ಇಂಡಿ ಅಂಜುಮನ್ ಇಸ್ಲಾಂ ಕಮೀಟಿಯ ನಕಲಿ ವಿವಾಹ ಪ್ರಮಾಣಪತ್ರ ಪ್ರಕರಣ – ಏಳು ಮಂದಿಯ ವಿರುದ್ಧ ಎಫ್ಐಆರ್ ದಾಖಲು
ಇಂಡಿ ನಗರದಲ್ಲಿ ಅಂಜುಮನ್ ಸಮಿತಿಯ ಹೆಸರಿನಲ್ಲಿ ನಕಲಿ ವಿವಾಹ ಪ್ರಮಾಣಪತ್ರ ಸೃಷ್ಟಿಸಿದ ಪ್ರಕರಣ ಬೆಳಕಿಗೆ ಬಂದಿದೆ. ದಿನಾಂಕ 06.02.2026 ರಂದು ನಗರದ ಬಾಹರಪೇಟ ಒಣಿಯಲ್ಲಿ ಅಕ್ರಮವಾಗಿ ಮದುವೆ ಪ್ರಮಾಣಪತ್ರ ನೀಡಿರುವ ಕುರಿತು ನಜ್ಮಾ ಇರ್ಷಾದ ಮುಕಾಶಿ ವಕ್ಪ ನಿರೀಕ್ಷಕರು ಜಿಲ್ಲಾ ವಕ್ಫ ಕಚೇರಿ ವಿಜಯಪುರ ಅವರು ಇಂಡಿ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದು, ಅದರ ಆಧಾರದಲ್ಲಿ ಏಳು ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
ದೂರುದಾರರ ಪ್ರಕಾರ, 1) ಶಹನ್ವಾಜ್ ಅಬ್ದುಲ್ರಶೀದ್ ಅರಬ್, 2) ಮೊಹಮ್ಮದ್ ಸಲೀಂ ಸುತಾರ್, 3) ನಿಶಾ ಪಂಡಿತ್ ಚವ್ಹಾಣ @ ಬೀಬಿಮರಿಯಂ, 4) ಮುಸ್ತಾಕ್ ಅಲ್ಲಾಬಕ್ಸ್ ಸುತಾರ್, 5) ಇಮ್ರಾನ್ ಹುಮಾಯೂನ್ ಸುತಾರ್, 6) ಅಯೂಬ್ ಹುಸೇನ್ ಇಂಡಿಕರ್ ಮತ್ತು 7) ಮುಸ್ತಫಾ ಅಲ್ಲಾಬಕ್ಸ್ ಸುತಾರ್ ಅವರು ಸೇರಿ ಅಕ್ರಮವಾಗಿ ಮದುವೆ ಪ್ರಮಾಣಪತ್ರ ಸೃಷ್ಟಿಸಿದ್ದು, ನಕಲಿ ಮುದ್ರೆ ಹಾಗೂ ನಕಲಿ ಸಹಿ ಬಳಸಿದ್ದಾರೆ ಎಂದು ತಿಳಿಸಿದ್ದಾರೆ..
03.10.2025 ರಿಂದು ಅಂಜುಮನ್ ಇಸ್ಲಾಂ ಕಮೀಟಿ ಆಡಳಿತವನ್ನು ಜಿಲ್ಲಾ ವಕ್ಪ ಅಧೀನದಲ್ಲಿ ಇರುತ್ತದೆ. ಈ ಸಂಸ್ಥಗೆ ಯಾವುದೇ ಖಾಸಗಿ ವ್ಯಕ್ತಿಗೆ ಅಥವಾ ಹಳೆಯ ಆಡಳಿತ ಮಂಡಳಿಯ ಸದಸ್ಯರಗಿ ಸಂಸ್ಥೆಯ ಮಧವಿ ಪ್ರಮಾಣ ಪತ್ರ ನೀಡಲು ಹಾಗೂ ಸಂಸ್ಥೆಯ ಮೂಹರ ಬಳೆಸಲು ಯಾವುದೇ ಕಾನೂನು ಬದ್ಧ ಅಧಿಕಾರ ಹೊಂದಿರುವುದಿಲ್ಲ. ಈ ರೀತಿಯ ನಕಲಿ ದಾಖಲೆ ಸೃಷ್ಟಿಸಿ ಸಂಸ್ಥೆಗೆ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಜ್ಮಾ ಇರ್ಷಾದ ಮುಕಾಶಿ ವಕ್ಪ ನಿರೀಕ್ಷಕರು ಜಿಲ್ಲಾ ವಕ್ಪ ಕಚೇರಿ ವಿಜಯಪುರ ಅವರು ಆಗ್ರಹಿಸಿದ್ದಾರೆ
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.