ಇಂಡಿ: ನಗರದ ಎಸ್ಜಿಬಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಮೌಲಾನಾ ಜಿಯಾವುಲ್ ಹಕ್ ಉಮರಿ ಅವರು, ನಾವು ಇಂದು ಸ್ವತಂತ್ರವಾಗಿ ಬದುಕುತ್ತಾ, ನಿರ್ಭಯವಾಗಿ ಓಡಾಡುತ್ತಾ ಇದ್ದೇವೆ ಎಂದರೆ ಅದು ನಮ್ಮ ಸಂವಿಧಾನದ ಮಹತ್ವದ ಕೊಡುಗೆ.
ಭಾರತದ ಸಂವಿಧಾನವು ವಿಶ್ವದಲ್ಲೇ ಅತ್ಯುತ್ತಮ ಮತ್ತು ಬಲಿಷ್ಠ ಸಂವಿಧಾನವಾಗಿದೆ. ಇದು ಪ್ರತಿಯೊಬ್ಬ ನಾಗರಿಕರಿಗೆ ಮಾತಿನ ಸ್ವಾತಂತ್ರ್ಯ, ಸಮಾನತೆ ಮತ್ತು ಹಕ್ಕುಗಳನ್ನು ನೀಡಿದೆ. ನಮ್ಮ ದೇಶದಲ್ಲಿ ಎಲ್ಲರೂ ಗೌರವದಿಂದ ಬದುಕುವ ಅವಕಾಶವಿದೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷರಾದ ಸತ್ತಾರಸಾಬ ಬಾಗವಾನ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಮಾಜಿ ಪುರಸಭೆ ಸದಸ್ಯ ಜೈನುದ್ದಿನ ಬಾಗವಾನ, ಶಬ್ಬಿರ ಖಾಜಿ, ಜಬ್ಬಾರ ಅನ್ನಾ ಅರಬ, ಮೌಲಾನಾ ಅಲ್ಲಾಬಕ್ಷ ಉಮರಿ, ಮೌಲಾನಾ ಅಜೀಜ ಫೈಜಿ, ಮೌಲಾನಾ ಮಕ್ತಾರ ಉಮರಿ, ಮೌಲಾನಾ ಶೋಯಿಬ್ ಉಮರಿ, ಅಬ್ದುಸಲ್ಲಾಮ ಬಾಗವಾನ, ಅಫಜಲ್ ಹವಾಲ್ದಾರ್, ಇಬ್ರಾಹಿಂ ಅತ್ತಾರ, ಅಬಿಶಾಮ ಹವಾಲ್ದಾರ್, ನಿಸಾರ ಪಠಾಣ, ಖಲಿಲ್ ಇಂಡಿಕರ, ಮಹಿಬೂಬ ಬಳಗಾನೂರ, ಎಸ್.ಜಿ.ಬಿ. ಆಂಗ್ಲ ಶಾಲೆ ಮುಖ್ಯ ಗುರುಗಳಾದ ರಾಜೇಂದ್ರ ಪವಾರ, ಅಲಕಾದೀರ ಉರ್ದು ಪ್ರಾಥಮಿಕ ಶಾಲೆ ಮುಖ್ಯ ಗುರುಮಾತೆ ರೋಬಿನಾ ಬಾಗವಾನ, ಎಸ್ ಜಿ ಬಿ ಉರ್ದು ಪ್ರೌಢ ಶಾಲೆ ಮುಖ್ಯ ಗುರುಗಳು ವಸೀಮ ಬೋಸ್ಗೆ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು. ದೇಶಭಕ್ತಿಗೀತೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮಕ್ಕೆ ವಿಶೇಷ ಕಳೆ ನೀಡಿದವು.