filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:8; brp_del_th:0.0069,0.0004; brp_del_sen:0.1000,0.1000; motionR: null; delta:null; bokeh:0; module: photo;hw-remosaic: false;touch: (0.56404805, 0.21842855);sceneMode: 3145728;cct_value: 0;AI_Scene: (-1, -1);aec_lux: 252.0;aec_lux_index: 0;albedo: ;confidence: ;motionLevel: 65536;weatherinfo: null;temperature: 34;
ಇಂಡಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಇಂಡಿ ತಾಲೂಕಾ ಘಟಕದ ವತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಕಾನಿಪ ಸಂಘದ ಸಂಸ್ಥಾಪಕರಾದ ಡಿ.ವಿ.ಗುಂಡಪ್ಪ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಗೌರವ ಸಲ್ಲಿಸಿ ಪತ್ರಿಕಾ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.
ಸಂದರ್ಭದಲ್ಲಿ ಇಂಡಿ ತಾಲೂಕಾ ಕಾನಿಪ ಸಂಘದ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಚಾಬುಕಸವಾರ ಮಾತನಾಡಿ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಪತ್ರಕರ್ತರ ಸಂಘಯಾವುದಾದರು ಇದ್ದರೆ ಅದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಏಕೈಕ ಸಂಘವಾಗಿದೆ. ಶತಮಾನೋತ್ಸವದ ಹೊಸ್ತಿಲಲ್ಲಿರುವ ನಮ್ಮ ಸಂಘವು ಸದಾ ಪತ್ರಕರ್ತ ಬೆನ್ನೆಲುಬಾಗಿ ನಿಂತು ಅವರ ಏಳಿಗೆಗಾಗಿ ಶ್ರಮಿಸುತ್ತಿದೆ.
ಇಂಡಿ ತಾಲೂಕಾ ಘಟಕದಿಂದ ಪತ್ರಿಕಾ ದಿನಾಚರಣೆಯು ವೈಭÀವಾಗಿ ಆಚರಿಸಬೇಕು ಎಂಬ ನಿಲುವಾಗಿತ್ತು. ಅನಿವಾರ್ಯ ಕಾರಣಗಳಿಂದಾಗಿ ಸರಳವಾಗಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ. ಮುಂದಿನ ದಿನಮಾನಗಳಲ್ಲಿ ನಿಮ್ಮೆಲ್ಲರ ಸಹಾಯ ಸಹಕಾರದಿಂದ ಒಗ್ಗಟ್ಟಾಗಿ ವಿಜ್ರಂಭಣೆಯಿAದ ಪತ್ರಿಕಾ ದಿನಾಚರಣೆ ಆಚರಿಸುವಂತಾಗಲಿ ಎಂದು ಪತ್ರಕರ್ತರಿಗೆ ಶುಭಾಷಯಗಳನ್ನು ಕೊರಿದರು.
ಜಿಲ್ಲಾ ಕಾನಿಪ ಸಂಘದ ಸಲಹಾ ಸಮಿತಿ ಸದಸ್ಯ ಅಶೋಕ ಕುಲಕರ್ಣಿ ಮಾತನಾಡಿ ನಮ್ಮ ಸಂಘವು ಜು. ೧ರಿಂದ ಜು.೩೧ರವರೆಗೆ ಪತ್ರಿಕಾ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದೆವೆ. ಆ ನಿಟ್ಟಿನಲ್ಲಿ ಇಂದು ನಮ್ಮ ಪತ್ರಕರ್ತರ ಸಂಘದ ಸಂಸ್ಥಾಪಕರಾದ ಡಿ.ವಿ.ಜಿಯವರನ್ನು ಸ್ಮರಿಸುವ ಮೂಲಕ ಪತ್ರಿಕಾ ದಿನಾಚರಣೆಯನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಕಾನಿಪ ಇಂಡಿ ತಾಲೂಕಾ ಘಟಕದ ಅಧ್ಯಕ್ಷ ಅಬುಶಾಮಾ ಹವಾಲ್ದಾರ ಅಧ್ಯಕ್ಷತೆ ವಹಿಸಿ ಡಿ.ವಿ.ಗುಂಡಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಕಾನಿಪ ಸಂಘದ ಕಾರ್ಯದರ್ಶಿ ಸದ್ದಾಮಹುಸೇನ ಜಮಾದಾರ, ಕಾನಿಪ ಇಂಡಿ ತಾಲೂಕಾ ಘಟಕದ ಉಪಾಧ್ಯಕ್ಷ ಬೀರಪ್ಪ ಹೊಸುರ, ಪದಾಧಿಕಾರಿಗಳಾದ ಪ್ರವಿಣ ಮಠ, ಹಸನ ಮುಜಾವರ, ಸಂದೇಶ ಗಲಗಲಿ, ಇರೀಶಾದ ಬೋರಾಮಣಿ, ಗಣೆಶ ಹೊನ್ನಮೊರೆ, ವಿಶ್ವನಾಥ ಕಟ್ಟಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪೋಟೊ ಕ್ಯಾಪ್ಸನ್ ೩೧ ಇಂಡಿ ೦೧: ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಇಂಡಿ ತಾಲೂಕಾ ಘಟಕದ ವತಿಯಿಂದ ಕಾನಿಪ ಸಂಘದ ಸಂಸ್ಥಾಪಕರಾದ ಡಿ.ವಿ.ಗುಂಡಪ್ಪ ಅವರ ಭಾವಚಿತ್ರಕ್ಕೆ ಕಾನಿಪ ಇಂಡಿ ತಾಲೂಕಾ ಘಟಕದ ಅಧ್ಯಕ್ಷ ಅಬುಶಾಮಾ ಹವಾಲ್ದಾರ ಅಧ್ಯಕ್ಷತೆ ವಹಿಸಿ ಡಿ.ವಿ.ಗುಂಡಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.