ಸೈನಿಕ ಶಾಲೆಯಲ್ಲಿ 124ನೇ ಸ್ಥಳೀಯ ಆಡಳಿತ ಮಂಡಳಿ ಸಭೆ ಜರುಗಿತು.
ವಿಜಯಪುರ ಭಾರತೀಯ ವಾಯುಪಡೆಯ ಬೆಂಗಳೂರಿನ ತರಬೇತಿ ಕಮಾಂಡ್ನ ಆಡಳಿತ ವಿಭಾಗದ ಹಿರಿಯ ಅಧಿಕಾರಿ ಮತ್ತು ವಿಜಯಪುರ ಸೈನಿಕ ಶಾಲೆಯ ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಏರ್ ವೈಸ್ ಮಾರ್ಷಲ್ ಬಿಜೊ ಜಾನ್ ಮಾಮ್ಮೆನ್ ವಿ.ಎಸ್.ಎಮ್. ಅವರು ವಿಜಯಪುರ ಸೈನಿಕ ಶಾಲೆಯ ಸ್ಥಳೀಯ ಆಡಳಿತ ಮಂಡಳಿಯ (ಎಲ್.ಬಿ.ಎ) 124 ನೇ ಸಭೆ ಹಾಗೂ ಕೊಡಗು ಸೈನಿಕ ಶಾಲೆಯ 30ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವಿಜಯಪುರ ಸೈನಿಕ್ ಶಾಲೆಯ ಪ್ರಾಂಶುಪಾಲರಾದ ಗ್ರೂಪ್ ಕ್ಯಾಪ್ಟನ್ ರಾಜಲಕ್ಷ್ಮಿ ಪೃಥ್ವಿರಾಜ್ ಮತ್ತು ಶಾಲೆಯ ಉಪ- ಪ್ರಾಂಶುಪಾಲರಾದ ಕಮಾಂಡರ್ ಮೀನಾ ಕುಮಾರಿ ಹಾಗೂ ಆಡಳಿತಾಧಿಕಾರಿ ಮೇಜರ್ ರಿತೇಶ್ ಕುಮಾರ್ ಅವರು ಔಪಚಾರಿಕವಾಗಿ ಅವರನ್ನು ಬರಮಾಡಿಕೊಂಡರು.
ಅಧ್ಯಕ್ಷರು ಯುದ್ಧ ಸ್ಮಾರಕ ಸ್ಥಳಕ್ಕೆ ಆಗಮಿಸಿ ಅಲ್ಲಿ ಅವರು ಪುಷ್ಪಗುಚ್ಛವಿಟ್ಟು ಯುದ್ಧ ವೀರರಿಗೆ ಗೌರವ ನಮನ ಸಲ್ಲಿಸಿದರು. ನಂತರ ಅವರನ್ನು ಗೌರವ ಪೂರಕವಾಗಿ ಅಶ್ವದಳದ ಮೂಲಕ ಯುದ್ಧ ಸ್ಮಾರಕ ಸ್ಥಳದಿಂದ ಶಾಲೆಯ ಪ್ರಾಂಗಣಕ್ಕೆ ಬರಮಾಡಿಕೊಳ್ಳಲಾಯಿತು. ಶಾಲೆಯ ಪ್ರಾಂಗಣಕ್ಕೆ ಆಗಮಿಸಿದಾಗ, ಅಧ್ಯಕ್ಷರಿಗೆ ವಿದ್ಯುಕ್ತ ಗಾರ್ಡ್ ಆಫ್ ಹಾನರ್ ನೀಡಲಾಯಿತು. ಏರ್ ವೈಸ್ ಮಾರ್ಷಲ್ ಬಿಜೊ ಜಾನ್ ಮಾಮ್ಮೆನ್ ಅವರ ಗೌರವಾರ್ಥವಾಗಿ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು, ಇದು ಕೆಡೆಟ್ ಗ ಸ್ವಾಗತ ಗೀತೆಯೊಂದಿಗೆ ಪ್ರಾರಂಭವಾಯಿತು.
ಈ ಸಂದರ್ಭದಲ್ಲಿ ಅವರು ಅತ್ಯುನ್ನತ ಅಂಕ ಗಳಿಸಿದ ಶಾಲೆಯ ಕೆಡೆಟ್ ಗಳಿಗೆ ನಗದು ಬಹುಮಾನ ವಿತರಣೆ ಮಾಡಿ ಹರ್ಷ ವ್ಯಕ್ತಪಡಿಸಿದರು. ಹಾಗೂ ಶಾಲೆಯ ಮೂವರು ಸಿಬ್ಬಂದಿ ವರ್ಗದವರಿಗೆ ಪ್ರಶಂಸನಾ ಪ್ರಮಾಣ ಪತ್ರ ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಏರ್ ವೈಸ್ ಮಾರ್ಷಲ್ ಬಿಜೊ ಜಾನ್ ಮೆಮ್ಮನ್ ಕೆಡೆಟ್ ಗಳು ಮತ್ತು ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಭಾಷಣದಲ್ಲಿ, ಎಲ್.ಬಿ.ಎ ಅಧ್ಯಕ್ಷರು ವಿಶೇಷವಾಗಿ ಶಾಲೆಯ ಶೈಕ್ಷಣಿಕ ಸಾಧನೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು, ಮೂಲಸೌಕರ್ಯ ಹಾಗೂ ಅಭಿವೃದ್ಧಿಯನ್ನು ಶ್ಲಾಘಿಸಿದರು.
ರಾಷ್ಟ್ರದ ಭವಿಷ್ಯದ ನಾಯಕರಾಗಲು ಸಿದ್ಧರಾಗುತ್ತಿರುವಾಗ ಕೆಡೆಟ್ ಗಳು ಶಿಸ್ತು, ಸಮರ್ಪಣೆ ಮತ್ತು ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಿರೆಂದು ಹೇಳಿದರು. ಸಭೆಯಲ್ಲಿ ಶಾಲೆಯ ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿವಿಧ ಯೋಜನೆಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು ಹಾಗೂ ಶೈಕ್ಷಣಿಕ ಪ್ರಗತಿ ಮತ್ತು ಎನ್.ಡಿ.ಎ. ಪರೀಕ್ಷೆಗಳಲ್ಲಿನ ಕೆಡೆಟ್ಗಳ ಸೇವನೆಯನ್ನು ಸುಧಾರಿಸಲು ತೆಗೆದುಕೊಂಡ ವಿವಿಧ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಶಾಲೆಯ ಸುಧಾರಣೆಗೆ ಸಕ್ರಿಯ ಬೆಂಬಲ ಹಾಗೂ ಸಹಕಾರ ನೀಡಿದ ಸರ್ವ ಸದಸ್ಯರಿಗೆ ಅಧ್ಯಕ್ಷರು ಅಭಿನಂದನೆಯನ್ನು ವ್ಯಕ್ತಪಡಿಸಿದರು. ಈ ಸಭೆಗೆ ರಿಯಲ್ ಅಡ್ಮಿರಲ್ ಆರ್.ಎಂ.ಪುರಂದರೆ ವಿ.ಎಸ್.ಎಮ್. (ನಿವೃತ್ತ) ಇವರೂ ಸಹ ಡಿಜಿಟಲ್ ಮೋಡ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.
ಇದಕ್ಕೂ ಮುನ್ನಾ ಶಾಲೆಯ ಗ್ರಂಥಾಲಯ, ಕರ್ನಲ್ ಮಾಗೋಡು ಬಸಪ್ಪ ರವೀಂದ್ರನಾಥ್, ವಿಆರ್ಸಿ ವಾರ್ ಮ್ಯೂಸಿಯಂ, ಅಟಲ್ ಟಿಂಕರಿಂಗ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯಗಳು, ಈಜುಕೊಳ,
ಒಳಾಂಗಣ ಕ್ರೀಡಾಂಗಣ, ಜಿಮ್ನಾಜಿಯಂ, ಶೂಟಿಂಗ್ ರೇಂಜ್, ಡೈರಿ, ಹೊರಾಂಗಣ ಕ್ರೀಡಾಂಗಣ, ವಿಜ್ಞಾನ ಉದ್ಯಾನವನ ಹಾಗೂ ವಸತಿ ನಿಲಯಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಿಜಯಪುರದ ಜಿಲ್ಲಾಧಿಕಾರಿಯಾದ ಡಾ. ಆನಂದ ಕೆ. ಅವರು, ಶಾಲೆಯ ಪ್ರಾಂಶುಪಾಲರಾದ ಗ್ರೂಪ್ ಕ್ಯಾಪ್ಟನ್ ರಾಜಲಕ್ಷ್ಮಿ ಪೃಥ್ವಿರಾಜ್, ಶಾಲೆಯ ಉಪ-ಪ್ರಾಂಶುಪಾಲರಾದ ಕಮಾಂಡರ್ ಮೀನಾ ಕುಮಾರಿ ಹಾಗೂ ಆಡಳಿತಾಧಿಕಾರಿ ಮೇಜರ್ ರಿತೇಶ್ ಕುಮಾರ್,
ಕರ್ನಾಟಕ ರಾಜ್ಯ ಸರ್ಕಾರದ ಇತರ ಸದಸ್ಯರು ಮತ್ತು ಅಧಿಕಾರಿಗಳು, ಬಿಜಾಪುರ ಮತ್ತು ಕೊಡಗು ಸೈನಿಕ ಶಾಲೆಯ ಪದಾಧಿಕಾರಿಗಳು, ಶೈಕ್ಷಣಿಕ ಮತ್ತು ಆಡಳಿತ ಸಿಬ್ಬಂದಿವರ್ಗದವರು, ಶಾಲೆಯ ಪಾಲಕ ಪ್ರತಿನಿಧಿಗಳು, ಶಾಲೆಯ ಹಿರಿಯ ಮಾಸ್ಟರ್ ರೇವಣಕುಮಾರ ದೇಸಾಯಿ, ಶಾಲೆಯ ಕೆಡೆಟ್ಗಳು, ಪಿ.ಟಿ.ಐ.ಗಳು, ಎನ್.ಸಿ.ಸಿ. ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.