ರಾಷ್ಟ್ರೀಯ ಜಂತುಹುಳ ನಿವಾರಣ ಕಾರ್ಯಕ್ರಮಕ್ಕೆಸಹಕರಿಸಿ ಡಾ ಆರ ಟಿ ಕೊಳೆಕರ್ ಟಿ.ಹೆಚ.ಓ
ಇಂಡಿ — ರಾಷ್ಟ್ರೀಯ ಜಂತುಹುಳ ನಿವಾರಣ ಕಾರ್ಯಕ್ರಮ ಹಿರೇಬೇನೂರು ಗ್ರಾಮದ ವಿಶ್ವ ಭಾರತಿ ಪ್ರೌಢಶಾಲಾ ಮಕ್ಕಳಿಗೆ ಜಂತು ಹುಳ ನಾಶ ಮಾತ್ರೆಗಳು ವಿತರಣೆ ಚೇಪಿಸುವ ಮೂಲಕ ಡಾ ಆರ್ ಟಿ ಕೂಳೇಕರ್ ತಾಲುಕ ಆರೋಗ್ಯ ಅಧಿಕಾರಿಗಳು ಚಾಲನೆ ನೀಡಿ 1 ವರ್ಷ ಮೇಲ್ಪಟ್ಟು 19 ವರ್ಷದ ತನಕ ಅಂಗನವಾಡಿ ಹಾಗೂ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಎಲ್ಲಾ ಮಕ್ಕಳಿಗೆ ಮಾತ್ರೆಗಳು ಸೇವನೆ ಚಿಪಿಸುವ ಮೂಲಕ ಅಂಗನವಾಡಿ ಕೇಂದ್ರಗಳು ಸೇರಿದಂತೆ.ಸರ್ಕಾರಿ ಹಾಗೂ ಖಾಸಗಿ ಶಾಲಾ ಮುಖ್ಯಸ್ಥರು ಅನುಷ್ಠಾನಗೊಳಿಸಲು ಸಹಕರಿಸಬೇಕೆಂದು ಮನವಿ ಮಾಡಿದರು
ಮಕ್ಕಳ ಕಲಿಕೆಯಲ್ಲಿ ಹಿಂದುಳಿಯದಂತೆ. ರಕ್ತಹೀನತೆ ನಿವಾರಣೆಗೆ ಅಪೌಷ್ಟಿಕತೆ ಹೋಗಲಾಡಿಸಲು ಮಕ್ಕಳ ಬೆಳವಣಿಗೆಗೆ ಈ ಮಾತ್ರೆಗಳು ಪೂರಕವಾಗಿವೆ ಮತ್ತು ಮಕ್ಕಳ ಹೊಟ್ಟೆಯಲ್ಲಿ ಅತಿ ಹೆಚ್ಚು ಜಂತುಹುಳಗಳು ಇದ್ದಲ್ಲಿ ಜಂತು ನಾಶಕ ಅಲ್ಬೆಂಡೋಜಲ್ ಮಾತ್ರೆಗಳು ಚಿಪುವ ಮೂಲಕ ಸೇವನೆ ಮಾಡಿದಾಗ ಕೆಲವು ಮಕ್ಕಳಿಗೆ ವಾಕರಿಕೆ ತಲೆಸುತ್ತುವಿಕೆ ವಾಂತಿ ಆಗಬಹುದು. ಪ್ರಾಣ ಅಪಯಾವಿಲ್ಲ ಭಯಪಡುವ ಅಗತ್ಯವಿಲ್ಲ ಹೇಳಿದರು
ಪ್ರಸ್ತುತ ಸಂದರ್ಭದಲ್ಲಿ
ಶ್ರೀ ವಿಜಿ ಕಲ್ಮನೆ ಶಾಲಾ ಮುಖ್ಯ ಗುರುಗಳು ಅಧ್ಯಕ್ಷತೆ ವಹಿಸಿದರು ಡಾ. ಶಿವಾನಂದ ಮುಂಡೆವಾಡಿ ವೈದ್ಯಾಧಿಕಾರಿಗಳು ಎಸ್ ಆರ್ ಗೊಟ್ಯಾಳ. ಹಿರಿಯ ಆರೋಗ್ಯ ನಿರಕ್ಷಣಾಧಿಕಾರಿಗಳು. ಸಂಜೀವ್ ಕುಮಾರ್ ಅಂಕಲಗಿ ಆರೋಗ್ಯನೀಕ್ಷಣಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು