ಸರ್ಕಾರದ ಆದೇಶ ವಿದ್ದರೂ ಸಾರಿಗೆ ಇಲಾಖೆ ಮಾತ್ರ ತನ್ನದೇ ದರ್ಪ ಶಾಹಿ ಆಡಳಿತ ನಡೆಸುತ್ತಿದೆ.
ಝಳಕಿ : ಹಿಂದಿನ ಸರ್ಕಾರದ ಸಚಿವರು ರಾಮಲು ರವರು ಇಂಡಿ ತಾಲೂಕಿನ ಬಳ್ಳೊಳ್ಳಿ ಗ್ರಾಮಕ್ಕೆ ಸಾರಿಗೆ ಇಲಾಖೆಯ ಎಲ್ಲಾ ಘಟಕದ ಬಸ್ಸಗಳು ನಿಲ್ಲುವಂತೆ ಆದೇಶ ಹೋದರಿಸಿದ್ದು, ಕೇವಲ ವಿಜಯಪುರ ಘಟಕದ ಅದರಲ್ಲೂ ಕೆಲವೊಂದು ಬಸ್ಸಗಳು ಮಾತ್ರ ಸೇತುವೆ ಕೆಳಗಡೆ ಬರುತ್ತವೆ ಗ್ರಾಮಸ್ಥರ ಆರೋಪ.
ಇನ್ನುಳಿದ ಎಲ್ಲ ಘಟಕದ ಬಸ್ಸಗಳು ಸೇತುವೆ ಕೇಳಗೂ ಬರೋದಿಲ್ಲ, ಮೇಲೆ ನಿಂತರು ನಿಲ್ಲಿಸದೆ ಹೋಗಿತ್ತಾರೆ, ಅದರಲ್ಲೂ ಚಿತ್ರದುರ್ಗ, ಹಳಿಯಾಳ, ಬೆಳಗಾಂವ ಘಟಕದ ಬಸ್ಸಗಳು ಹೆಚ್ಚಾಗಿ ಓಡಾಡುತ್ತವೆ ಯಾವುದು ಬಸ್ಸಗಳು ಕೆಳಗೆ ಬರೋದಿಲ್ಲ,
ಬಳ್ಳೊಳ್ಳಿ ಗಗ್ರಾಮ ಹೋಬಳಿ ಮಟ್ಟದಾಗಿದ್ದು, ಇಲ್ಲಿ ನಾಡಕಛೇರಿ, ಸರ್ಕಾರಿ ಶಾಲೆಗಳು, ಕಾಲೇಜು, ರಾಷ್ಟ್ರೀಕೃತ ಬ್ಯಾಂಕ್, ಆಸ್ಪತ್ರೆ ಹೀಗೆ ಎಲ್ಲ ಇಲಾಖೆಯ ಕಚೇರಿಗಳಿಗೆ ಬರುವಂಥ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು, ಸಿಂಬಂದಿಗಳಿಗೆ ತುಂಬಾ ತೊಂದರೆ ಯಾಗಿದೆ.
ಶಿಕ್ಷಕರು ಇವಾಗ ಸಮಯಕ್ಕೆ ಸರಿಯಾಗಿ ಬಂದು ತಮ್ಮ್ ಫೇಸ ಲಾಗಿನ ಆಗಬೇಕು, ಇಲ್ಲವಾದರೆ ಅಂದಿನ ದಿನ ಅವರಿಗೆ ಕಠಿಣವಾಗುತ್ತೆ, ಇಷ್ಟೆಲ್ಲ ಕಾನೂನು ಮಾಡುವ ಸರ್ಕಾರಕ್ಕೆ ನೌಕರರ, ವಿದ್ಯಾರ್ಥಿಗಳ ಕಷ್ಟ ಮಾತ್ರ ಅರ್ಥ ವಾಗೋದಿಲ್ಲ, ವಿದ್ಯಾರ್ಥಿಗಳು ಸಮಯಕ್ಕೆ ಬರದೇ ಹೋದಲ್ಲಿ ಪರೀಕ್ಷೆ ಬರೆಯಲು ಅವಕಾಶ ಇಲ್ಲಾ, ಇದನ್ನೆಲ್ಲಾ ಗಮನದಲ್ಲಿಟ್ಟು, ಜಿಲ್ಲಾಧಿಕಾರಿಗಳು, ಸಂಬಂಧ ಪಟ್ಟ ಅಧಿಕಾರಿಗಳು, ಶಾಸಕರು ಕೂಡಲೇ ಚಿತ್ರದುರ್ಗ, ಹಳಿಯಾಳ, ಬೆಳಗಾವಿ, ವಿಜಯಪುರ ಘಟಕದ ಬಸ್ಸುಗಳು ಬಳ್ಳೊಳ್ಳಿ ಗ್ರಾಮದ ಸೇತುವೆ ಕೆಳಗಡೆ ಬರುವಂತೆ, ನಿಲ್ಲಿಸುವಂತೆ ಅದೇಶ ನೀಡಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.