ಮಧ್ಯಂತರ ವರುಣನ ಅವಾಂತರ.
ಝಳಕಿ : ಮಧ್ಯಂತರ ವರುಣನ ಆರ್ಭಟಕ್ಕೆ ರೈತ ಬೆಳೆದ ಬೆಳೆನಾಶವಾದ ಘಟನೆ ಜಳಕಿ ಗ್ರಾಮದ ರೈತರಾದ ಭಗವಂತ ಚೌಗಲೇ ಇವರ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ ಮತ್ತು ಜೋಳ ನೆಲಕುರುಳಿ ಕೈಗೆ ಒಂದು ತುತ್ತು ಬಾಯಿಗೆ ಬರದಂತಾಗಿದೆ, ಮಳೆ ಹೆಚ್ಚಾದರೂ ಮತ್ತು ಬಳೆ ಕಡಿಮೆಯಾದರು ಕಷ್ಟ ಅನುಭವಿಸುವುದು ರೈತನೇ ಹೊರತು, ಸರ್ಕಾರವಲ್ಲ, ರೈತನ ಗೋಳು ಕೇಳುವವರು ಯಾರು, ಇಡೀ ವರ್ಷ ಕಷ್ಟಪಟ್ಟು ಬೆಳೆದ ಬೆಳೆ ಹಾಳಾದಾಗ, ತನ್ನಗೋಳು ಯಾರಿಗೆ ಹೇಳುವುದು ಎಂದು ಝಳಕಿ ಗ್ರಾಮದ ರೈತರಾದ ಭಗವಂತ ಚೌಗುಲೆ ತಮ್ಮ ಅಳಲನ್ನು ತೋಡಿಕೊಂಡರು.
ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ರೈತರಿಗೆ ಪರಿಹಾರ ಒದಗಿಸುವಂತೆ, ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು, ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರು ರಾಘವೇಂದ್ರ ಕೆಂಗಾರ ಪ್ರಕಟನೆಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಜಿ. ಪಿ. ಎಸ್ ಮಾಡಿದ್ದು, ಮುಂದಿನ ಕ್ರಮಕ್ಕಾಗಿ ಮೇಲಧಿಕಾರಿಗಳ ಗಮನಕ್ಕೆ ಕಳುಹಿಸಲಾಗಿದೆ ಎಂದು ಗ್ರಾಮ ಆಡಳಿತ ಅಧಿಕಾರಿಗಳು ಶಂಕರ ಕಲಕೇರಿ ತಿಳಿಸಿದರು.