ಇಂಡಿ : ವಿವೇಕಾನಂದರು ತಮ್ಮ ಶಕ್ತಿಯುತ ವ್ಯಕ್ತಿತ್ವ, ಅಪೂರ್ವ ವಾಗ್ಮೀಯತೆ, ಪ್ರಚೋದನಾತ್ಮಕ ಬರವಣಿಗೆ ಮೂಲಕ ನಮ್ಮ ಯುವಕರಲ್ಲಿ ನವೋತ್ಸಾಹ, ಸಂಸ್ಕೃತಿ ಬಗ್ಗೆ ಹೆಮ್ಮೆ ಮೂಡಿಸಿ, ನವಭಾರತ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕಿದರು ಎಂದು ಪ್ರಭಾರಿ ಮುಖ್ಯಗುರು ಮಾತೆ ಸರೋಜಿನಿ ಮಾವಿನ ಮರದ ಹೇಳಿದರು.
ತಾಲೂಕಿನ ಚಿಕ್ಕಬೇವನೂರ ಗ್ರಾಮದ ಎಚ್.ಪಿ.ಎಸ್ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.
“ಏಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ”
ಎಂಬ ಘೋಷವಾಕ್ಯವನ್ನು ಮಕ್ಕಳಿಂದ ಹೇಳಿ ಸುತ್ತ ವಿವೇಕಾನಂದರ ಅಮೇರಿಕಾ ಭಾಷಣವನ್ನು ಸ್ಮರಿಸುತ್ತಾ ತತ್ವಜ್ಞಾನಿ, ಸಿಡಿಲ ಮರಿ ಸಿಂಹ
ಸ್ವಾಮಿ ವಿವೇಕಾನಂದರು ಎಂದು ಕೊಂಡಾಡಿದರು.
ವಿವೇಕಾನಂದರ ಚಿಂತನೆಗಳು ವ್ಯಕ್ತಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಿ, ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಪ್ರೇರೇಪಿಸುತ್ತವೆ. ವಿಶ್ವದ ಎಲ್ಲ ಜನರ ನಡುವಿನ ಸೌಹಾರ್ದತೆ ಮತ್ತು ಏಕತೆ ಇಂದಿನ ಜಗತ್ತಿಗೆ ಅತಿ ಮುಖ್ಯ ಎಂದು ಹೇಳಿದರು
ಈ ಸಂದರ್ಭದಲ್ಲಿ ವಿವೇಕಾನಂದರ ವೇಷಭೂಷಣದಲ್ಲಿ ಕಾಣಿಸಿಕೊಂಡ 5ನೇ ತರಗತಿ ವಿದ್ಯಾರ್ಥಿನಿ ದೀಪಾ ಮದರಕಂಡಿ ಎಲ್ಲರ ಗಮನ ಸೆಳೆದಳು.
ರವಿ ವಾಲಿಕಾರ ನೀರೂರಿಸಿದರು, ಮಲ್ಲಿಕಾರ್ಜುನ ತಳವಾರ ವಂದಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಗುರುಮಾತೆ ಕೆ.ಆರ್.ಅವಟಿ,
ಎ.ಜಿ.ಆನೆಗುಂದಿ,
ಆರ್.ಎಂ.ಮುಜಾವರ, ಎಸ್.ಎಸ್.ನಿಪ್ಪಾಣಿ, ಸೇರಿದಂತೆ ಶಾಲೆಯ ಎಲ್ಲ ಮುದ್ದು ಮಕ್ಕಳು ಉಪಸ್ಥಿತರಿದ್ದರು.