ಆಲಮೇಲ ಹಾಗೂ ಸಿಂದಗಿ ಪೊಲೀಸ್ ದೌರ್ಜನ್ಯ ಆರೋಪ – ಇಂಡಿ ಪಟ್ಟಣದ ಚಿನ್ನ ವ್ಯಾಪಾರಿಗಳಿಂದ ತೀವ್ರ ಆಕ್ರೋಶ
ಇಂಡಿ: ತಾಲೂಕಿನ ಹೀರೆ ಬೇನೂರ ಗ್ರಾಮದಲ್ಲಿ ಚಿನ್ನ ವ್ಯಾಪಾರಿ ಮಹಾಂತೇಶ ಅರಜುನಗಿ ಅವರನ್ನು ಯಾವುದೇ ಸ್ಪಷ್ಟ ಸಾಕ್ಷ್ಯವಿಲ್ಲದೇ ಆಲಮೇಲ ಹಾಗೂ ಸಿಂದಗಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ 26 ಗಂಟೆಗಳ ಕಾಲ ವಶದಲ್ಲಿಟ್ಟು ಹಿಂಸೆ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ವಿಷಯಕ್ಕೆ ಸಂಬಂಧಿಸಿ ಇಂದು ಚಿನ್ನ ವ್ಯಾಪಾರಿಗಳು ಪತ್ರಿಕಾಗೋಷ್ಠಿ ನಡೆಸಿ, ಪೊಲೀಸರು ಚಿನ್ನ ವ್ಯಾಪಾರಿಗಳ ಮೇಲೆ ಅನ್ಯಾಯ, ದೌರ್ಜನ್ಯ ಹಾಗೂ ಹಿಂಸೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಮಹಾಂತೇಶ ಅರಜುನಗಿ ಅವರನ್ನು ಬಂಧನದ ವೇಳೆ ಗಂಭೀರವಾಗಿ ಹಲ್ಲೆ ಮಾಡಲಾಗಿದ್ದು, ಎರಡು ಹಲ್ಲುಗಳು ಮುರಿದಿವೆ ಎಂದು ಅವರು ದೂರಿದರು.
ಮಹಂತೇಶ ಮೇಲೆ ಕಳತನವಾದ ಚಿನ್ನ ಖರೀದಿಸಿದ ಆರೋಪ ಕೇಳಿ ಬಂದಿದರಿಂದ ಅವರನ್ನು ಪೋಲಿಸರು ಹೀರೆಬೇನೂರ ಗ್ರಾಮದಲ್ಲಿ ಅವರನ್ನು ಹೊಡಿಕಿಕೊಂಡು ಹೊಗಿರುತ್ತಾರೆ ಅವರ ಇಲ್ಲದ್ದರಿಂದ ಕಾರಣ ಪೋಲಿಸರು ಅವರ ಇಂಡಿಯಲ್ಲಿ ಅವರ ಕಾಕಾನವರ ಅಂಗಡಿಯಲ್ಲಿ ತಮ್ಮ ಅಂಗಡಿಯಲ್ಲಿ ಮಾರಾಟ ಮಾಡಲು ವಸ್ತ್ರಗಳನ್ನು ಖರಿದಿಸಲು ಬಂದಿದ್ದು ಈ ಸಮಯದಲ್ಲಿ ಪೋಲಿಸರು ಇಂಡಿಯಲ್ಲಿ ಮಹಾಂತೇಶ ಅವರನ್ನು ಬಂಧಿಸಲಾಗಿತ್ತು.
ಆದರೆ ವಿಚಾರಣೆಯ ನಂತರ ಯಾವುದೇ ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿತ್ತು. ಆದರೂ ಜ. 9ರಂದು ಮತ್ತೆ ಪೊಲೀಸರು ಅವರ ಅಂಗಡಿಗೆ ನೋಟಿಸ್ ಅಂಟಿಸಿ, “ಮಹಾಂತೇಶನೇ ಕಳವು ಚಿನ್ನ ಖರೀದಿಸಿದ್ದಾನೆ” ಎಂದು ಉಲ್ಲೇಖಿಸಿರುವುದು ವ್ಯಾಪಾರಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮಹಂತೇಶ ಅವರು ಈ ಆರೋಪವನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ.
“ಯಾವುದೇ ತಪ್ಪು ಮಾಡದೇ ಇದ್ದರೂ ಹಲ್ಲೆ ಯಾಕೆ?” ಎಂದು ಪ್ರಶ್ನಿಸಿದಾಗ, ‘ಮಹಾಂತೇಶನೇ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಪೊಲೀಸರು ಹೇಳುತ್ತಿದ್ದಾರೆ. ಇದು ಹೇಗೆ ಸಾಧ್ಯ ಎಂದು ವ್ಯಾಪಾರಿಗಳು ಪ್ರಶ್ನಿಸಿದ್ದಾರೆ.
ಇನ್ನು ಬಿಡುಗಡೆ ಮಾಡುವ ವೇಳೆ ಮಹಂತೇಶರಿಂದ 5–6 ಖಾಲಿ ಕಾಗದಗಳ ಮೇಲೆ ಸಹಿ ಪಡೆಯಲಾಗಿದೆ.
ಈ ದೌರ್ಜನ್ಯದಲ್ಲಿ ಅಲಮೇಲ ಪಿಎಸ್ಐ, ಸಿಂದಗಿ ಸಿಪಿಐ ಮತ್ತು ಆರು ಜನ ಪೋಲಿಸರು ಹಾಗೂ ಇಂಡಿ ಡಿವೈಎಸ್ಪಿ ಭಾಗಿಯಾಗಿದ್ದಾರೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.
ಈ ಕುರಿತು ಎಸ್ಪಿ ಅವರಿಗೆ ದೂರು ನೀಡಲಾಗಿದ್ದು, ತಪ್ಪಿತಸ್ಥರನ್ನು ಬಿಡುವುದಿಲ್ಲ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಭರವಸೆ ನೀಡಿದ್ದಾರೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಚಿನ್ನ ವ್ಯಾಪಾರಿಗಳ ರಕ್ಷಣೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಕೆ.ಪಿ. ನಂಜುಂಡಿ ಅವರು ರೂಪಿಸಿದ್ದು, ಗೃಹ ಸಚಿವ ಪರಮೇಶ್ವರ್ ಕೂಡ ಅವನ್ನು ಮಾನ್ಯತೆ ನೀಡಿದ್ದಾರೆ. ಆದರೆ ಆ ನಿಯಮಗಳನ್ನು ಉಲ್ಲಂಘಿಸಿ ಪೊಲೀಸರು ತಮ್ಮ ಸ್ವಯಿಚ್ಚೆಯಂತೆ ತಮ್ಮ ದರಬಾರು ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
“ಪೊಲೀಸರು ಸಾರ್ವಜನಿಕರ ರಕ್ಷಣೆಗೆ ಇದ್ದಾರೆ, ನಿರಪರಾಧಿಗಳನ್ನು ಹೊಡೆಯಲು ಅಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸಿ, ಅವರನ್ನು ವಜಾಗೊಳಿಸಬೇಕು. ಇಲ್ಲದಿದ್ದರೆ ನಾವು ಮೌನವಾಗಿರುವುದಿಲ್ಲ” ಎಂದು ಚಿನ್ನ ವ್ಯಾಪಾರಿಗಳು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಚಿನ್ನ ವ್ಯಾಪಾರ ಸಂಘದ ಅಧ್ಯಕ್ಷರಾದ ಸೋಮಶೇಖರ ಬಿರಾದಾರ, ವಿಜಯಕುಮಾರ, ಸಂದೀಪ ಧನಶಟ್ಟಿ, ನಾಮದೇವ ಡಂಗಾ, ಮಹಾಂತೆಶ ಅರಜುಣಗಿ, ಶ್ರೀಶೈಲ ಅರಜುಣಗಿ, ಪ್ರಭು ಹೂಸಮನಿ, ಸೇರಿದಂತೆ ಅನೇಕ ಚಿನ್ನ ವ್ಯಾಪಾರಸ್ಥರು ಇದ್ದರು.