24- ಝಳಕಿ : ಜಾಣರ ಗುರು ಇದು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಒಳ್ಳೆಯ ಸಲಹೆ ಕೊಡುವ ಪತ್ರಿಕೆ.
ಝಳಕಿ : ಎಸ್. ಎಸ್. ಎಲ್. ಸಿ ಮುಂದಿನ ವಿದ್ಯಾಭ್ಯಾಸದ ತಳಪಾಯ ಇದ್ದಂತೆ, ಆದ್ದರಿಂದ ಸಂಯುಕ್ತ ಕರ್ನಾಟಕ ಪತ್ರಿಕೆಯವರು ವಿಶೇಷವಾಗಿ ಎಸ್. ಎಸ್. ಎಲ್. ಸಿ ಮತ್ತು ಪಿ. ಯು. ಸಿ ವಿದ್ಯಾರ್ಥಿಗಳ ಪರೀಕ್ಷೆಗೆ ಅನುಕೂಲವಾಗುವಂತೆ ಜಾಣರ ಗುರು ಎಂಬ ಸಂಚಿಕೆ ತಂದಿದ್ದು ಸಂತೋಷದ ವಿಶೇಷ ಎಂದು ವಿಜಯಪುರ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷರು ರಾಘವೇಂದ್ರ ಕಾಪಸೆ ಅಭಿಪ್ರಾಯ ವ್ಯಕ್ತಪಡಿಸಿದರು.
ಝಳಕಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಎರಡುನೂರು ವಿದ್ಯಾರ್ಥಿಗಳಿಗೆ ಉಚಿತವಾಗಿ ಜಾಣರಗುರು ಪತ್ರಿಕೆ ವಿತರಣೆ ಮಾಡಿ ಮಾತನಾಡಿದರು.
ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ , ಇದು ಜೀವನದ ಬೆಳವಣಿಗೆ ಮತ್ತು ಜೀವನದಲ್ಲಿ ಸಾಮರ್ಥ್ಯ ರಾಗುವ ದಾರಿ, ಇಂದು ನೀವು ಒಳ್ಳೆಯ ರೀತಿಯಲ್ಲಿ ಅಭ್ಯಾಸ ಮಾಡಿದಾಗ ಮಾತ್ರ ನಿಮ್ಮ ಮುಂದಿನ ಜೀವನದಲ್ಲಿ ತಂದೆ ತಾಯಿಯ ಮತ್ತು ಸುಖ, ಸಮೃದ್ಧಿ ಕಾಣಲು ಸಾಧ್ಯ, ಎಸ್. ಎಸ್. ಎಲ್. ಸಿ ಇದು ಉನ್ನತ ಶಿಕ್ಷಣದ ಏಣಿ, ಈ ಏನಿಯನ್ನು ಹತ್ತದೆ ಹೋದಲ್ಲಿ ನಿಮ್ಮ ಜೀವನ ಶೂನ್ಯ ಎಂದರು.
ನಾಳೆ ಬರುವ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಅಂಕಗಳು ಗಳುಸಲು ಈ ಜಾಣರ ಗುರು ಪತ್ರಿಕೆಯಲ್ಲಿ ದಿನಕ್ಕೆ ಎರಡು ವಿಷಯದ ಮಾಹಿತಿ ಇದ್ದು, ಮತ್ತು ಸ್ನಾತಕೋತ್ತರ ಪರೀಕ್ಷೆಯ ಮಾಹಿತಿ ಕೂಡಾ ಇದ್ದು, ಇದನ್ನು ಎಲ್ಲರು ಕೂಡಿಕೊಂಡು ಓದುವದಷ್ಟೇ ಅಲ್ಲಾ ದಿನಕ್ಕೆ ಎರಡು ಗಂಟೆ ಚರ್ಚಾಕೂಟ ಮಾಡಿದರೆ ನಿಮ್ಮ ವಿದ್ಯಾರ್ಥಿ ಜೀವನ ಸಫಲ ವಾಗುತ್ತೆ ಎಂದು ತಿಳಿಹೇಳಿದರು.
ಈ ಸಂದರ್ಭದಲ್ಲಿ ಪಿಯುಸಿ ಕಾಲೇಜಿನ ಪ್ರಾಂಶುಪಾಲರು ಸಿ. ಕೆ. ಎಳಸಂಗಿ, ದೈಹಿಕ ಶಿಕ್ಷಕರು ಎಂ. ಬಿ. ಬಿರಾದಾರ, ಕರ್ನಾಟಕ ರಕ್ಷಣಾ ವೇದಿಕೆ ಇಂಡಿ ತಾಲೂಕು ಉಪಾಧ್ಯಕ್ಷರು ಪ್ರಕಾಶ ಬಿರಾದಾರ್, ಪಿ. ಜಿ. ಘೀರೆಡಿ, ಗ್ರಾಮ ಪಂಚಾಯತ್ ಸದಸ್ಯರು ರಾಘವೇಂದ್ರ ಕಾಗರ, ಬಿಜೆಪಿ ಮುಖಂಡರು ವಿಠ್ಠಲ್ ಕಾಗರ, ರಾಹುಲ್ ಹಿರೇಮಠ್, ಪಿಂಟು ಹಾಡಸಂಗೆ, ಶಿಕ್ಷಕರಾದ ಆರ್. ಸಿ. ತಳವಾರ, ಎಸ್. ಎಮ್ ಹಳಕಿ, ಸುನಿಲ್ ಶಹಾ,ಪ್ರಕಾಶ ಬನಗೊಂಡ ಹಾಗೂ ಪಿಯುಸಿ ವಿದ್ಯಾರ್ಥಿಗಳು, ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.