ಆರೋಗ್ಯ ಸಂಪತ್ತು ಕಾಯ್ದುಕೊಂಡು, ಆಯುಷ್ಯ ವೃದ್ಧಿಸಿಕೊಳ್ಳಿ.
ಇಂಡಿ : ಎಲ್ಲರೂ ಉತ್ತಮ ಪೌಷ್ಟಿಕಾಂಶದ ಆಹಾರವನ್ನು ಸೇವಿಸಿ, ಪ್ರತಿನಿತ್ಯ ವ್ಯಾಯಾಮ ಮಾಡಿ ಆರೋಗ್ಯ ಸಂಪತ್ತು ಕಾಯ್ದುಕೊಳ್ಳುವುದುರ ಜೊತೆಗೆ ನಿಮ್ಮ ಆಯುಷ್ಯವನ್ನು ವೃದ್ಧಿಸಿಕೊಳ್ಳಿರಿ ಎಂದು ಕಜಾಪ ತಾಲೂಕಾಧ್ಯಕ್ಷ ಆರ್ ವಿ ಪಾಟೀಲ ಕರೆ ನೀಡಿದರು.
ಅವರು ಇಂಡಿ ಪಟ್ಟಣದ ಡಾ ರಾಜಕುಮಾರ ಮಾಳಿ ಅವರ ದವಾಖಾನೆಯಲ್ಲಿ ಇಂದು ನಡೆದ ಹಿರೇಬೇವನೂರ ಗ್ರಾಮದ ಭೀಮಾಶಂಕರ ವಡ್ಡರ ಶಿಕ್ಷಕರ ಸುಪುತ್ರ ವಿಜಯನ 8ನೇ ವರ್ಷದ ಜನ್ಮದಿನದ ಸ್ಮರಣಾರ್ಥವಾಗಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ವೈದ್ಯರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿ ಡಾ ಸಿದ್ದು ಪರಗೊಂಡ ಮಾತನಾಡಿ, ಭೀಮಾಶಂಕರ ಅವರು ತಮ್ಮ ಪುತ್ರನ ಜನ್ಮ ದಿನದ ಪ್ರಯುಕ್ತ ಕಳೆದ ಆರು ವರ್ಷಗಳಿಂದ ಡಾ ಆರ್ ಎಮ್ ಮಾಳಿಯವರು ತಮ್ಮ ದವಾಖಾನೆಯಲ್ಲಿ ಉಚಿತವಾಗಿ ಸ್ಥಳವನ್ನು ಹಾಗೂ ವೇದಿಕೆಯನ್ನು ಒದಗಿಸಿಕೊಡುತ್ತ, ಬಂದಿರುವುದು ಅತ್ಯಂತ ಶ್ಲಾಘನಿಯ ಕಾರ್ಯವಾಗಿದೆ.
ಉಚಿತ ಆರೋಗ್ಯ ತಪಾಸಣೆಗೆ ಸಹಾಯ ಸಹಕಾರ ನೀಡುತ್ತಾ,ಸಮಾಜ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಪ್ರತಿ ವರ್ಷ ಸತತವಾಗಿ 300 ಕ್ಕಿತ ಹೆಚ್ಚಿನ ರೋಗಿಗಳು, ಕಳೆದ ವರ್ಷ 20 ಜನ ಚಿಕಿತ್ಸೆ ಪಡೆದಿದ್ದು ಈ ವರ್ಷ 25ಕ್ಕಿಂತ ಹೆಚ್ಚಿನ ಜನ ಸರ್ಜರಿ ಚಿಕಿತ್ಸೆ ಮಾಡಿಸಿಕೊಳ್ಳಲು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಗೆ ಹೋಗಲು ದಾಖಲಾಗಿದ್ದಾರೆ.ಉಚಿತ ತಪಾಸಣಾ ಶಿಬಿರದ ಪ್ರಯೋಜನ ಪಡೆದಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ ಡಾ ಮಾಡಿ ಅವರು ಮಾತನಾಡಿ, ಕಳೆದ 6 ವರ್ಷಗಳಿಂದ ನಾನು ಉಚಿತವಾಗಿ ಸ್ಥಳವನ್ನು ನೀಡುವುದರ ಜೊತೆಗೆ ಹಣಕಾಸಿನ ಸಹಾಯ ಹಸ್ತವನ್ನು ನೀಡಿ, ಉಚಿತ ತಪಾಸಣಾ ಶಿಬಿರಕ್ಕೆ ಸಹಕಾರ ನೀಡುತ್ತಾ ಬಂದಿರುತ್ತೇನೆ ಎಂದು ಹೇಳಿದರು.
. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿರುವ ಹಿರೇಬೇವನೂರ ಹಾಗೂ ಹೊನಗನಹಳ್ಳಿ ಮಠದ ಪೀಠಾಧಿಪತಿಗಳಾದ ಶ್ರೀ ದಯಾನಂದ ಹಿರೇಮಠ ಸ್ವಾಮೀಜಿಯವರು ಮಾತನಾಡಿ, ಭೀಮಾಶಂಕರವರು ತಮ್ಮ ಪುತ್ರನು ಒಂದು ವರ್ಷಕ್ಕಿಂತ ಚಿಕ್ಕವನಿರವಾಗಲಿ ತಾಯಿಯನ್ನು ಕಳೆದುಕೊಂಡಿರುವುದರಿಂದ ಚೆನ್ನಾಗಿ ಜೋಪಾನ ಮಾಡಿ, ಪ್ರತಿ ವರ್ಷ ಆತನ ಹೆಸರಿನಿಂದ ಜನ್ಮದಿನದ ಜೊತೆಗೆ ಆರೋಗ್ಯ ತಪಾಸಣೆ ಏರ್ಪಡಿಸುತ್ತಿರುವುದು ಸಂತಸದಾಯಕ ಸಂಗತಿ. ಇದನ್ನು ಪ್ರತಿವರ್ಷ ಮುಂದುವರಿಸುತ್ತಾ ಹೋಗಬೇಕೆಂದು ಆಶೀರ್ವದಿಸಿದರು.
ಹಿರಿಯ ಸಾಹಿತಿಗಳಾದ ಡಿ ಎನ್ ಅಕ್ಕಿ ಸರ, ಭೀಮಾಶಂಕರ ವಡ್ಡರ, ಸಮಾಜ ಸೇವಕ ಸೋಮಶೇಖರ ಪಾತಾಳಿ ಮಾತನಾಡಿದರು.
. ವೇದಿಕೆ ಮೇಲೆ ಇಂಡಿ ಪಟ್ಟಣದ ಆರ್ ಎಮ್ ಶಹಾ ಪಬ್ಲಿಕ್ ಶಾಲೆಯ ಅಧ್ಯಕ್ಷ ಡಿ ಆರ್ ಶಹಾ, ಹಡಪದ ಅಪ್ಪಣ್ಣ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಿದ್ದರಾಯ ಅಪ್ತಾಗಿರಿ, ಆಡಳಿತಾಧಿಕಾರಿ ಪಂಡಿತ ಬಿರಾದಾರ, ಸಪ್ತಗಿರಿ ಆಸ್ಪತ್ರೆ ವೈದ್ಯರಾದ ಡಾ ಶ್ರವಣ, ಪ್ರಶಾಂತ, ವಿಶಾಲ, ಹಾಗು ನಂದಾ, ಮಹದೇವ ಗುಡ್ಡೋಡಗಿ,ಶಿವರಾಯ ಬಿರಾದಾರ ಹಾಗೂ ಶಂಕರ ಬೋರಾಮಣಿ ಉಪಸ್ಥಿತರಿದ್ದರು.