ಇಂಡಿ: ಇಂಡಿ ತಾಲೂಕು ಶಿಕ್ಷಕರ ಸಂಘದ ಚುನಾವಣೆ ಹಿನ್ನೆಲೆ ಗುರುಸ್ಪಂದನಾ ಹಳೆ ಪ್ಯಾನೆಲ್ ನೇತೃತ್ವದಲ್ಲಿ 19 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ನಾಮ ಪತ್ರಗಳು ಸಲ್ಲಿಸಿ ಮಾತನಾಡಿದ ಅಲ್ಲಾಬಕ್ಷ ವಾಲಿಕಾರ ಸಂಘದ ಅಭಿವೃದ್ಧಿ, ಶಿಕ್ಷಕರ ಹಕ್ಕುಗಳ ರಕ್ಷಣೆ ಹಾಗೂ ಶಿಕ್ಷಕರ ಸಮಗ್ರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಉದ್ದೇಶದಿಂದ ಈ ಪ್ಯಾನೆಲ್ನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಶಿಕ್ಷಕರ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಗುರುಸ್ಪಂದನಾ ಹಳೆ ಪ್ಯಾನೆಲ್ ಕಳೆದ ಹಲವು ವರ್ಷಗಳಿಂದ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದು, ಶಿಕ್ಷಕರ ಹಿತಾಸಕ್ತಿಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ವಿಯಾಗಿ ಜಾರಿಗೊಳಿಸಿದೆ. ತಾಲೂಕಿನ ಎಲ್ಲಾ ಶಿಕ್ಷಕರ ಪ್ರಚಂಡ ಬಹುಮತದಿಂದ ನಮ್ಮ ಪ್ಯಾನೆಲ್ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ ಎಂಬ ವಿಶ್ವಾಸವನ್ನು ನಾಯಕರು ವ್ಯಕ್ತಪಡಿಸಿದ್ದಾರೆ.
1998ರಿಂದ ಗುರುಸ್ಪಂದನಾ ಹಳೆ ಪ್ಯಾನೆಲ್ನ ಆಡಳಿತಕ್ಕೆ ತಾಲೂಕಿನ ಶಿಕ್ಷಕರು ಆಶೀರ್ವಾದ ನೀಡುತ್ತಾ ಬಂದಿದ್ದಾರೆ. ನಮ್ಮ ಪ್ಯಾನೆಲ್ನ ನಾಯಕರು, ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಶಿಕ್ಷಕರು ಕೇವಲ ಒಂದು ಫೋನ್ ಕರೆ ಮಾಡಿದರೆ ಸಾಕು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸುವ ಸ್ವಭಾವ ಹೊಂದಿದ್ದಾರೆ ಎಂದು ತಿಳಿಸಿದರು.
ಪ್ರತಿ ವರ್ಷ ಶಿಕ್ಷಕರಿಗೆ ವೈಯಕ್ತಿಕವಾಗಿ ಟ್ಯಾಕ್ಸ್ ಫಾರ್ಮ್, ಡೇಲಿ ಡೈರಿ, ಕ್ಯಾಲೆಂಡರ್, ATM ಕಾರ್ಡ್ ಪಾಕೆಟ್ ಸೇರಿದಂತೆ ಅನೇಕ ಉಪಯುಕ್ತ ಸಾಮಗ್ರಿಗಳನ್ನು ಶಾಲೆಗಳಿಗೆ ತೆರಳಿ ತಲುಪಿಸುವ ಕಾರ್ಯವನ್ನು ನಮ್ಮ ತಂಡ ಮಾಡುತ್ತಿದೆ. ಇದರ ಜೊತೆಗೆ ಪ್ರತಿಯೊಬ್ಬ ಶಿಕ್ಷಕರಿಗೂ ಗಳಿಕೆ ರಜೆ ಪಾರ್ಮ್, ಸರೆಂಡರ್ ಫಾರ್ಮ್ ಗಳನ್ನು ವಿತರಿಸುವ ಕಾರ್ಯವೂ ನಿರಂತರವಾಗಿ ನಡೆಯುತ್ತಿದೆ.
ಶಿಕ್ಷಕರ C & R ನಿಯಮ ತಿದ್ದುಪಡಿ ವಿಷಯದಲ್ಲಿ ರಾಜ್ಯಾಧ್ಯಕ್ಷರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ನಡೆದ ಹೋರಾಟದಲ್ಲಿ ಇಂಡಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಭಾಗವಹಿಸುವಂತೆ ಮಾಡಲಾಗಿದೆ.
ಇದಲ್ಲದೆ TET ಕಡ್ಡಾಯ ನಿಯಮವನ್ನು ರದ್ದುಗೊಳಿಸಲು ದೆಹಲಿಯಲ್ಲಿ ನಡೆದ ಜಂತರ ಮಂತರ ಹೋರಾಟದಲ್ಲಿ ನಮ್ಮ ತಂಡ ಸಕ್ರಿಯವಾಗಿ ಭಾಗವಹಿಸಿತು. ರಾಜ್ಯಾಧ್ಯಕ್ಷರು ಕೇವಲ ಆರು ತಿಂಗಳಲ್ಲಿ ಶಿಕ್ಷಕ ಸ್ನೇಹಿಯಾಗಿ 22 ಮಹತ್ವದ ಆದೇಶಗಳನ್ನು ಹೊರಡಿಸಿದ್ದು ಶಿಕ್ಷಕರಿಗೆ ಬಹಳ ಸಹಾಯಕವಾಗಿದೆ ಎಂದು ಹೇಳಿದರು.
ಗಣತಿ ಕಾರ್ಯದಲ್ಲಿ 55 ವರ್ಷ ಮೇಲ್ಪಟ್ಟ ಹಾಗೂ ಅನಾರೋಗ್ಯ ಹೊಂದಿರುವ ಶಿಕ್ಷಕರಿಗೆ ವಿನಾಯಿತಿ ಕಲ್ಪಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಗುರುಸ್ಪಂದನಾ ಕಾರ್ಯಕ್ರಮದ ಮೂಲಕ ತಾಲೂಕಿನ ಶಿಕ್ಷಕರ ಸೇವಾ ಪುಸ್ತಕಗಳಲ್ಲಿ ದಾಖಲಿಸಬೇಕಾದ ಅನೇಕ ಅಂಶಗಳನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಿಬ್ಬಂದಿಯ ಸಹಕಾರದಿಂದ ಪೂರ್ಣಗೊಳಿಸಲಾಗಿದೆ.
ಇನ್ನೂ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಶಿಕ್ಷಕರ ಹಿತದೃಷ್ಟಿಯಿಂದ ಕೈಗೊಂಡಿರುವ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು, ಮುಂಬರುವ ಶಿಕ್ಷಕರ ಸಂಘದ ಚುನಾವಣೆಯಲ್ಲಿ ತಾಲೂಕಿನ ಎಲ್ಲಾ ಶಿಕ್ಷಕರು ಗುರುಸ್ಪಂದನಾ ಹಳೆ ಪ್ಯಾನೆಲ್ ಅಭ್ಯರ್ಥಿಗಳಿಗೆ ಅಮೂಲ್ಯವಾದ ಮತ ನೀಡಿ ಭರ್ಜರಿ ಗೆಲುವು ಸಾಧಿಸುವಂತೆ ಸಹಕರಿಸಬೇಕು ಎಂದು ಪ್ಯಾನೆಲ್ ನಾಯಕರು ಮನವಿ ಮಾಡಿದ್ದಾರೆ.
ವೈ.ಟಿ.ಪಾಟೀಲ್, ಹರಳಯ್ಯಾ ಸರ್, ಜುರಾಮ ಚವ್ಹಾಣ, ಅಲ್ತಾಫ ಬೋರಾಮಣಿ, ಆನಂದ ಕೆಂಬಾವಿ, ಕೆ.ಎಂ.ಇಂಡಿ, ಎಂ.ಎಂ.ವಾಲಿಕಾರ, ಎಸ್.ಬಿ.ಪಾಟೀಲ, ಪಬ್ಬು ಚಾಂದಕವಟೆ, ಎಂ.ಟಿ. ಮಾಸಾಳ, ಸಿ.ಆರ್.ಮ್ಯಾಕೆರಿ, ಬಿ.ಎಸ್.ಸೊನ್ನದ, ಟಿ.ಕೆ.ಜಂಬಗಿ, ಅಬುತಾಲಿಬ ಹೊಸೂರ, ಪ್ರಮಾ ಹುಬ್ಬಳ್ಳಿ, ಮೋಹನ ಕಟಕದೊಂಡ, ಸುರೇಶ ಚವ್ಹಾಣ ಉಮರ ಶೇಖ್, ಜೆ.ಎ.ಚವಡಿಹಾಳ, ಶಾಹಿನ ಅಂಜುಂ, ವಿ.ಕೆ.ಚವ್ಹಾಣ, ಗಿರಿಜಾ ನಿಂಬಾಳ, ರಮೇಶ ಬಗಳುರ, ತಲಿಗ, ಟಿ.ಕೆ.ಪೂಜಾರು, ಸೂನ್ನದ, ಮೊಗಳಿ ಸರ, ಸೇರಿದಂತೆ ಅನೇಕರು ಇದ್ದರು.