ಮೈಸೂರು ಉತ್ಸವ ಪ್ರಯುಕ್ತ ಮಹಿಬೂಬ ಅಮೀರಹಮಜಾ ಲಕ್ಕಡಹಾರಗೆ ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಸೇವಾ ರತ್ನ ಪ್ರಶಸ್ತಿ
ಇಂಡಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ ಮೈಸೂರು ಹಾಗೂ ಕಲ್ಯಾಣ ಕರ್ನಾಟಕ ಒಕ್ಕೂಟ ವಿಜಯನಗರ ಇವರ ಸಹಯೋಗದಲ್ಲಿ, ಶ್ರೀ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗಕಲಾವಿದರ ಸಾಧಕರ ಶ್ರೀ ಮಾತಾ ಪ್ರಕಾಶನ ಇವರ ವತಿಯಿಂದ ಮೈಸೂರು ಉತ್ಸವದ ಪ್ರಯುಕ್ತ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ಮೈಸೂರಿನ ಅರಮನೆ ಮೈದಾನದಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ಇಂಡಿ ನಗರದ ಕೆ.ಜಿ.ಎಚ್.ಪಿ.ಎಸ್. ಗಾಂಧಿ ಚೌಕ ಬಜಾರ ಶಾಲೆಯ ಶಿಕ್ಷಕರಾದ ಮಹಿಬೂಬ ಅಮೀರಹಮಜಾ ಲಕ್ಕಡಹಾರ ಅವರಿಗೆ ಅವರ ಶೈಕ್ಷಣಿಕ ಸೇವೆಯನ್ನು ಗುರುತಿಸಿ ರಾಜ್ಯ ಮಟ್ಟದ “ಆದರ್ಶ ಶಿಕ್ಷಕ ಸೇವಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಗೌರವವು ಶಿಕ್ಷಕರ ಶೈಕ್ಷಣಿಕ ಬದ್ಧತೆ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಾಡಿದ ಸೇವೆಗೆ ದೊರೆತ ಮಹತ್ವದ ಮಾನ್ಯತೆಯಾಗಿದೆ.