ಸ್ಲಮಂ ಬೋರ್ಡ್ ಮನೆ ಗಳ ಕಾಮಗಾರಿ ವಿಳಂಬ ಖಂಡಿಸಿ ಮನವಿ
ಇಂಡಿ.ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಸರ್ಕಾರ 2023/24ರಲ್ಲಿ ಸುಮಾರು 250 ಮನೆಗಳ ನಿರ್ಮಾಣಕ್ಕೆ ಕಾಮಗಾರಿ ಪ್ರಾರಂಭಿಸಿತು.ನಿಯಮದ ಪ್ರಕಾರ ಕೇವಲ 6 ತಿಂಗಳಲ್ಲಿ ಮನೆ ಕಟ್ಟಡ ಕಾಮಗಾರಿ ಮುಗಿಸಿ ಫಲಾನುಭವಿಗಳಿಗೆ ಗೃಹ ಪ್ರವೇಶದ ಭಾಗ್ಯ ನೀಡಬೇಕಾಗಿತ್ತು.ಆದರೆ ಸಂಬಂಧಪಟ್ಟ ಗುತ್ತಿಗೆದಾರ ಹಾಗೂ ಸಂಬಂಧಪಟ್ಟ ಇಲಾಖೆ ಸುಮಾರು 3/4ವರ್ಷಗಳು ಗತಿಸಿದರೂ ಬಡ ಫಲಾನುಭವಿಗಳಿಗೆ ಗೃಹ ಪ್ರವೇಶ ಕನಸಿನ ಮಾತಾಗಿದೆ.ಕೂಡಲೆ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದೆ ಹೋದರೆ ತಾಲೂಕಾ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಕೈಗೋಳಲಾಗುವುದೇಂದು ಈ ಮೂಲಕ ತಹಶೀಲ್ದಾರ್ ಕಡಕಭಾವಿ ಯವರಿಗೆ ಮನವಿ ಸಲ್ಲಿಸಲಾಯಿತು.ಈ ಪ್ರತಿಭಟನೆಯಲ್ಲಿಸಾಮಾಜಿಕ ಕಾರ್ಯಕರ್ತರಾದ.ಮಹಿಬೂಬ ಬೇವನೂರ,ಸಗೀರ ಮುಲ್ಲಾ,ಫಜಲು ಮುಲ್ಲಾ, ಚಂದ್ರಶೇಖರ.ಹೊಸಮನಿ,ಹಮ್ಮಜದ ಬಾಗವಾನ, ದುಂಡು ಬಿರಾದಾರ, ಹಾಗೂ ಮುಂತಾದವರು ಉಪಸ್ಥಿತರಿದ್ದರು.