ಇಂಡಿ: ಶಿಕ್ಷಣದೊಂದಿಗೆ ಸಂಸ್ಕಾರ ಹಾಗೂ ವ್ಯವಹಾರಿಕ ಜ್ಞಾನ ಯಾವ ವಿದ್ಯಾರ್ಥಿಗೆ ದೊರೆಯುತ್ತದೆ ಆ ವಿದ್ಯಾರ್ಥಿ ಜೀವನದಲ್ಲಿ ಗುರಿ ಸಾಧಿಸಲು ಸಾಧ್ಯ ಎಂದು ಬಿ ಡಿ ಪಾಟೀಲ್ ಅವರು ಹೇಳಿದರು.
ಅವರು ಇಂಡಿ ತಾಲೂಕಿನ ಹಿರೇಬೇಗನೂರು ಗ್ರಾಮದಲ್ಲಿರುವ ವಿಶ್ವ ಭಾರತಿ ವಿದ್ಯಾ ಕೇಂದ್ರ ಶಿಕ್ಷಣ ಸಮೂಹದ ವಿಶ್ವ ಭಾರತಿ ಉತ್ಸವದ ಎರಡನೇ ದಿನದ ದಿನದ ಮಕ್ಕಳ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಂಸ್ಕಾರದೊಂದಿಗೆ ಸಿಗುವ ಶಿಕ್ಷಣವು ಅತ್ಯಂತ ಶ್ರೇಷ್ಠ ಗುಣಮಟ್ಟದ್ದಾಗಿರುತ್ತದೆ.
ಈ ನಿಟ್ಟಿನಲ್ಲಿ ವಿಶ್ವ ಭಾರತಿ ಉತ್ಸವದ ಅಡಿಯಲ್ಲಿ ಮತ ಪಿತೃ ವಂದನ ಕಾರ್ಯಕ್ರಮದಲ್ಲಿ ತಂದೆ ತಾಯಿಗಳ ಪಾದಪೂಜೆ ಮಾಡಿಸಿರುವುದು ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸುತ್ತದೆ, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಹಲೋ ವಿವಿಧ ವೈಜ್ಞಾನಿಕ ತತ್ವಗಳ ಅಡಿಯಲ್ಲಿ ವಿಜ್ಞಾನದ ಪ್ರಯೋಗದ ಮಾದರಿಗಳನ್ನು ವಿದ್ಯಾರ್ಥಿಗಳು ಅತ್ಯದ್ಭುತವಾಗಿ ಮಾಡಿದ್ದಾರೆ.
ಅದರಲ್ಲೂ ಇಂದು ಅತ್ಯಂತ ವಿಶಿಷ್ಟವಾದ ಮಕ್ಕಳಲ್ಲಿ ವ್ಯವಹಾರಿಕ ಜ್ಞಾನವನ್ನು ಬೆಳೆಸುವ ನಿಟ್ಟಿನಲ್ಲಿ ಮಕ್ಕಳ ಸಂತೆಯಲ್ಲಿ ಎಲ್ಲ ಬಗೆಯ ವಸ್ತುಗಳನ್ನು ಮಾರಾಟ ಮತ್ತು ಕೊಂಡುಕೊಳ್ಳುವಿಕೆ ವಿದ್ಯಾರ್ಥಿಗಳಿಂದ ನಡೆಯಿತು. ಸಾಯಂಕಾಲ ಸಂಸ್ಕೃತಿಕ ಕಾರ್ಯಕ್ರಮಗಳು ಹಲವು ವಿಶಿಷ್ಟವಾದ ಕಾರ್ಯಕ್ರಮಗಳನ್ನು ಈ ಸಂಸ್ಥೆ ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಬೆಳೆಸುವಲ್ಲಿ ತಾಲೂಕಿನಲ್ಲಿ ಜಿಲ್ಲೆಯಲ್ಲಿ ಮಾದರಿ ಶಾಲೆಯಾಗಿ ಹೊರಹೊಮ್ಮಿದೆ ಎಂದರು. ಈ ಭಾಗದಲ್ಲಿ ಕಲ್ಮನಿ ಸಹೋದರರು ಶಿಕ್ಷಣ ಕ್ರಾಂತಿಯನ್ನೇ ಮಾಡಿದ್ದಾರೆ ಎಂದರು.
ತಾಲೂಕ ಬಿಜೆಪಿ ಮುಖಂಡರಾದ ಶ್ರೀ ಕಾಸು ಗೌಡ್ ಬಿರಾದರವರು ಮಾತನಾಡಿ ಗೊತ್ತೇಕ ನಮ್ಮ ತಾಲೂಕಿನಲ್ಲಿ ಇಂಥ ವಿಶಿಷ್ಟವಾದ ಕಾರ್ಯಕ್ರಮಗಳು ಯಾವ ಶಾಲೆಯು ಕೂಡ ಮಾಡಿರುವುದಿಲ್ಲ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ತಂದೆ ತಾಯಿಗಳನ್ನು ಗೌರವಿಸುವ ವಿಶಿಷ್ಟವಾದ ಕಾರ್ಯಕ್ರಮವನ್ನು ವಿಜ್ಞಾನ ವಸ್ತು ಪ್ರದರ್ಶನ ಮಕ್ಕಳ ಸಂತೆ ಮಕ್ಕಳಿಂದ ಸಂಸ್ಕೃತಿ ಕಾರ್ಯಕ್ರಮ ಹೀಗೆ ಹಲವು ವಿಶಿಷ್ಟವಾದ ಕಾರ್ಯಕ್ರಮಗಳಿಂದ ನಿಜವಾಗಲೂ ಇದೊಂದು ಉತ್ಸವವಾಗಿ ಮಾರ್ಪಟ್ಟಿದೆ ಎಂದರು.
ಸಾನಿಧ್ಯವನ್ನು ವಹಿಸಿಕೊಂಡಿರುವ ಆಳೂರ ಸಿದ್ದಾರೋಡ ಮಠದ ಶ್ರೀ ಶಂಕರಾನಂದ ಪೂಜ್ಯರು ಮಾತನಾಡಿ ಈ ಗ್ರಾಮೀಣ ಭಾಗದಲ್ಲಿ ವಿಶ್ವ ಭಾರತಿ ಸಂಸ್ಥೆ ಶಿಕ್ಷಣ ಕ್ರಾಂತಿಯನ್ನು ಮಾಡಿ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಸಫಲವಾಗಿದೆ. ಇಲ್ಲಿನ ಮಕ್ಕಳಲ್ಲಿ ಶಿಕ್ಷಕರು ಬೆಳೆಸಿರುವ ಸಂಸ್ಕಾರ ಸಂಸ್ಕೃತಿ ಶಿಕ್ಷಣ, ಅತ್ಯಂತ ಉತ್ಕೃಷ್ಟ ಮಟ್ಟದಾಗಿದೆ ಗಳನ್ನು ಕಲಿಸಿದರೆ ಇಂತಹ ಶಾಲೆಯಲ್ಲಿ ಕಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಳೆದ ವರ್ಷ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಬಹುಮಾನ ವಿತರಿಸಿದರು ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ 4ರಿಂದ 10ನೇ ತರಗತಿವರೆಗಿನ 14 ವಿದ್ಯಾರ್ಥಿಗಳಿಗೆ ಒಟ್ಟು 2.5 ಲಕ್ಷ ಮೊತ್ತದ ಹಣವನ್ನು ಹಿಂತಿರುಗಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಗರಣಮ್ಯ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀ ಹಣಮಂತ ಕಂಡೇಖರವರು ವಹಿಸಿಕೊಂಡು ಮಾತನಾಡಿ ಈ ಹಿಂದೆ ಮಂಗಳೂರು, ಉಡುಪಿಗೆ ಓದಲು ಮಕ್ಕಳನ್ನು ಕಳುಹಿಸುತ್ತಿದ್ದೆವು ಇಂಥ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ಸಂಸ್ಥೆ ನಮ್ಮ ಮಧ್ಯದಲ್ಲಿ ಇರುವುದು ನನಗೆ ಸಂತೋಷ ತಂದಿದೆ ಎಂದರು. ಸಾಯಂಕಾಲ ಸಂಸ್ಕೃತಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿಕೊಂಡು ಆಶೀರ್ವಚನ ನೀಡಿದ ರೋಡಗಿಯ ಕಲ್ಮನೆ ಸಹೋದರರು ಜೋಡಿತ್ತಿನಂತೆ ಈ ಶಿಕ್ಷಣ ಸಂಸ್ಥೆ ಕಟ್ಟಿ ಈ ಭಾಗದ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಅವಿರತವಾದ ಶ್ರಮವನ್ನ ವಹಿಸುತ್ತಿದ್ದು ಅವರಿಗೆ ಗ್ರಾಮಸ್ಥರು ಸುತ್ತಲಿನ ಗ್ರಾಮದ ಗಣ್ಯರು ನಾವೆಲ್ಲರೂ ಇನ್ನಷ್ಟು ಸಹಕಾರ ನೀಡಬೇಕೆಂದು ರೋಡಗಿ .ಶ್ರೀ ಅಭಿನವ ಶಿವಲಿಂಗೇಶ್ವರ ಪೂಜ್ಯರು ಹೇಳಿದರು.
ಸಂಸ್ಕೃತಿಕ ಕಾರ್ಯಕ್ರಮವನ್ನು ಗ್ರಾಮದ ಕಾಂಗ್ರೆಸ್ ಯುವ ಮುಖಂಡರು ಪಿಕೆಪಿಎಸ್ ಉಪಾಧ್ಯಕ್ಷರಾದ ಶ್ರೀ ಭೀಮರಾಯ ಮೇತ್ರಿ ರವರು ಉದ್ಘಾಟಿಸಿದರು.ವಾರ್ಷಿಕ ಕ್ರೀಡಾಕೂಟದಲ್ಲಿ ವೈಯಕ್ತಿಕ ಹಾಗೂ ಗುಂಪು ಆಟಗಳಲ್ಲಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಮೆಡಲ್ ಹಾಗೂ ಬಾರಿತೋಷಕ ಪ್ರಶಸ್ತಿ ಪತ್ರ ವಿತರಿಸಲಾಯಿತು . ವಿವಿಧ ಹೊಸ್ತಿ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೂ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಶ್ರೀ ಶಂಕರಗೌಡ ಬಿರಾದಾರ್. ಅಧ್ಯಕ್ಷರಾದ ಶ್ರೀ ವಿ ಜಿ ಕಲ್ಮನಿ ಆಡಳಿತ ಅಧಿಕಾರಿಗಳಾದ ಶ್ರೀ ಶ್ರೀದೇವಿ ಕಲ್ಮನಿ, ಅರವಿಂದ ಮೈದರಗಿ ಗೌರವಾಧ್ಯಕ್ಷರಾದ ಶ್ರೀ ಸಿದ್ದಪ್ಪ ಕಲ್ಮನಿ ಸೋಮನಾಥ್ ಕುಂಬಾರ್,ಗುರಪ್ಪ ಕರ್ಜಗಿ, ಗುರಣ್ಣ ಪವಾಡಿ, ನೀಲಪ್ಪ ಕರ್ಜಗಿ ದುಂಡಪ್ಪ ಮೈದುರಿಗೆ ಶಾಲೆಯಲ್ಲಿ ಶಾಲೆಯ ಗುರುಗಳು ಗುರುಮಾತು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಪಿ ಜಿ ಕಲ್ಮನಿ ನಿರೂಪಿಸಿ , ಶ್ರೀ ಸಚಿನ್ ಅಡಗುಂಡಿ ಸ್ವಾಗತಿಸಿ, ಶಿವಾನಂದ ಕಲ್ಮನಿ ವಂದಿಸಿದರು.