ಪತ್ರಕರ್ತರು, ಕುಟುಂಬದವರಿಗೆ ಕಣ್ಣಿನ ತಪಾಸಣಾ ಶಿಬಿರ
ನೇತ್ರದಾನ ಮಾಡಲು ಘೋಷಣೆ ಮಾಡಿದ ಇಬ್ಬರು ಪತ್ರಕರ್ತರು
ಬಾಗಲಕೋಟೆ: ಪ್ರತ್ಠಿತ ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಶುಕ್ರವಾರ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಜಿಲ್ಲೆಯ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ ಅಂಗಡಿ, ಬಿಡಿ ವರದಿಗಾರ ನರಸಿಂಹಮೂರ್ತಿ ಘೋಷಣೆ ಮಾಡಿದರು.
ಉಚಿತ ಕಣ್ಣಿನ ತಪಾಸಣಾ ಶಿಬಿರದ ಅಧ್ಯಕ್ಷತೆ ವ”ಸಿ ಮಾತನಾಡಿದ ಮಹೇಶ ಅಂಗಡಿಯವರು, ನೇತ್ರದಾನ ಮಹಾದಾನವಾಗಿದ್ದು ನಮ್ಮ ಮರಣಾನಂತರ ಮತ್ತೊಬ್ಬರಿಗೆ ನಮ್ಮ ಕಣ್ಣುಗಳು ಬೆಳಕಾಗಲಿ ಎಂಬ ಉದ್ದೇಶದಿಂದ ಮರಣಾನಂತರ ಕಣ್ಣಿನ ನೇತ್ರದಾನ ಮಾಡುವುದಾಗಿ ಹೇಳಿದರು.
ಸಂಘವು ಕಳೆದ ೩೦ ವರ್ಷಗಳಿಂದ ಕಾರ್ಯನಿರತ ಪತ್ರಕರ್ತರ ಸಂಘವು ಸಕ್ರಿಯವಾಗಿ ಕಾರ್ಯನಿರ್ವ”ಸುತ್ತಿದ್ದು, ಪ್ರಸ್ತುತ ೩೫೦ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಸಂಘದ ಸದಸ್ಯರಿಗೆ “ಜಯಪುರ ಬಿಎಲ್ಡಿ ಸಂಸ್ಥೆಂದ ಇತ್ತೀಚಿಗೆ ಹೆಲ್ತ್ ಕಾರ್ಡ್ ನೀಡಲಾಗಿದೆ ಎಂದು ಹೇಳಿದರು.
ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆಯ ಡಾ. ಸಂಜೀವ್ ಕುಲಕರ್ಣಿ ಮಾತನಾಡಿ, ಪತ್ರಕರ್ತರು ಸಮಾಜಕ್ಕೆ ನೀಡುವ ಸೇವೆಯನ್ನು ಗುರುತಿಸಿ ಬೆಂಬಲಿಸುವ ಉದ್ದೇಶದಿಂದ ಕಣ್ಣಿನ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಪ್ರತಿಯೊಬ್ಬರೂ೪೦ ವರ್ಷ ಮೇಲ್ಪಟ್ಟವರಿಗೆ ಕನ್ನಡಕ ಅವಶ್ಯಕವಾಗುತ್ತಿದ್ದು, ಶಿಬಿರದಲ್ಲಿ ತಪಾಸಣೆ ಮಾಡಿದವರಿಗೆ ಸರ್ಚ್ ಸಂಸ್ಥೆಯ ಮೂಲಕ ಉಚಿತವಾಗಿ ಕನ್ನಡಕ “ತರಿಸಲಾಗುತ್ತದೆ ಎಂದು ಹೇಳಿದರು.
ಟಿ”, ಕಂಪ್ಯೂಟರ್ ಹಾಗೂ ಮೊಬೈಲ್ ಬಳಸುವವರಿಗೆ “ಶೇಷ ರಿಯಾತಿ ದರದಲ್ಲಿ ಒಳ್ಳೆಯ ಲೆನ್ಸ್ಗಳನ್ನು ಹೊಂದಿದ ಕನ್ನಡಕ ಒದಗಿಸಲಾಗುವುದು. ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಅಗತ್ಯ”ದ್ದಲ್ಲಿ ಶಸ್ತ್ರಚಿಕಿತ್ಸೆಗೆ ಎಂ.ಎಂ. ಜೋಶಿ ಆಸ್ಪತ್ರೆಯ ಸಂಪೂರ್ಣ ಸೌಲಭ್ಯಗಳನ್ನು ಸಹಕಾರದೊಂದಿಗೆ ಒದಗಿಸಲಾಗುತ್ತದೆ ಎಂದರು.
ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಉಪಕರಣಗಳಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನ” ಮಾಡಿದರು.
ಸರ್ಚ್ ಸಂಸ್ಥೆಯ ವೆಂಕಟೇಶ್ ಮಾತನಾಡಿ, ಸರ್ಚ್ ಸಂಸ್ಥೆ ಕಳೆದ ೩೦ ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಎಂ.ಎಂ. ಜೋಶಿ ಆಸ್ಪತ್ರೆಯ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸುತ್ತಿದೆ ಎಂದು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ ಗಾಣಿಗೇರ ಸ್ವಾಗತಿಸಿ, ವಂದಿಸಿದರು.