ಝಳಕಿ : ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಸಮಾಲೋಚನೆ ಸಭೆ ನಡೆಸಲಾಯಿತು.
ಝಳಕಿ : ಅರ್ಜನಾಳ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ಹಲವಾರು ಸಮಸ್ಸೆಗಳ ಬಗ್ಗೆ ದೂರು ಸಲ್ಲಿಸಲಾಗಿತ್ತು, ಇದನ್ನು ಮೇಲಧಿಕಾರಿಗಳು ಸಂಪೂರ್ಣ ಕಲೆ ಹಾಕಿ ಪರಿಶೀಲನೆ ನಡೆಸಲಾಗಿ, ದುರಿನಲ್ಲಿ ಇರುವ ಸಮಸ್ಸೆಗಳ ಬಗ್ಗೆ ಎಲ್ಲ ಸದಸ್ಯರು ಮತ್ತು ರೈತರಿಗೆ ಸಮಾಲೋಚನೆ ಸಭೆ ಕರೆದು ಆಗಿರುವ ಸಮಸ್ಸೆಗಳ ಬಗ್ಗೆ ತಿಳಿ ಹೇಳಿ ಇರುವಂತಹ ಸಮಸ್ಸೆಗಳ ಬಗ್ಗೆ ಪರಿಹರಿಸಿ ಎಲ್ಲರಲ್ಲಿ ಸಂತಸ ವಾಗುವಂತೆ ಮತ್ತು ಯಾವುದೇ ತರನಾದ ಸಮಸ್ಸೆಗಳು ನಡೆಯುವಂತೆ ಮಾಹಿತಿ ನೀಡಿದರು.
ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರು ನಿರಂಜನ ಪೂಜಾರಿ ಮಾತನಾಡಿ ರೈತರು ಯಾವುದೇ ಸಮಸ್ಸೆ ಬಂದಲ್ಲಿ ಕೂಡಲೆ ಸಭೆ ಕರೆದು ಸಭೆಯಲ್ಲಿ ಚರ್ಚಿಸಲಾಗುವದು, ಯಾವುದೇ ಅಹಿತ ಘಟನೆಗಳಗದಂತೆ ಎಲ್ಲರು ಸಹಕರಿಸೋಣ ಎಂದರು, ಎಲ್ಲ ರೈತರು ಕೂಡಲೆ ಎಸೆಸ್ವಿನಿ ಕಾರ್ಡ್ ಮಾಡಿಕೊಳ್ಳುವಂತೆ ತಿಳಿಸಿ, ಮಾರ್ಚ್ 31 ಕೊನೆಯ ದಿನವಾಗಿದ್ದು, ತಾವುಗಳು ಎಸೆಸ್ವಿನಿ ಕಾರ್ಡ್ ಮಾಡಿಸಿ ಸರ್ಕಾರದಿಂದ ಸಿಗುವಂತ ಯೋಜನೆಯನ್ನು ಬಳಕೆ ಮಾಡೋಕೊಳ್ಳಿ ಎಂದರು, ಬೇಕಾಗುವ ದಾಖಲೆಗಳು ಆಧಾರ್ ಕಾರ್ಡ್ ರೇಷನ್ ಕಾರ್ಡ್, ಕುಟುಂಬ ಎಲ್ಲ ಸದಸ್ಯರು ಫೋಟೋ.
ಈ ಸಂದರ್ಭದಲ್ಲಿ , ಕಾರ್ಯದರ್ಶಿ ಬಿ. ಎಲ್. ಪಾಟೀಲ, ಮಾಜಿ ಅಧ್ಯಕ್ಷರು ಶಂಕರಗೌಡ ಬಿರಾದಾರ್, ವ್ಯವಸ್ಥಾಪಕರು ಚಂದು ಗಜಾಕೋಶ, ಕ್ಷೇತ್ರಾ ಅಧಿಕಾರಿಗಳು ರೊಟ್ಟಿ ಹಾಗೂ ಎಲ್ಲ ಸದಸ್ಯರು, ರೈತರು ಉಪಸ್ಥಿತರಿದ್ದರು.