ಇಂಡಿ: ಅಂಜುಮನ್ ಹೈ ಸ್ಕೂಲ್ 2007ರ ಎಸ್ಎಸ್ಎಲ್ಸಿ ಹಳೆಯ ವಿದ್ಯಾರ್ಥಿಗಳಿಂದ ನಿವೃತ್ತ ಶಿಕ್ಷಕರಿಗೆ ಸನ್ಮಾನ
ಇಂಡಿ: ನಗರದ ಅಂಜುಮನ್ ಹೈ ಸ್ಕೂಲ್ನ 2007ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ದಿನಗಳಲ್ಲಿ ಮಾರ್ಗದರ್ಶನ ನೀಡಿ ಬದುಕಿನ ದಾರಿಯನ್ನು ತೋರಿದ ಗೌರವಾನ್ವಿತ ಶಿಕ್ಷಕರಿಗೆ ಸನ್ಮಾನ ಸಲ್ಲಿಸಿ ಕೃತಜ್ಞತೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಹುಮಾಯೂನ್ ಬಿಲ್ವಾರ್ ಸರ್, ಜಮಾದಾರ್ ಸರ್ ಮತ್ತು ಗೊರಿಕಾರ್ ಸರ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಜೀವನದಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ತರವಾಗಿದ್ದು, ಕೇವಲ ಪಾಠಪುಸ್ತಕದ ಜ್ಞಾನವಷ್ಟೇ ಅಲ್ಲದೆ ಶಿಸ್ತು, ನೈತಿಕತೆ ಮತ್ತು ಉತ್ತಮ ಜೀವನ ಮೌಲ್ಯಗಳನ್ನು ಬೋಧಿಸಿದ ಶಿಕ್ಷಕರಿಗೆ ಕೃತಜ್ಞತೆಯ ಸೂಚಕವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಗೌರವಿಸಿ ಶಾಲೆಯ ದಿನಗಳನ್ನು ಸ್ಮರಿಸಿಕೊಂಡು ಸಂತೋಷ ವ್ಯಕ್ತಪಡಿಸಿದರು. ಶಿಕ್ಷಕರು ಕೂಡ ತಮ್ಮ ಹಳೆಯ ವಿದ್ಯಾರ್ಥಿಗಳನ್ನು ನೋಡಿ ಸಂತಸ ವ್ಯಕ್ತಪಡಿಸಿ, ಅವರು ಜೀವನದಲ್ಲಿ ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಆಶೀರ್ವದಿಸಿದರು.
ಈ ಸನ್ಮಾನ ಸಮಾರಂಭವು ಸ್ನೇಹಭಾವ ಮತ್ತು ಗುರು-ಶಿಷ್ಯರ ನಡುವಿನ ಆತ್ಮೀಯ ಸಂಬಂಧವನ್ನು ಪ್ರತಿಬಿಂಬಿಸುವಂತೆ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಅನೇಕ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳಾದ ನವಾಜ ಮಕಾಂದಾರ, ಮಜೀದ ಸೌದಾಗರ, ವಸೀಂ ಮುಲ್ಲಾ, ರಪೀಕ ನದಾಫ, ಅವೇಸ ಪಠಾಣ್, ಮುಬಾರಕ್ ಇಂಡಿಕರ, ಜಾಕೀರ ಮಲಘಾಣ, ಇಲಾಹೀ ರೇವೂರಕರ, ಜಿಯ್ಯಾ ಬೇನೂರ, ಶೌಕತ ಖಾಜಿ, ಸಾಧಿಕ ಮಾಶಾಳಕರ, ಸದ್ದಾಂ ಆಳಗಿ, ಆಲಿಮ ಬಾಗವಾನ, ಸದ್ದಾಂ ಬಾಗವಾನ, ಸಿದ್ದಿಕ ಮಂದರೋಪ, ಫಾರೋಕ್ ಇಂಡಿಕರ, ಅಸ್ಲಂ ಮಕಾಂದಾರ, ಸದ್ದಾಂ ಬಾಗವಾನ, ಫಾರೋಕ ಅತ್ತಾರ, ತೌಫೀಕ ಬಾಗವಾನ, ಸದ್ದಾಂ ಅರಬ, ಸನಾವುಲ್ಲಾ ಸೌದಾಗರ, ಇಸಾಕ ಜೇಟಗಿ, ಶಬ್ಬೀರ ಕಲಬುರ್ಗಿ, ಅಲ್ಲಾಬಕ್ಷ ಕಲಬುರಗಿ, ಶಾಹಸಾಬ ಮಕಾನದಾರ, ಅಲ್ತಾಫ ಪಠಾಣ, ಸೈಯದ ವಾಲಿಕಾರ, ಅನವರ ದುದನಿ, ಹಲಿಮಾ ಬಾಗವಾನ, ಹೀನಾ ಮಕಾನದಾರ, ಆಫರೀನ ಪಠಾಣ, ಸೇರಿದಂತೆ ಅನೇಕರು ಇದ್ದರು.
Thanks