ವಿಜಯಪುರ : ವಾಲ್ಮೀಕಿ ನಿಗಮದ ಲೂಟಿ ರೂವಾರಿ ಸಚಿವ ನಾಗೇಂದ್ರ ರಾಜೀನಾಮೆ ಹೋರಾಟ.
ವಿಜಯಪುರ : ಕಾಂಗ್ರೆಸ್ ಸರ್ಕಾರದ ಸಚಿವರ ನಾಗೇಂದ್ರ ವಾಲ್ಮೀಕಿ ಸಮಾಜದ ಹಣ ಲೂಟಿ ಮಾಡಿರುವ ಆರೋಪ ಹೊತ್ತುಕೊಂದಂತಹ ಸಚಿವರಿಗೆ ಮತ್ತೆ ಡಿಕೆಶಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡೋದು ಎಷ್ಟರ ಮಟ್ಟಿಗೆ ನಿಮ್ಮ ಸರಕಾರ ಒಳ್ಳೆಯ ಸರ್ಕಾರ ಎಂದು ಗೊತ್ತಾಗುತ್ತೆ, ಕೂಡಲೆ ಬಿ.ನಾಗೇಂದ್ರ ರವರ ರಾಜೀನಾಮೆ ಕೊಡಲೇಬೇಕು ಎಂದು ವಿಜಯಪುರ ಜಿಲ್ಲಾ ಸಂಸದರು ರಮೇಶ ಜಿಗಜಣಗಿ ಆಕ್ರೋಶ ವ್ಯಕ್ತ ಪಡಿಸಿದರು.
ವಾಲ್ಮೀಕಿ ನಿಗಮದ ಅನುದಾನ ಲೂಟಿ ರೂವಾರಿ ಬಿ. ನಾಗೇಂದ್ರ ರಾಜೀನಾಮೆ ಅಗ್ರಹಿಸಿ ವಿಜಯಪುರ ನಗರದ ಅಂಬೇಡ್ಕರ್ ಸರಕನಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಬ್ರಹತ್ ಹೋರಾಟದಲ್ಲಿ ಮಾತನಾಡಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷರು ಗುರುಲಿಂಗಪ್ಪ ಅಂಗಡಿ ಮಾತನಾಡಿ ಕಾಂಗ್ರೆಸ್ ಸರಕಾರ ಇದು ಕುಂಭ ಕರಣನಂತೆ ನಿದ್ರೆ ಮಾಡುವ ಸರಕಾರ, ಇಷ್ಟೊಂದು ಭ್ರಷ್ಟಾಚಾರ ಮಾಡಿರುವದನ್ನು ಸಿದ್ರಾಮಯ್ಯ ಸರಕಾರದಲ್ಲಿ ಒಪ್ಪಿಕೊಂಡಂತಹ ಸಚಿವರನ್ನು ಮತ್ತೆ ಡಿಕೆಶಿ ಸರಕಾರದಲ್ಲಿ ಮತ್ತೆ ಸಚಿವ ಸ್ಥಾನ ನೀಡಿ ಇನ್ನಷ್ಟು ಭ್ರಷ್ಟಾಚಾರ ಮಾಡಲು ಅನುಕೂಲ ಮಾಡಿಕೊಟ್ಟಂತಾಗಿದೆ, ಸರಕಾರದಲ್ಲಿ ಭ್ರಷ್ಟಾಚಾರಿಗಳಿಗೆ ಮಣೆ ಹಾಕುವ ಸರಕಾರ ಅದುವೆ ಕಾಂಗ್ರೆಸ್ ಸರಕಾರ ಎಂದರು.
ಮಾಜಿ ಸಚಿವರು ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ ಹಗರಣಗಳ ಸರಮಾಲೆ ಹಾಕಿಕೊಂಡ ಸರಕಾರ ಕಾಂಗ್ರೆಸ್ ಸರ್ಕಾರ, ಲೂಟಿಕೋರರನ್ನು ತುಂಬಿಕೊಂಡು ಸರ್ಕಾರ ನಿರ್ಮಾಣ ಮಾಡುವ ಸರ್ಕಾರ ಕಾಂಗ್ರೆಸ್ ಸರಕಾರ, ನೀತಿ, ನಿಯಮ, ಸಂಸ್ಕಾರ ಇವೆಲ್ಲವನ್ನೂ ಮರೆತು, ಅನ್ಯಾಯದ ಸರಕಾರ, ಜನರ ಹಿತವನ್ನು ಬಯಸದೆ, ಜನರ, ನಿಗಮದ ಹಣವನ್ನು ಲೂಟಿ ಮಾಡಿ ನಿಮ್ಮ ಜೇಬು ತುಂಬಿಸಿಕೊಂಡು ನಾಚಿಕೆ ಇಲ್ಲದ ಸರ್ಕಾರ, ಇಂತಹ ಸರಕಾರ ರಾಜೀನಾಮೆ ಕೊಡಲೇಬೇಕು ಎಂದರು.
ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರು ರಾಘವೇಂದ್ರ ಕಾಪಸೆ ಮಾತನಾಡಿ ವಿಜಯಪುರ ಜಿಲ್ಲೆ ಪಂಚ ನದಿಗಳ ಬಿಡು ಎಂದು ಹೆಸರುವಾಸಿ ಜಿಲ್ಲೆ, ಆದರೆ ಇಲ್ಲಿನ ರೈತರು ನೀರಿಗಾಗಿ ಹಾಹಾಕಾರ ಪಡುವಂತಾಗಿದೆ, ಮಳೆಗಾಲದಲ್ಲಿ ಬರಗಾಲದ ವಾತಾವರಣ ನಿರ್ಮಾಣ ವಾದರೂ ರೈತರಿಗೆ ಯಾವುದೆ ತರನಾದ ಯೋಜನೆ ರೂಪಿಸದೆ, ರೈತರನ್ನು ಕಡೆಗಣಿಸುವದು ಸರಿಯಲ್ಲಾ, ಕೂಡಲೆ ವಿಜಯಪುರ ಜಿಲ್ಲೆಯನ್ನು ಬರಗಾಲ ಸರಬೇಕೆಂದು ಅಗ್ರಹಿಸಿದರು.