ಝಳಕಿ ಬಸ್ಸ ನಿಲ್ದಾಣದಲ್ಲಿ ಕುಡಿಯುವ ನೀರಿಗಾಗಿ ಪರದಾಟ.
ಝಳಕಿ : ಇಂಡಿ ತಾಲೂಕಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಬಸ್ಸ ನಿಲ್ದಾಣದಲ್ಲಿ ಪ್ರಯಾಣಿಕರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ, ವಿದ್ಯಾರ್ಥಿಗಳು ನೀರಿಲ್ಲದೆ ಯಾರಿಗೇಳೋಣ ಸರ ನಮ್ಮ ಗೋಳು ಅಂತಾ ಕೈ ಮಾಡಿ ತೋರಿಸುವ ದೃಶ್ಯ ಕಾಣಬಹುದು.
ಝಳಕಿ ಬಸ್ಸ ನಿಲ್ದಾಣದ ಕೊಳವೆ ಭಾವಿ ಸಂಪೂರ್ಣ ಕಸದ ತೊಟ್ಟಿಯಲ್ಲಿ ಮುಚ್ಚಿದೆ, ಇಲ್ಲಿ ಕಾಣುವ ದೃಶ್ಯ ಎಲ್ಲರಿಗೂ ತಿಳಿಯುವಂತಹ ವಿಷಯ, ಸುಮಾರು 15 ದಿನಗಳಿಂದ ಕೊಳವೆ ಭಾವಿಯ ನೀರು ಬಂದಾಗಿದ್ದು, ಇಲ್ಲಿನ ಅಧಿಕಾರಿಗಳು ಕಂಡು ಕಾಣದಂತೆ ಕಣ್ಣು ಮುಚ್ಚಿಕುಳಿತಿದ್ದಾರೆ, ಇದಕ್ಕೆ ಕಾರಣ ತಿಳಿಯದಾಗಿದೆ, ಬಸ್ಸ ನಿಲ್ದಾಣದಲ್ಲಿ ದಿನಾಲು ಸಾವಿರಾರು ಹಿರಿಯರು, ಯುವಕರು, ತಾಯಂದಿರರು, ವಿದ್ಯಾರ್ಥಿಗಳು ಬಂದು ಹೋಗುವ ಸ್ಥಳವಾಗಿದ್ದು, ಇಲ್ಲಿ ನೀರಿನ ಬಹಳ ಅವಶ್ಯಕತೆ ಇದೆ.
ಇಲ್ಲಿನ ಕೊಳವೆ ಭಾವಿ ತುಂಬಾ ಗಳಿಜಾಗಿದ್ದು, ಕಸದ ತೊಟ್ಟಿಯಲ್ಲಿ ಮುಳುಗಿದೆ, ಇದರ ಸುತ್ತಲು ಹಂದಿಗಳ ಕಾಟ, ಬೋರವೆಲ್ಲ ಮೋಟರ ಕೆಟ್ಟದ್ದು, ಇದನ್ನು ತೆಗೆದು ಕೊಳವೆಯನ್ನು ಸೆಳೆಸಿ ಮತ್ತೆ ಅಲ್ಲಿ ಮೋಟರ ಅಳವಡಿಕೆ ಮಾಡಬೇಕೆನ್ನುವದು ಗ್ರಾಮದ ವಿಜಯಪುರ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರು ರಾಘವೇಂದ್ರ ಕಾಪಸೆ ಇವರು ಪತ್ರಿಕೆ ಮೂಲಕ ಎಚ್ಚರಿಕೆ ನೀಡಿದ್ದಾರೆ , ಹೀಗೆ ನಡೆದಲ್ಲಿ ಬೇಸಿಗೆ ಕಾಲದಲ್ಲಿ ಬಹು ದೊಡ್ಡ ಸಮಸ್ಸೆ ಎದುರಾಗೋದು ಸಹಜ, ಒಂದು ಬಸ್ಸ ನಿಲ್ದಾಣದಲ್ಲಿ ನೀರಿನ ವ್ಯವಸ್ಥೆ ಕಲ್ಪಿಸದ ಸರ್ಕಾರ ಗ್ರಾಮದ ಸಮಸ್ಸೆ ಹೇಗೆ ಪರಿಹರಿಸಬಹುದು ಎನ್ನೋದು ಪ್ರಶ್ನೆ? ಎಂದರು.