ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಆಸ್ಪತ್ರೆ ವತಿಯಿಂದ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಇಂದು ಶನಿವಾರ ನಡೆಯಿತು.
ಗ್ರಾಮದ ಹಿರಿಯರು ಶಿಬಿರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಗೊಂಡ ಚಾವರ, ಮುತ್ತು ಹಿರೇಮಠ, ಸಿದ್ದು ಬೆಳಗಾವಿ, ಧರೇಪ್ಪ ಚಾವರ, ರಾಜಕುಮಾರ ಹೆಗಡ್ಯಾಳ, ಸೀತಾರಾಮ ನರಳೆ, ಬಸವರಾಜ ಕಾತ್ರಾಳ, ಅಕ್ಬರ ತಿಕೋಟಿ, ಸಾಬು ಖಂಡೇಕಾರ, ರಾಜು ಮಂಗೂಂಡ, ಕಾಸು ದೇವನಾಕ, ಕಲ್ಲಪ್ಪ ಕೋಟ್ಯಾಳ, ತುಕಾರಾಮ ದಡಕೆ, ಸೋರ್ಯಕಾಂತ ಬಿರಾದಾರ, ವೈದ್ಯಾಧಿಕಾರಿಗಳು, ಶಾಲೆಯ ಮುಖ್ಯೋಪಾಧ್ಯಾಯರು, ಬೋಧಲ ಸಿಬ್ಬಂದಿ ಮತ್ತು ವೈದ್ಯಾಧಿಕಾರಿಗಳು ಬಾಗವಹಿಸಿದ್ದರು.
ಈ ಶಿಬಿರದಲ್ಲಿ 755 ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು.