ಝಳಕಿ : ಅಭಿವೃದ್ಧಿ ಅಧಿಕಾರಿಗಳಾ ಅಥವಾ ಅನಭಿವೃದ್ಧಿನ (ಅಧೋಗತಿ) ಅಧಿಕಾರಿಗಳು ತಿಳಿಯದಾಗಿದೆ ಎಂದು ಗ್ತಾಮದ ಹಿರಿಯರಾದ ಅಣ್ಣಪ್ಪ ತಳವಾರ.
ಝಳಕಿ : ಇವಾಗ ರಾಜ್ಯದ ಗ್ರಾಮ ಪಂಚಾಯತಗಳು ಆಡಳಿತ ಅಧಿಕಾರಿಗಳು ಮತ್ತು ಅಭಿವೃದ್ಧಿ ಅಧಿಕಾರಿಗಳ ಸಹಯೋಗದಲ್ಲಿ ಗ್ರಾಮ ಪಂಚಾಯತ್ ಯೋಜನೆಗಳಾಗಲಿ ಯಾವುದೆ ಕೆಲಸ ಕಾರ್ಯಗಳಾಗಲಿ ನಡೆಸಬೇಕಾಗಿದ್ದು, ಇಂತಹ ಸಮಯದಲ್ಲಿ ಗ್ರಾಮದಲ್ಲಿ ಎಲ್ಲೆಂದರಲ್ಲಿ ಗಲೀಜು, ಗಬ್ಬು ವಾಸನೆ, ಚರಂಡಿಗಳ ಸ್ವಚ್ಛತೆ ಕಾಣದಂತಾಗಿದೆ ಎಂದು ಗ್ತಾಮದ ಹಿರಿಯರಾದ ಅಣ್ಣಪ್ಪ ತಳವಾರ ಪ್ರಕಟಣೆಗೆ ತಿಳಿಸಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯರ ಅವಧಿಯಲ್ಲಿ ಇದ್ದಾಗ, ಸದಸ್ಯರು ಅಥವಾ ಅಧ್ಯಕ್ಷರು ಗ್ರಾಮದಲ್ಲಿನ ಯೋಜನೆಗಳ ಬಗ್ಗೆ ತಿಳಿಸಬೇಕು, ಅವರು ಅದನ್ನು ನಿಗಾಹ ವಹಿಸಿ ನಮಗೆ ತಿಳಿಸಬೇಕು ಅನ್ನೋ ಅಧಿಕಾರಿಗಳು ಇವಾಗ ತಮ್ಮದೇ ಆದ ಅಧಿಕಾರಿಶಾಹಿ ಆಡಳಿತ ಇದ್ದರು ಯಾಕೆ ಸ್ವಚ್ಛತೆ ಕಾಣುತ್ತಿಲ್ಲ, ಝಳಕಿ ಗ್ರಾಮದಲ್ಲಿ ಗ್ರಾಮದ ದೇವರು ಭೀರಲಿಂಗೇಶ್ವರ ದೇವಸ್ಥಾನದ ದಾರಿಯಲ್ಲಿ ತುಂಬಾ ಕಸದ ರಾಶಿ ಬಿದ್ದಿದ್ದು, ಹಂದಿಗಳು ಎಲ್ಲೆಂದರಲ್ಲಿ ಕಸವನ್ನು ಪಸರಿಸಿ ದಾರಿ ಹೋಕರ ಮೇಲೆ ಹಲ್ಲೆ ಮಾಡುವ ಸಾಧ್ಯತೆಗಳು ಇವೆ, ಇದನ್ನು ಯಾವ ಅಧಿಕಾರಿಗಳ ಕಣ್ಣಿಗೆ ಕಂಡಿಲ್ಲ ಅನ್ನೋದು ಪ್ರಶ್ನೆ? ಕಾಡುತ್ತಿದೆ ಎಂದರು .
ಗ್ರಾಮದಲ್ಲಿ ಜೆ. ಜೆ. ಎಮ್ ನಲ್ಲಿಗಳಲ್ಲಿ ತುಂಬಾ ಗಲೀಜು ನೀರು ಸರಬರಾಜು ಆಗುತ್ತಿದ್ದು, ಕೆಲವೊಂದು ಕಡೆ ನಲ್ಲಿಗಳಿಗೆ ನೀರೇ ಬರೋದಿಲ್ಲ, ಇವೆಲ್ಲವೂ ಅಧಿಕಾರಿಗಳ ಗಮನಕ್ಕೆ ಇದ್ದರು ಯಾವುದೆ ಪ್ರಯೋಜನ ಇಲ್ಲಾ, ಸರ್ಕಾರ ಪ್ರತಿ ಗ್ರಾಮ ಪಂಚಾಯತಗೆ ಕಸದ ವಾಹನ ಕೊಟ್ಟಿದ್ದು, ಇವಾಗ ಕಸದ ವಾಹನ ಕಾಣೆಯಾಗಿವೆ, ಕಸಮಾತ್ರ ಗ್ರಾಮದಲ್ಲಿ ತಲೆ ಎತ್ತಿ ನಿಂತಿದೆ, ಗ್ರಾಮದಲ್ಲಿ ರೋಗ ರುಜಿನಿಗಳು ಸಂಭವಿಸುವ ಸಾಧ್ಯತೆ ಇದ್ದು, ಇದನ್ನು ಕೂಡಲೆ ತಾಲೂಕು ಅಧಿಕಾರಿಗಳು, ಜಿಲ್ಲಾ ಅಧಿಕಾರಿಗಳು ಪರಿಶೀಲನೆ ನಡೆಸಿ ಕೂಡಲೆ ಕಸದ ವಾಹನಗಳು ಓಡಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ವಿಠಲ್ ಕಾಗರ, ಬಾಲಕೃಷ್ಣ ಭೋಸಲೇ, ಪ್ರಕಾಶಗೌಡ ಬಿರಾದಾರ,