ಶಾಲಾ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ ನಾದ ಪಂಚಾಯಿತಿ ಅಧಿಕಾರಿ ಸುರೇಶ ಲೋಣಿ.
ಇಂಡಿ-ತಾಲೂಕೀನ ನಾದ ಕೆಡಿ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಿಸಿದ ನಾದ ಬಿಕೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಹಲವಾರು ವಷ೯ಗಳಿಂದ ಯಾವುದೇ ರೀತಿಯ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ.ಆದರೆ ಶಾಲಾ ಎಸ್ಡಿಎಂಸಿ ಸದಸ್ಯರು ಸಭೆ ಮಾಡಿ ವಿದ್ಯಾರ್ಥಿಗಳಿಗೆ ಮೊದಲು ಕುಡಿಯುವ ನೀರಿನ ವ್ಯವಸ್ಥೆ ಕುರಿತು ಚರ್ಚೆ ಮಾಡಿ,ಸದರಿ ವಿಷಯ ಕುರಿತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಸುರೇಶ ಲೋಣಿಯವರ ಗಮನಕ್ಕೆ ತಂದಾಗ ತಕ್ಷಣ ಎಸ.ಡಿ.ಎಂ.ಸಿ ಯವರ ಮನವಿಗೆ ಸ್ಪಂದಿಸಿ, ಉತ್ತಮ ಗುಣಮಟ್ಟದ “ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು.ತಕ್ಷಣ ಸ್ಪಂದಿಸಿದ ಶ್ರೀ ಸುರೇಶ ಲೋಣಿ ಅಭಿವೃದ್ಧಿ ಅಧಿಕಾರಿಗಳಿಗೆ ಶಾಲಾ ಶಿಕ್ಷಕ ವೃಂದ ಹಾಗೂ ಎಸ್ಡಿಎಂಸಿ ಸದಸ್ಯರು , ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
1 thought on “ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ ನಾದ ಪಂಚಾಯಿತಿ ಅಧಿಕಾರಿ ಸುರೇಶ ಲೋಣಿ.”