ಝಳಕಿ : ಹಲಸಂಗಿ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ ವರೆಗು ರಸ್ತೆ ಡಾಂಬರಿಕರಣ ಭೂಮಿ ಪೂಜೆ.
ಝಳಕಿ : ರಸ್ತೆ ಡಾಂಬರಿಕರಣ, ಗ್ರಾಮದಲ್ಲಿನ ಜೆಮೀನುಗಳ ರಸ್ತೆ ಸುಧಾರಣೆ ಇನ್ನು ಹಲವಾರು ಕಾಮಗರಿಗಳನ್ನು ನಡೆಸಿದ್ದು, ಸರ್ಕಾರ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಿದೆ, ಇದು ನಮ್ಮ ಸರ್ಕಾರದ ಹೆಮ್ಮೆಯ ವಿಷಯ ಎಂದು ನಾಗಠಾಣ ಶಾಸಕರು ವಿಠ್ಠಲ್ ಕಟಕದೊಂಡ ಮಾತನಾಡಿದರು.
ಚಡಚಣ ತಾಲೂಕಿನ ಹಲಸಂಗಿ ಗ್ರಾಮದಿಂದ ಏಳಗಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 52ರ ವರೆಗೂ 3 ಕಿ. ಮೀ., 2 ಕೋಟಿ ಅನುದಾನದಡಿಯಲ್ಲಿ, ಡಾಂಬರಿಕರಣ ಕಾಮಗಾರಿಯನ್ನು ನಾಗಠಾಣ ಶಾಸಕರು ಭೂಮಿ ಪೂಜೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ಯಾರಂಟಿಗಳ ಮಧ್ಯ ತನ್ನ ಶಕ್ತಿ ಪ್ರದರ್ಶನ ಮಾಡೋದು ಕಷ್ಟದ ವಿಷಯ, ಆದರು ನಮ್ಮ ಮುಖ್ಯ ಮಂತ್ರಿಗಳು ಸಿದ್ದರಾಮಯ್ಯ ಮತ್ತು ಉಪ ಮುಖ್ಯ ಮಂತ್ರಿಗಳು ಡಿ. ಕೆ. ಶಿವುಕುಮಾರ ರವರು ಯಾರಿಗೂ ಅಂಜದೆ, ಎದೆಗೆ ಎದೇಕೋಟ್ಟು ಎಲ್ಲ ಯೋಜನೆಗಳಿಗೆ ಚಾಲನೆ,ಸಹಕಾರ ನೀಡಿದ್ದು ಬಹು ಸಂತೋಷದ ವಿಷಯ ಎಂದರು.
ಈ ಸಂದರ್ಭದಲ್ಲಿ ತದ್ದೇವಾಡಿ ಮಹಾಂತೇಶ್ ಹಿರೇಮಠ ಗುರುಗಳು, ದಯಾನಂದ ಕೋಳಿ, ಲಕ್ಮಿಕಾಂತ ಏಳಗಿ ಮಾತನಾಡಿ ತಮ್ಮ ಅಭಿಪ್ರಾಯ ತಿಳಿಸಿದರು, ಅಶೋಕ್ ಅಷ್ಟಗಿ, ರಾವಸಾಬಾ ಬಿರಾದಾರ, ಬಸವರಾಜ ವಗ್ಗಿ, ಸುರೇಶಗೌಡ ಹತ್ತರಕಿ, ಸುಭಾಸಗೌಡ ಬಿರಾದಾರ, ಸಿದ್ದು ಕೊಟ್ಟಲಗಿ, ಸೋಮು ಕತ್ನಳ್ಳಿ, ಬಸಯ್ಯ ಮಠ, ಸುರೇಶ ಹೊಸಮನಿ, ಬೋದಾಲೇಶ್ವರ ಏಳಗಿ, ಸುನಿಲ್ ಸಾಗರ, ಈರಣ್ಣ ಗಾಯಕವಾಡ, ಕೆ. ಆರ್. ಡಿ. ಎಲ್ ಎಲ್ಲ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು