ವಿಜಯಪುರದಲ್ಲಿ ಪೆಪ್ಸ್ ಇಂಡಸ್ಟ್ರೀಸ್ ನ ‘ಗ್ರೇಟ್ ಸ್ಲೀಪ್ ಸ್ಟೋರ್’ ಉದ್ಘಾಟನೆ
20ನೇ ವರ್ಷದ ಯಶಸ್ವಿ ಪಯಣದ ಭಾಗವಾಗಿಉತ್ತರಕರ್ನಾಟಕದಲ್ಲಿರಿಟೇಲ್ ಮಳಿಗೆಗಳ ವಿಸ್ತರಣೆ
ವಿಜಯಪುರ, 22 ಫೆಬ್ರವರಿ 2026: ಭಾರತದ ಪ್ರತಿಷ್ಠಿತ ಸ್ಪ್ರಿಂಗ್ ಮ್ಯಾಟ್ರೆಸ್ ಮತ್ತು ನಿದ್ರಾ ಉತ್ಪನ್ನತಯಾರಿಕಾ ಬ್ರಾಂಡ್ ಆಗಿರುವ ಪೆಪ್ಸ್ ಇಂಡಸ್ಟ್ರೀಸ್ ಇದೀಗ ವಿಜಯಪುರದಲ್ಲಿ ಹೊಸ ‘ಪೆಪ್ಸ್ಟ್ ಗ್ರೇಟ್ ಸ್ಲೀಪ್ ಸ್ಟೋರ್’ ಅನ್ನು ಆರಂಭಿಸಿದ್ದು, ಈ ಮಳಿಗೆಯನ್ನು ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮಕೈಗಾರಿಕಾ ಸಚಿವರಾದ ಡಾ. ಎಂ. ಬಿ. ಪಾಟೀಲ್ ಅವರು ಉದ್ಘಾಟಿಸಿದರು.
ಈ ಮೂಲಕ ಪೆಪ್ಸ್ ಸಂಸ್ಥೆಯು ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿಕೊಂಡಿದೆ. ಗುರುಕುಲ ರಸ್ತೆಯ ಹನಮಶೆಟ್ಟಿ ಕಾಂಪ್ಲೆಕ್ಸ್ ನಲ್ಲಿ ‘ಸಂಗಮ್ ವೆಂಚರ್ಸ್’ ಸಹಯೋಗದೊಂದಿಗೆ ಪ್ರಾರಂಭಿಸಲಾದ ಈ ವಿಶೇಷ ಶೋರೂಮ್ ಅನ್ನು ಬ್ರಾಂಡ್ ನ 20ನೇ ವರ್ಷದ ಸಂಭ್ರಮಾಚರಣೆಯ ಭಾಗವಾಗಿರೂಪಿಸಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪೆಪ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಜಿ. ಶಂಕರ್ ರಾಮ್ ಅವರು, “ಭಾರತೀಯ ಮನೆಗಳಿಗೆ ವಿಶ್ವಾಸಾರ್ಹ ನಿದ್ರಾ ಉತ್ಪನ್ನಗಳನ್ನು ಒದಗಿಸುವಲ್ಲಿ ಪೆಪ್ಸ್ 20 ವರ್ಷಗಳನ್ನು ಪೂರೈಸುತ್ತಿದ್ದು, ಈ ಸಂದರ್ಭದಲ್ಲಿ ವಿಜಯಪುರದಲ್ಲಿ ಹೊಸ ಮಳಿಗೆ ಆರಂಭಿಸಿರುವುದು ಅರ್ಥಪೂರ್ಣ ನಿರ್ಧಾರವಾಗಿದೆ. ಕರ್ನಾಟಕವು ನಮ್ಮ ಬೆಳವಣಿಗೆಯಲ್ಲಿ ಪ್ರಮುಖ ಕೇಂದ್ರವಾಗಿದೆ. ಈ ಹೊಸ ಗ್ರೇಟ್ ಸ್ಲೀಪ್ ಸ್ಟೋರ್ ಮೂಲಕ ಉತ್ತರಕರ್ನಾಟಕ ದಗ್ರಾಹಕರಿಗೆ ನಮ್ಮ ತಂತ್ರಜ್ಞಾನ ಆಧಾರಿತ ಮತ್ತು ಪ್ರೀಮಿಯಂ ಉತ್ಪನ್ನಗಳನ್ನು ಹತ್ತಿರ ತರಲು ನಮಗೆ ಸಾಧ್ಯವಾಗಲಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಶ್ರೀ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ, ಪೆಪ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಜಿ. ಶಂಕರ್ ರಾಮ್ ಮತ್ತು ಕರ್ನಾಟಕ ಹಾಗೂ ಗೋವಾ ವಿಭಾಗದ ಆರ್ಬಿಎಂ ಶ್ರೀ ರಮೇಶ್ ಟಿ. ಉಪಸ್ಥಿತರಿದ್ದರು.
850 ಚದರ ಅಡಿ ವಿಸ್ತೀರ್ಣ ಹೊಂದಿರುವ ವಿಜಯಪುರದ ಈ ಗ್ರೇಟ್ ಸ್ಲೀಪ್ ಸ್ಟೋರ್ಅನ್ನುಆಧುನಿಕ ಸ್ಲೀಪ್ ಸ್ಟುಡಿಯೋ ಆಗಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿಗ್ರಾಹಕರು ಪೆಪ್ಸ್ನ ವಿವಿಧ ಶ್ರೇಣಿಯ ಸ್ಪ್ರಿಂಗ್, ಮೆಮೊರಿ ಫೋಮ್ ಮತ್ತು ಕಾಯರ್ ಮ್ಯಾಟ್ರೆಸ್ ಗಳು, ದಿಂಬುಗಳು, ಪ್ರೊಟೆಕ್ಟರ್ ಗಳು ಮತ್ತುಇತರ ಪರಿಕರಗಳನ್ನು ನೋಡಿ ತಿಳಿಯಬಹುದು.
ಪೆಪ್ಸ್ ಸಂಸ್ಥೆಯು ಸುಧಾರಿತ ಉತ್ಪನ್ನಗಳಾದ ಪೆಪ್ಸ್ಕಂಫರ್ಟ್, ಪೆಪ್ಸ್ ಸುಪ್ರೀಂ, ಪೆಪ್ಸ್ರೆ ಸ್ಟೋನಿಕ್ ಮೆಮೊರಿ ಫೋಮ್ ಮತ್ತು ಪೆಪ್ಸ್ ಸುಪೀರಿಯರ್ ಸ್ಪ್ರಿಂಗ್ ರೇಂಜ್ ಸೇರಿದಂತೆ ಹಲವಾರು ಉತ್ಪನ್ನಗಳನ್ನು ಒದಗಿಸುತ್ತಿದೆ. ಭಾರತದಾದ್ಯಂತ 5,000ಕ್ಕೂ ಹೆಚ್ಚು ಮಲ್ಟಿ-ಬ್ರಾಂಡ್ ಮಳಿಗೆಗಳು ಮತ್ತು 110ಕ್ಕೂ ಹೆಚ್ಚು ವಿಶೇಷ ಗ್ರೇಟ್ ಸ್ಲೀಪ್ ಸ್ಟೋರ್ ಗಳನ್ನು ಹೊಂದಿರುವ ಪೆಪ್ಸ್, ತನ್ನ ರಿಟೇಲ್ ಜಾಲವನ್ನು ವೇಗವಾಗಿ ವಿಸ್ತರಿಸುತ್ತಿದೆ.