ಇಂದು ಇಂಡಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಾಲಯದಲ್ಲಿ 2026ನೇ ವರ್ಷದ ಹಬ್ಬದ ಮುಂಗಡ ಫಾರ್ಮ್,ಗಳಿಕೆ ರಜೆ ನಗದೀಕರಣ ಫಾರ್ಮ್(EL Form)ಗಳನ್ನು ಇಂಡಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ತಾಲೂಕಿನ ಪ್ರತಿಯೊಬ್ಬ ಶಿಕ್ಷಕರಿಗೆ ವಿತರಿಸುವ ಸಲುವಾಗಿ ವಿಂಗಡಣೆ ಕಾರ್ಯದಲ್ಲಿ ತೊಡಗಿಸಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಪ್ರಾಥಮಿಕ ಶಿಕ್ಷಕರ ಸಹಕಾರಿ ಸಂಘದ ಪದಾಧಿಕಾರಿಗಳು ನಿರತರಾಗಿದ್ದರು.
ಅಲ್ಲದೆ ವಿಜಯಪುರ ಸರ್ಕಾರಿ ನೌಕರರ ಸರ್ಕಾರಿ ಬ್ಯಾಂಕಿನ ನಿರ್ದೇಶಕರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಆಗಿರುವ ಶ್ರೀ ಅಲ್ಲಾಬಕ್ಷ ವಾಲಿಕಾರ ಸರ್ ರವರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪ್ರತಿಯೊಬ್ಬ ಶಿಕ್ಷಕರಿಗೆ ಉಚಿತವಾಗಿ ಟ್ಯಾಕ್ಸ್ ಫಾರ್ಮ್ಗಳನ್ನು, ಕ್ಯಾಲೆಂಡರ್ ನ ಮಿನಿ ಪಾಕೆಟ್ಟುಗಳು ATM ಪಾಕೆಟಗಳು ಸರ್ಕಾರಿ ನೌಕರರ ಸಹಕಾರಿ ಬ್ಯಾಂಕಿನ 2026 ನೇ ಸಾಲಿನ ಕ್ಯಾಲೆಂಡರ್ ಗಳನ್ನು ವಿತರಿಸುವ ಸಲುವಾಗಿ ಎಲ್ಲಾ ಪದಾಧಿಕಾರಿಗಳು ಎಂದು ಪ್ರತಿಯೊಂದು ಶಾಲೆಗೆ ಹಂಚಿಕೆ ಮಾಡುವ ದೃಷ್ಟಿಯಿಂದ ವಿಂಗಡಣೆ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರತಿಯೊಂದು ಫಾರ್ಮಗಳನ್ನು ವಿತರಣೆ ಮಾಡುವ ಕೆಲಸವನ್ನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಶ್ರೀ ಅಲ್ಲಾಬಕ್ಷ ವಾಲಿಕಾರ ಸರ್ ಅವರ ಸಹಯೋಗದಲ್ಲಿ ನಾಳೆಯಿಂದ ಪ್ರಾರಂಭವಾಗಿ ಮಂಗಳವಾರಾದವರೆಗೆ ಪ್ರತಿಯೊಬ್ಬ ಶಿಕ್ಷಕರಿಗೆ ತಲುಪಿಸುವಂತಹ ವ್ಯವಸ್ಥೆ ಮಾಡಲಾಗುತ್ತದೆ. ಯಾವಾಗಲೂ ಕೂಡ ನಮ್ಮ ಶಿಕ್ಷಕರಿಗೆ ಪ್ರತಿಯೊಂದು ಕೆಲಸ ಕಾರ್ಯಗಳನ್ನು ನಮ್ಮ ಸಂಘಟನೆ ಮಾಡುತ್ತಾ ಬರುತ್ತಿದೆ.ಈ ವರ್ಷವೂ ಕೂಡ ನಮ್ಮ ಸಂಘಟನೆಯಿಂದ ಹಾಗೂ ಶ್ರೀ ಅಲ್ಲಾಬಕ್ಷ ವಾಲಿಕಾರ ವತಿಯಿಂದ ಎಲ್ಲಾ ಪ್ರತಿಯೊಬ್ಬ ಶಿಕ್ಷಕರಿಗೆ ಉಚಿತವಾಗಿ ತಮ್ಮ ತಮ್ಮ ಶಾಲೆಗೆ ತಲುಪಿಸುವಂತಹ ಕೆಲಸ ನಮ್ಮ ಸಂಘಟನೆ ಮಾಡುತ್ತಿದೆ ಎಂದು ತಾಲೂಕಿನ ಎಲ್ಲಾ ಶಿಕ್ಷಕರ ಗಮನಕ್ಕೆ ತರಲಾಗುವದು.ಸಂಘಟನೆಯಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಪ್ರತಿಯೊಬ್ಬ ಶಿಕ್ಷಕರಿಗೆ ಟ್ಯಾಕ್ಸ್ ಫಾರ್ಮ್ಗಳನ್ನು, ಕ್ಯಾಲೆಂಡರ್ ಮಿನಿ ಪಾಕೆಟ್ ಗಳನ್ನ,ಸರ್ಕಾರಿ ನೌಕರರ ಸರ್ಕಾರಿ ಬ್ಯಾಂಕಿನ ಕ್ಯಾಲೆಂಡರ್ ಗಳನ್ನು ವಿತರಣೆ ಮಾಡಲು ಸಹಕರಿಸುತ್ತಿರುವ ವಿಜಯಪುರ ಹಾಗೂ ಬಾಗಲಕೋಟನ ಪ್ರತಿಷ್ಠಿತ ನೌಕರ ಸಹಕಾರಿ ಬ್ಯಾಂಕಿ(GOCC)ನ ನಿರ್ದೇಶಕರು ಆಗಿರುವ ಶ್ರೀ ಅಲ್ಲಭಕ್ಷ ವಾಲಿಕಾರ್ ಸರ್ ಅವರಿಗೆ ಸಮಸ್ತ ಇಂಡಿ ತಾಲೂಕಿನ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಪ್ರತಿಯೊಬ್ಬರು ಶಿಕ್ಷಕರಿಗೆ ತಲುಪಿಸುವ ಸಲುವಾಗಿ ವಿಂಗಡಣೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
” ಶಿಕ್ಷಕರ ಸೇವೆಯೇ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪರಮೋಚ್ಚ ಗುರಿ “
ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಪದಾಧಿಕಾರಿಗಳು ಹಾಗೂ ಎಲ್ಲಾ ನಿರ್ದೇಶಕರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕ ಘಟಕ ಇಂಡಿ
ಹಾಗೂ
ಅಧ್ಯಕ್ಷರು ಹಾಗೂ ಎಲ್ಲಾ ನಿರ್ದೇಶಕರು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘ ಇಂಡಿ