ಇಂಡಿ – ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಕಲಬುರ್ಗಿ ವಿಭಾಗ ( ತಿಂಥಣಿ ಬ್ರೀಜ್) ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀಸಿದ್ದರಾಮಾನಂದಪುರಿ ಮಹಾಸ್ವಾಮಿಗಳವರು ಹೃದಯಾಘಾತಕ್ಕೆ ಒಳಗಾಗಿ ದೈವಾದೀನರಾದ ಸುದ್ದಿ ಇಡೀ ರಾಜ್ಯದ ಕೋಟ್ಯಾನು ಕೋಟಿ ಭಕ್ತರಿಗೆ ಅತೀವ ದುಖವಾಗಿದೆ ಎಂದು ಜೆ.ಡಿ.ಎಸ್ ಮುಖಂಡ ಬಿ.ಡಿ ಪಾಟೀಲ ಹೇಳಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಶೃಂದಾಜಲಿ ಸಭೆಯಲ್ಲಿ ಪುಸ್ಪನಮನ ಸಲ್ಲಿಸಿ ಮಾತನಾಡಿದ ಅವರು ಕೇವಲ ಮೂರು ದಿನಗಳ ಹಿಂದೆ ಹಾಲುಮತ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿದಶ್ರೀಗಳು ಇಂದು ಇಲ್ಲದೆ ಇರುವದು ವಿಷಾದನೀಯ ಸಂಗತಿ. ಧಾರ್ಮಿಕ ,ಅಧ್ಯಾತ್ಮಿಕ ಸಾಮಾಜಿಕ ಸೇವೆ ಪುಸ್ತಕಗಳ ಮೇಲಿನ ಅತೀ ಪ್ರೀತಿ ಹಾಗೂ ನಾಡಿನ,ದೇಶದ ಸಾಂಸ್ಕೃತಿ ಹಿರಿಮೆ ಗರಿಮೆಯನ್ನು ಎತ್ತಿಹಿಡಿದ ಮಹಾಸ್ವಾಮಿಗಳು ಅಗಲೀರುವುದು ನಾಡಿಗೆ ,ದೇಶಕ್ಕೆ ತುಂಬಲಾಗದ ನಷ್ಟವಾಗಿದೆ, ಶ್ರೀಗಳ ದಿವ್ಯಾತ್ಮಕ್ಕೆ ಶಾಂತಿ ದೊರಕಲಿ, ಶ್ರೀಮಠದ ಭಕ್ತಾದಿಗಳಿಗೆ ದುಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಸಂತಾಪ ಸೂಚಿಸಿದರು.
ಸಿದ್ದ ಡಂಗಾ, ಶ್ರೀಶೈಲ ಪೂಜಾರಿ, ಡಿ.ಬಿ ಪಾಟೀಲ , ಅಮೋಘಿ ಬೇನೂರ, ಮಾಳಪ್ಪ ಗುಡ್ಲ, ಶಿಕ್ಷಕ ಪುಂಡಲಿಕ ಕಲ್ಮನಿ, ಭೀಮು ಗುಡ್ಲ, ಮಾಜಿ ಪುರಸಭೆ ಅಧ್ಯಕ್ಷ ಯಲ್ಲಪ್ಪ ಹದರಿ, ಅಣ್ಣಪ್ಪ ಗುಡ್ಲ, ರಾಜು ಪೂಜಾರಿ, ದೇವು ಕಂಟೀಕಾರ, ಗಣ್ಯವ್ಯಕ್ತಿ ಬೋರಾಮಣಿ.ಹಣಮಂತ ಕಂಟೀಕಾರ ಸೇರಿದಂತೆ ನೂರಾರು ಭಕ್ತರು ಶೃದಾಂಜಲಿ ಸಭೆಯಲ್ಲಿ ಉಪಸ್ಥಿತರಿದ್ದರು.