ಭೀಮೆಗೆ ಭಾಗಿನ ಅರ್ಪಿಸಿ ಕೃತಜ್ಞತೆ ಸಲ್ಲಿಸಿದ ರೈತರು
ಇಂಡಿ, ಜುಲೈ 31: ಖೇಡಗಿ, ಮಿರಗಿ ಹಾಗೂ ಶಿವಪೂರ ಗ್ರಾಮಗಳ ನೂರಾರು ರೈತರು ರೋಡಗಿ ಗ್ರಾಮದಲ್ಲಿ ಜುಲೈ 18ರಂದು ಶ್ರೀ ಶಿವಲಿಂಗೇಶ್ವರ ಸ್ವಾಮೀಜಿಗಳ ಹಾಗೂ ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಅವರ ನೇತೃತ್ವದಲ್ಲಿ ಬತ್ತಿ ಹೋಗಿದ್ದ ಭೀಮಾ ನದಿ ಮತ್ತೆ ಉಕ್ಕಿ ಹರಿಯಲೆಂದು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ್ದರು.
ಅದೇ ಸಂದರ್ಭದಲ್ಲಿ ರೈತರು ಕೇಂದ್ರ ಬೃಹತ್ ಕೈಗಾರಿಕೆ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿ, ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಭೀಮಾ ನದಿಗೆ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದ್ದರು. ರೈತರ ಮನವಿಗೆ ಸ್ಪಂದಿಸಿದ ಬಿ.ಡಿ. ಪಾಟೀಲ ಅವರು ಮರುದಿನವೇ ಇಂಡಿ ತಾಲೂಕಿನ ಪರವಾಗಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿ, ಈ ವಿಷಯದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಈ ಎಲ್ಲ ಪ್ರಯತ್ನಗಳ ಫಲವಾಗಿ ಭೀಮಾ ನದಿ ಮತ್ತೆ ತನ್ನ ಗತವೈಭವದೊಂದಿಗೆ ಉಕ್ಕಿ ಹರಿಯುತ್ತಿದ್ದು, ರೈತರಲ್ಲಿ ಸಂತಸ ಮನೆಮಾಡಿದೆ.
ಇದರ ಅಂಗವಾಗಿ ಇಂದು ರೋಡಗಿ ಗ್ರಾಮದಲ್ಲಿ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿಗಳ ಹಾಗೂ ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಅವರ ನೇತೃತ್ವದಲ್ಲಿ ಮಹಾತಾಯಿ ಭೀಮೆಗೆ ಸಂಪ್ರದಾಯಬದ್ಧವಾಗಿ ಭಾಗಿನ ಅರ್ಪಿಸಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಕೃತಜ್ಞತೆ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಶಂಕರಗೌಡ ಬಂಡಿ, ಡಾ. ಹಣಮಂತ ಮೋಸಲಗಿ, ದುಂಡು ಬಿರಾದಾರ, ನಿಯಾಝ್ ಅಗರಖೇಡ, ಫಜಲು ಮುಲ್ಲಾ, ಬಸವರಾಜ ಕೋರೆ, ಶ್ರೀಶೈಲ ಲಬ್ಬಾ, ಮಲಕಣ್ಣ ಶಿರಶಾಡ, ಶಿವಾನಂದ ದೂಮಗೋಂಡ, ಬಸವರಾಜ ಹಳ್ಳಿ, ರಮ್ಜಾನ್ ನಾಗೂರ, ಶಿವಾನಂದ ಕಕ್ಕಳಮೇಲಿ, ಶಲಣಬಸು ಬಬಲೇಶ್ವರ, ಅನೀಲ ಬಂಡಿ, ಶ್ರೀಶೈಲ ಮೂಳೆ, ಮಲ್ಲಿಕಾರ್ಜುನ ನಿರ್ವಾಣಶಟ್ಟಿ, ವಸಂತ ಕೋಳಿ, ಶಿವಾನಂದ ಬಡದಾಳ, ಮಂಜು ಸೋಲಾಪುರ, ವಿಠಲ ಪೂಜಾರಿ, ಚಿದಾನಂದ ಗಚ್ಚಿನಮಠ, ಗಂಗಾಧರ ಬಡದಾಳ, ಅರವಿಂದ ಮೇತ್ರಿ, ಶಿವಮೂರ್ತಿ ಮೂಲಗಿ, ಬಸವರಾಜ ಮಣ್ಣೂರ, ಮಲ್ಲಿಕಾರ್ಜುನ ನಾವಿ, ಪ್ರಭು ಯರಗಲ್ಲ ಸೇರಿದಂತೆ ಅನೇಕ ರೈತರು ಹಾಗೂ ಮುಖಂಡರು ಉಪಸ್ಥಿತರಿದ್ದರು.