೭೭ ನೇ ಗಣರಾಜ್ಯೋತ್ಸವ ದಿನಾಚರಣೆಯ
ದಿನಾಂಕ: ೨೬.೦೧.೨೦೨೬ ರಂದು ನಗರದ ಎಸ್.ಎಸ್.ವ್ಹಿ.ವ್ಹಿ ಸಂಘದ ಶ್ರೀ ಜಿ.ಆರ್.ಗಾಂಧಿ ಕಲಾ, ಶ್ರೀ ವಾಯ್.ಎ. ಪಾಟೀಲ ವಾಣಿಜ್ಯ ಹಾಗೂ ಶ್ರೀ ಎಂ.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ‘೭೭ ನೇ ಗಣರಾಜ್ಯೋತ್ಸವದ ಧ್ವಜಾರೋಹಣ’ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ದೇಶದ ಸ್ವಾತಂತ್ರö್ಯಕ್ಕಾಗಿ ಹೋರಾಡಿ ಮಡಿದ ಮಹಾನ್ ನಾಯಕರಾದ ಮಹಾತ್ಮಾ ಗಾಂಧಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ೭೭ ನೇ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ.ನೀಕಂಠಗೌಡ ಎಸ್. ಪಾಟೀಲ ರವರು ನೆರವೇರಿಸಿ, ‘ಭಾರತದ ಸಂವಿಧಾನ ವಿಶ್ವದ ಅತೀ ದೊಡ್ಡ ಸಂವಿಧಾನ ಹಾಗೂ ಶ್ರೇಷ್ಠ ಸಂವಿಧಾನ ಹೊಂದಿದ ನಾವು ಅದೃಷ್ಠವಂತರು.
ಈ ದಿನ ನಮ್ಮ ಸಂವಿಧಾನವನ್ನು ನಾವು ನಮಗೆ ಅರ್ಪಣೆ ಮಾಡಿಕೊಂಡ ದಿನ. ಈ ಸಂವಿಧಾನ ಸಮಾನತೆ, ಸಹಬಾಳ್ವೆ, ಸಾಮಾಜಿ, ಆರ್ಥಿಕ ಹಾಗೂ ರಾಜಕೀಯ ಹಕ್ಕುಗಳನ್ನು ಸಮಾನವಾಗಿ ನೀಡಿದೆ. ಸಮಾಜದಲ್ಲಿದ್ದ ಅಸಮಾನತೆ, ಲಿಂಗ ತಾರತಮ್ಯ, ಜ್ಯಾತಿ ತಾರತಮ್ಯ, ಪ್ರಾದೇಶಿಕ ತಾರತಮ್ಯ ಹೋಗಲಾಡಿಸಿ ಎಲ್ಲರಿಗೂ ಸಮಾನ ಅವಕಾಶ ನೀಡಿದೆ.
ಕಾಲಕಾಲಕ್ಕೆ ಪ್ರಜಾಪ್ರಭುತ್ವಕ್ಕೆ ಎದುರಾಗುವ ಬಿಕ್ಕಟ್ಟುಗಳನ್ನು ಗ್ರಹಿಸಿ ಪರಿಹಾರ ಹುಡುಕುವ ದಿನ ಈ ಗಣರಾಜ್ಯೋತ್ಸವ ದಿನವಾಗಿದೆ. ಹಾಗಾಗಿ ಸಂವಿಧಾನದ ಪ್ರಜಾಪ್ರಭುತ್ವದ ಆಶೆಯಗಳನ್ನು ಈಡೇರಿಸುವ ಹೊಣೆಗಾರಿಕೆ ನಮ್ಮೇಲ್ಲರ ಮೇಲಿದೆ.’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ವರ್ಧನ ದೋಶಿರವರು ಮಾತನಾಡುತ್ತ “೧೯೪೭ರ ಆಗಸ್ಟ್ ೧೫ ರಂದು ಬ್ರಿಟಿಷರಿಂದ ಮುಕ್ತಿ ಸಿಕ್ಕರೂ, ಭಾರತ ಕೂಡಲೇ ಸಂಪೂರ್ಣ ಸ್ವತಂತ್ರ ಗಣರಾಜ್ಯವಾಗಿರಲಿಲ್ಲ. ಎರಡು ವರ್ಷಗಳಿಗೂ ಹೆಚ್ಚು ಕಾಲ ದೇಶವು ಸಾಂವಿಧಾನಿಕ ರಾಜಪ್ರಭುತ್ವದ ಅಡಿಯಲ್ಲೇ ಇತ್ತು.
ಬ್ರಿಟಿಷ್ ದೊರೆಯ ಪರವಾಗಿ ಗವರ್ನರ್ ಜನರಲ್ ಇಲ್ಲಿನ ಆಡಳಿತದ ಮುಖ್ಯಸ್ಥರಾಗಿದ್ದರು. ೧೯೫೦ರ ಜನವರಿ ೨೬ ರಂದು ಸಂವಿಧಾನ ಜಾರಿಯಾದ ಬಳಿಕವೇ ನಾವು ಅಧಿಕೃತವಾಗಿ ‘ಗಣರಾಜ್ಯ’ ಎಂಬ ಹೆಗ್ಗಳಿಕೆಗೆ ಪಾತ್ರವಾದೆವು.” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಮಂದೆವಾಲಿ, ದೀಲಿಪ ಬಂಡಿವಡ್ಡರ ಮತ್ತು ಶಶಿಕಾಂತ ಘಾಳಿಮಠ ಇವರು ಭಾರತೀಯ ಸೈನ್ಯದಲ್ಲಿ ಆಯ್ಕೆಯಾಗಿರುವದರಿಂದ ಅವರನ್ನು ಆಡಳಿತ ಮಂಡಳಿಯವರ ಹಾಗೂ ಮಹಾವಿದ್ಯಾಲಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಶೈಲ ಸಣ್ಣಕ್ಕಿರವರು ಸ್ವಾಗತ ಮಾಡಿದರು. ಬಿ.ಹೆಚ್.ಬಗಲಿರವರು ನಿರೂಪಿಸಿದರು. ಡಾ.ಎಸ್.ಬಿ.ಜಾಧವರವರು ಮಾಲಾರ್ಪಣೆಯನ್ನು, ಡಾ.ಸುರೇಂದ್ರ ಕೆ ರವರು ವಂದಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಡಾ.ವರ್ಧನ ಪಿ. ದೋಶಿ ಕಾರ್ಯದರ್ಶಿಗಳಾದ ಬಸವರಾಜ ಸಿ. ತಾಂಬೆ, ಕೋಶಾಧಿಕಾರಿಗಳಾದ ಸಾತಪ್ಪ ಎಮ್. ತೆನ್ನಳ್ಳಿ, ನಿರ್ದೇಶಕರುಗಳಾದ ಬೀಮನಗೌಡ ವಾಯ್. ಪಾಟೀಲ, ಸಚೀನಕುಮಾರ ಆರ್. ಗಾಂಧಿ, ಬಾಪುರಾಯ ಪಾಟೀಲ, ರಾಜಕುಮಾರ ಎನ್.ಪಾಟೀಲ, ಶಾಂತಪ್ಪ ಬಿ. ಬಿರಾದಾರ, ಪಟ್ಟಣದ ಗಣ್ಯರಾದ ರಾಜು ಕುಲಕರ್ಣಿ, ಶಾಂತೇಶ ಗಲಗಲಿ, ಮಹೇಶ ಕುಂಬಾರ, ಮಹಾವಿದ್ಯಾಲಯದ ಸಹ-ಪ್ರಾಧ್ಯಾಪಕರಾದ ಡಾ.ಆನಂದ ಸಿ. ನಡವಿನಮನಿ, ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ವಿಶ್ವಾಸ ಕೋರವಾರ, ಡಾ. ಪಿ.ಕೆ.ರಾಠೋಡ, ಡಾ. ಸಿ.ಎಸ್.ಬಿರಾದಾರ, ಡಿ, ಡಾ.ಶ್ರೀಕಾಂತ ರಾಠೋಡ, ಮಲ್ಲಿಕಾರ್ಜುನ ಆರ್ ಕೋಣದೆ, ಗ್ರಂಥಪಾಲಕರಾದ ರಾಘವೇಂದ್ರ ಪಿ. ಇಂಗನಾಳ, ಶೃತಿ ಪಾಟೀಲ, ಪಂಕಜಾ ಕುಲಕರ್ಣಿ, ಪರಶುರಾಮ ಅಜಮನಿ, ಧಾನಮ್ಮ ಪಾಟಿಲ, ಬಂದೆನವಾಜ ಅಗರಖೇಡ ಬೋಧಕೇತರ ಸಿಬ್ಬಂದಿಗಳು ಮತ್ತು ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.