ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಲಗೋರಿ ಸ್ಪರ್ಧೆ – 2026ಕ್ಕೆ ಚಾಲನೆ
ವಿಜಯಪುರ, ಫೆಬ್ರವರಿ 10, 2026:
ಬಿ.ಎಲ್.ಡಿ.ಇ ಸಂಸ್ಥೆಯ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ವಿಜಯಪುರದ ಮಹಿಳಾ ಸಬಲೀಕರಣ ಕೋಶ ಮತ್ತು ಐಕ್ಯೂಎಸಿ ವತಿಯಿಂದ ಎರಡು ದಿನಗಳ ಲಗೋರಿ ಸ್ಪರ್ಧೆ – 2026ಕ್ಕೆ ಇಂದು ಮಹಾವಿದ್ಯಾಲಯದ ಮೈದಾನದಲ್ಲಿ ಚಾಲನೆ ನೀಡಲಾಯಿತು. ಎಎಸ್ಪಿ ಡಿಗ್ರಿ ಕಾಲೇಜಿನ ಒಟ್ಟು 18 ತಂಡಗಳು ಉತ್ಸಾಹದಿಂದ ಭಾಗವಹಿಸಿವೆ.
ಭಾರತೀಯ ಕ್ರೀಡೆಗಳ ಅಂತರಾಷ್ಟ್ರೀಯ ತರಬೇತುದಾರರಾದ ಶ್ರೀ ಬಸವರಾಜ ನಂ ಬಾಗೇವಾಡಿ ಸಾ, ಉತ್ನಾಳರವರು ಗಿಡಗಳಿಗೆ ನೀರುಣಿಸುವ ಮೂಲಕ ಸ್ಪರ್ಧೆಯನ್ನು ಉದ್ಘಾಟಿಸಿ, ಪಂದ್ಯಗಳ ಮುಖ್ಯ ತೀರ್ಪುಗಾರರಾಗಿ ಸೇವೆ ಸಲ್ಲಿಸಿದರು.
ಮಹಿಳಾ ಸಬಲೀಕರಣ ಕೋಶದ ಅಧ್ಯಕ್ಷರಾದ ಡಾ. ಭಾರತಿ ಮಠ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀ ವಿ.ಎಸ್. ತಲವಾರ್, ಉಪಪ್ರಾಂಶುಪಾಲರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ. ಎಸ್.ಎ. ಪಾಟೀಲ, ಪ್ರೊ. ಜೆಂಪಳೆ ಮತ್ತು ಪ್ರೊ. ಅಮರ್ ಬಿಸನಾಳ ಅವರ ಸಕ್ರಿಯ ಸಹಕಾರದಿಂದ ಕಾರ್ಯಕ್ರಮ ಸುಸೂತ್ರವಾಗಿ ನಡೆಯುತ್ತಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಡಾ. ಎಸ್.ಬಿ. ಕಮತಿ ಅವರು ಪರಂಪರೆಯ ಕ್ರೀಡೆಗಳ ಮಹತ್ವವನ್ನು ಒತ್ತಿಹೇಳಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.ಪ್ರೊ. ಪಲ್ಲವಿ ಪವಾರ್ ಅವರು ಕಾರ್ಯಕ್ರಮ ನಿರೂಪಿಸಿದರು.