿ ಸಾಗಣೆ ಪತ್ತೆ – ಪೊಲೀಸ್ ಮತ್ತು ಆಹಾರ ಇಲಾಖೆಯ ಜಂಟಿ ದಾಳಿ, ಲಕ್ಷಾಂತರ ಮೌಲ್ಯದ ಅಕ್ಕಿ ಜಪ್ತಿ
ಇಂಡಿ: ಇಂಡಿ ನಗರದಲ್ಲಿ ಅಕ್ರಮವಾಗಿ ಅಕ್ಕಿ ಸಾಗಣೆ ಮಾಡುತ್ತಿದ್ದ ಎರಡು ವಾಹನಗಳ ಮೇಲೆ ಇಂಡಿ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ನಡೆಸಿದ ಜಂಟಿ ದಾಳಿಯಲ್ಲಿ ಸಾವಿರಾರು ಕಿಲೋ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ.
ಮೊದಲ ಪ್ರಕರಣದಲ್ಲಿ, ಇಂಡಿ–ಕೆರೆಯ ಹತ್ತಿರ ರಸ್ತೆಯ ಮೇಲೆ MH13/AA/3745 ಸಂಖ್ಯೆಯ BharatBenz ವಾಹನವನ್ನು ತಡೆದು ಪರಿಶೀಲಿಸಿದ ವೇಳೆ 94 ಚೀಲಗಳಲ್ಲಿ ಸುಮಾರು 4,270 ಕೆಜಿ ಅಕ್ಕಿ ಪತ್ತೆಯಾಗಿದೆ. ಇದರ ಮೌಲ್ಯ ರೂ. 1,19,560 ಎಂದು ಅಂದಾಜಿಸಲಾಗಿದೆ. ಈ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಗೆ ಮಾರುಕಟ್ಟೆಗೆ ಮಾರಾಟ ಮಾಡಲು ಸಾಗಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿ ವೇಳೆ ವಾಹನದ ಚಾಲಕ ಪರಾರಿಯಾಗಿದ್ದಾನೆ. ಪೊಲೀಸರು ಅಕ್ಕಿ ಹಾಗೂ ವಾಹನವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ KA28/AA/4299 ಸಂಖ್ಯೆಯ Ashok Leyland ಕಂಪನಿಯ ವಾಹನವನ್ನು ಚಿಕ್ಕಬೇನೂರು ರಸ್ತೆಯಲ್ಲಿ ತಡೆದು ಪರಿಶೀಲಿಸಿದಾಗ, ಸುಮಾರು 1,510 ಕೆಜಿ ಅಕ್ಕಿ ಪತ್ತೆಯಾಗಿದೆ. ಇದರ ಮೌಲ್ಯ ರೂ. 42,280 ಎಂದು ತಿಳಿದುಬಂದಿದೆ. ಈ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಗೆ ಮಾರಾಟಕ್ಕೆ ಸಾಗಿಸಲಾಗುತ್ತಿತ್ತು ಎಂದು ಮಾಹಿತಿ ಲಭ್ಯವಾಗಿದೆ. ಈ ದಾಳಿ ವೇಳೆ ವಾಹನದ ಚಾಲಕ ಶಕೀಲ ಅಕ್ಬರ್ ಅಲಿ ನದಾಫ ನನ್ನು ಪೊಲೀಸರು ಬಂಧಿಸಿದ್ದಾರೆ.
ಈ ದಾಳಿಯನ್ನು ಇಂಡಿ ಶಹರ ಪೊಲೀಸ ಠಾಣೆ ಎಎಸ್ ಐ ಪಿ.ಅರವತ್ತಿ, ಆಹಾರ ನಿರೀಕ್ಷಕ ಪರಮಾನಂದ ಹೂಗಾರ, ಜೆಎಸ್ ನೀಲೂರೆ, ಎಸ್ ಎಸ್ ಕೊರಸಗೋವ್, ನವಾಜ್ ಬಿರಾದಾರ್, ಪರಶುರಾಮ ಅತನೂರ ಅವರ ನೇತೃತ್ವದಲ್ಲಿ ನಡೆಸಲಾಗಿದ್ದು.