ಚಡಚಣ ಭಾಗದ ಶಿಕ್ಷಕರ ಸೊಸಾಯಿಟಿ ಚುನಾವಣೆ
ಎಸ್.ಎಸ್. ಪಾಟೀಲ ಬಣಕ್ಕೆ ಸತತ 7ನೇ ಬಾರಿ ಭರ್ಜರಿ ಗೆಲವು
ಚಡಚಣ : ಚಡಚಣ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಆಡಳಿತ ಮಂಡಳಿ ನಿರ್ದೇಶಕರ 2026-31ನೇ ಸಾಲಿನ ಚುನಾವಣೆಯು ಫೆ.22 ರವಿವಾರದಂದು ನಡೆಯಿತು.
1995 ರಿಂದ ಸತತವಾಗಿ ಗೆಲವು ಸಾಧಿಸಿದ ಎಸ್.ಎಸ್. ಪಾಟೀಲ ಬಣವು 2026-31ನೇ ಸಾಲಿಗೆ ನಡೆದ ಚುನಾವಣೆಯಲ್ಲಿ 7ನೇ ಬಾರಿಯೂ ಕೂಡ ಭರ್ಜರಿ ಗೆಲವು ಸಾಧಿಸಿ , ಈ ಭಾಗದಲ್ಲಿ ತನ್ನ ಪಾರುಪತ್ಯ ಮೆರೆದಿದೆ.
ಒಟ್ಟು 13 ಸ್ಥಾನಗಳಿದ್ದು, ಅದರಲ್ಲಿ ಮಹಿಳಾ ಮೀಸಲು 2 ಸ್ಥಾನಗಳಿಗೆ ಸುನೀತಾ ಕುಲಕರ್ಣಿ (ಮಹಿಳೆ). ಗಿರಿಜಾಬಾಯಿ ಮುಜಗೊಂಡ (ಮಹಿಳೆ), ಹಿಂದುಳಿದ ವರ್ಗ ಅ ಸ್ಥಾನಕ್ಕೆ ಮಾಳಪ್ಪ ಕಾಟೆ, ಹಿಂದುಳಿದ ವರ್ಗ ಬ ಸ್ಥಾನಕ್ಕೆ ಪ್ರಶಾಂತ ಕುರ್ಲೆ, ಪರಿಶಿಷ್ಟ ಜಾತಿ ಸ್ಥಾನಕ್ಕೆ ಸತೀಶ ಬಗಲಿ ಹಾಗೂ ಪರಿಶಿಷ್ಟ ಪಂಗಡ ಸ್ಥಾನಕ್ಕೆ ಬಸಣ್ಣ ಪೂಜಾರಿ ಇವರುಗಳು ಅವಿರೋಧ ಆಯ್ಕೆಯಾಗಿದ್ದಾರೆ.
ಉಳಿದ ಸಾಮಾನ್ಯ 7 ಸ್ಥಾನಗಳಿಗೆ ಫೆ. 22 ರವಿವಾರದಂದು ಬೆಳಗ್ಗೆ 9 ಗಂಟೆಗೆ ಆರಂಭವಾಗಿ ಮಧ್ಯಾಹ್ನ 4 ಗಂಟೆಗೆ ಮುಕ್ತಾಯವಾಯಿತು. ನಂತರ ಮತ ಎಣಿಕೆ ಪ್ರಕ್ರಿಯೆ ನಡೆದು ಸಾಯಂಕಾಲ 5 ಗಂಟೆಗೆ ಫಲಿತಾಂಶ ಹೊರಬಿದ್ದು, ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದು,
ಎಸ್.ಎಸ್. ಪಾಟೀಲ ಅವರ ಬಣದ 7 ಅಭ್ಯರ್ಥಿಗಳಾದ ಇರಫಾನಅಲಿ ಶೇರಅಲಿ ಮಕಾನದಾರ 456, ಗುರು ಜೇವೂರ 483, ಜಗದೀಶ ಸುರೇಶ ಕರಜಗಿ 466, ಮಲ್ಲಿಕಾರ್ಜುನ ಗುರುಬಾಳ ತೇಲಿ 473, ರಾಜಕುಮಾರ ಶ್ರೀಶೈಲ ಉಮದಿ 463, ಸಂತೋಷ ಶಾಂತಪ್ಪ ಬಿರಾದಾರ 463, ಸಿದಗೊಂಡಪ್ಪಗೌಡ ಚಂದ್ರಕಾಂತ ಪಾಟೀಲ 460 ಮತ ಪಡೆದು ವಿಜಯಶಾಲಿಯಾದರೆ ಪ್ರತಿಸರ್ದಿ ಅಭ್ಯರ್ಥಿಗಳಾದ ಅರುಣ ಶ್ರೀಪತಿ ಬಂಡಗಾರ 72 ಮತ, ಸಿದ್ದಾರಾಮ ದುಂಡಪ್ಪ ಮಾಳಾಬಗಿ 89 ಮತ ಪಡೆದು ಪರಾಭವಗೊಂಡಿದ್ದಾರೆ ಒಟ್ಟು 7 ಮತಗಳು ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿ ವಿ.ಪಿ. ನಾಯಕ ಪ್ರಕಣೆಯಲ್ಲಿ ತಿಳಿಸಿದ್ದಾರೆ.
ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗೃತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ ಕೈಗೊಳ್ಳಲಾಗಿತ್ತು.
ಚಡಚಣ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಆಡಳಿತ ಮಂಡಳಿ ನಿರ್ದೇಶಕರ 2026-31ನೇ ಸಾಲಿನ ಚುನಾವಣೆಯಲ್ಲಿ ಎಸ್.ಎಸ್. ಪಾಟೀಲ ಬಣ 7ನೇ ಬಾರಿ ಭರ್ಜರಿ ಗೆಲವು ಸಾಧಿಸಿ, ವಿಜಯೋತ್ಸವ ಆಚರಿಸಿದರು.