25- ಝಳಕಿ : ಹಾಯ್ ವೋಲ್ಟೇಜ್ ಕರೆಂಟ್ ಯಾವಾಗ ಯಾವ ಘಟನೆ ಸಂಭವಿಸುವದು ಯಾರು ಹೊಣೆಗಾರರು.
ಝಳಕಿ : ಗ್ರಾಮದ ಬಸ್ಸ ನಿಲ್ದಾಣ, ಚಡಚಣ, ಇಂಡಿ ರಸ್ತೆಯಲ್ಲಿ ಮುಖ್ಯ ಬಿದಿಯಾಗಿದ್ದರಿಂದ, ದಿನ ನಿತ್ಯ ಸಾವಿರಾರು ಪ್ರಯಾಣಿಕರು, ವಿದ್ಯಾರ್ಥಿಗಳು ತಿರುಗಾಡುತ್ತಾರೆ, ಇದೆ ರಸ್ತೆ ಬದಿಯಲ್ಲಿ ನೂರಾರು ಬಡ ಜನರು ಬೀದಿ ಬದಿ ವ್ಯಾಪಾರಸ್ಥರು ಇದ್ದು, ಇಲ್ಲಿಯೇ ಹಾಯ್ ವೋಲ್ಟೇಜ್ ಕರೆಂಟ್ ವೈಯರ್ ಹಾಕಲಾಗಿದ್ದು, ವೈಯರ್ ಕೆಳಗೆ ಯಾವುದೇ ತರನಾದ ರಕ್ಷಣಾ ಕವಚ ಇಲ್ಲಾ, ಒಂದು ವೇಳೆ ವೈಯರ್ ಕಟ್ಟಾಗಿ, ಸ್ಪಾರ್ಕ್ ಆಗಿ ಕಟ್ಟಾದರೆ ನೂರಾರು ಜನರ ಜೀವಕ್ಕೆ ಅಪಾಯ ವಾಗಬಹುದು, ಅಂತಹ ಘಟನೆ ಸಂಭವಿಸಿದರೆ ಯಾರು ಹೊಣೆಗಾರರು ಎಂದು ಕರ್ನಾಟಕ ರಕ್ಷಣಾ ವೇದಿಕೆ ಝಳಕಿ ವಲಯದ ರವಿಕುಮಾರ್ ಹೂಗಾರ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಧಿಕಾರದವರು ಹಾಯ ವೋಲ್ಟೇಜ್ ಕರೆಂಟ್ ವೈಯರ್ ಹಾಕಿದ್ದು, ಜನರ ಜೀವಕ್ಕೆ ಅಪಾಯ ಆಗದಂತೆ ವೈಯರ್ ಕೆಳಗೆ ಸುರಕ್ಷತಾ ಕವಚ ಹಾಕುವಂತೆ ಚಡಚಣ ತಾಲೂಕಾ ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಗ್ರಾಮದ ಯುವ ನೇತಾರ ಪ್ರಥಮ ದರ್ಜೆ ಗುತ್ತಿಗೆದಾರ ವಿನೋದ್ ಶಿರಶ್ಯಾಡ ಮಾತನಾಡಿ, ಹಾಯ್ ವೋಲ್ಟೇಜ್ ಕರೆಂಟ್ ಇರುವದರಿಂದ ಇಲ್ಲಿನ ಮನೆಗಳಲ್ಲಿ ಟಿವಿ, ಫ್ಯಾನ್, ಇನ್ವರ್ಟರಗಳು ಹಾಳಾಗುತ್ತಿವೆ, ಹೀಗೆ ನಡೆದರೆ ಜನಸಾಮಾನ್ಯರು ದಿನಾಲು ಎಷ್ಟು ಹಣ ಭರಿಸಲು ಸಾಧ್ಯ ಇದಕ್ಕೆ ಕೂಡಲೆ ಸಂಬಂಧ ಪಟ್ಟ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಸಂಘ ಸೌಂಸ್ಥೆಗಳು, ಗ್ರಾಮದ ತಾಯಂದಿರು, ಗ್ರಾಮಸ್ಥರು ಕೂಡಿಕೊಂಡು ಉಗ್ರ ಹೋರಾಟ ಮಾಡಲಾಗುವುದು, ಯಾವುದೇ ಅನಾಹುತ ನಡೆದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳೇ ಉತ್ತರ ಕೊಡಬೇಕು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಇಂಡಿ ತಾಲೂಕಾ ಉಪಾಧ್ಯಕ್ಷರು ಪ್ರಕಾಶ್ ಬಿರಾದಾರ, ಗ್ರಾಮ ಪಂಚಾಯತ್ ಸದಸ್ಯರು ರಾಘವೇಂದ್ರ ಕಾಗರ, ಪಿಂಟು ದಾದಾ ಹಾಡಸಂಗೆ, ಅಮೋಘ ಢಾಳೆ, ಅಶೋಕ ಅ ಕಾಪಸೆ, ಬಾಲಕೃಷ್ಣ ಭೋಸಲೇ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.