ವಿಜಯಪುರ- ಕಾನೂನು ಸೇವೆಗಳ ಪ್ರಾಧಿಕಾರ, ವಿಜಯಪುರ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಇಂಡಿ, ತಾಲ್ಲೂಕು ಆಡಳಿತ ಚಡಚಣ. ಪೋಲಿಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಇಂಡಿ, ಶಿಕ್ಷಣ ಇಲಾಖೆ ಚಡಚಣ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮರಗೂರ ಇವರಸಂಯುಕ್ತ ಆಶ್ರಯದಲ್ಲಿಮಾದಕ ವಸ್ತುಗಳ ನಿಷೇದ ಮತ್ತು ಜಾಗೃತಿ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಶ್ರೀ ಅರವಿಂದ.
ಎಸ್.ಹಾಗರಗಿ ಹಿರಿಯ ದಿವಾಣಿ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಜಯಪುರ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ ಅತಿಯಾದರೆ ಅಮೃತವೂ ವಿಷ ಎಂದು ಹೇಳುತ್ತಾರೆ. ಹಾಗಾಗಿ ಈ ಮಾದಕ ವಸ್ತುಗಳಿಂದ ಸಾಕಷ್ಟು ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.
ಮಾದಕ ವಸ್ತುಗಳ ಚಟವು ವ್ಯಕ್ತಿಯ ಮೆದುಳಿನ ಮೇಲೆ ದೀರ್ಘಕಾಲದ ಮತ್ತು ಪ್ರಭಾವಿ ಪರಿಣಾಮ ಬೀರುತ್ತದೆ. ನಮ್ಮ ಸಮಾಜವನ್ನು ಕಾಡುತ್ತಿರುವ ಇಂಥ ಚಟಗಳಲ್ಲಿ ಮುಖ್ಯವಾದವು ಮಾದಕ ವಸ್ತು ಉತ್ತೇಜಕ ಪದಾರ್ಥ. ಇಂಥವುಗಳನ್ನು ಸೇವಿಸುವುದರಿಂದ ವ್ಯಕ್ತಿಯು ಮನೋವಿಕಲ್ಪ ಸಮಾಧಿ ಸ್ಥಿತಿ ತಲುಪುತ್ತಾನೆ .ಇದರ ಪರಿಣಾಮವಾಗಿ ವ್ಯಕಿಯು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಾನೆ.
ಇಂಥವುಗಳ ಸೇವನೆಯಿಂದ ವ್ಯಕ್ತಿಯು ಲೋಲುಪ್ತತೆಯನ್ನು ಬೆಳೆಸಿಕೊಳ್ಳುತ್ತಾನೆ . ಸಮಾಜವು ಒಪ್ಪಿಕೊಂಡಿರುವ ರೀತಿ – ನೀತಿಗಳ ವಿಷಯದಲ್ಲೂ ಅವನು ವಿಮುಖನಾಗುವಂತೆ ಅವು ಮಾಡುತ್ತವೆ. ಅಮಲು ಪದಾರ್ಥಗಳ ಸೇವನೆಯು ಕೆಲವು ನಿಮಿಷಗಳ ಕಾಲ ಆನಂದವನ್ನು ನೀಡುತ್ತದೆ ಆದರೆ ಇದು ದೂರಗಾಮಿ ಅಡ್ಡ ಪರಿಣಾಮಗಳನ್ನು ಹೊಂದಿದೆ. ಅದು ವ್ಯಕ್ತಿಯನ್ನು ನಿಧಾನವಾಗಿ ನುಂಗುತ್ತದೆ ಮತ್ತು ಅವನ ಜೀವನವನ್ನು ಎಲ್ಲಾ ರೀತಿಯಲ್ಲಿ ಹಾಳುಮಾಡುತ್ತದೆ.
ಅಂತಹ ಜನರು ಪ್ರತಿದಿನ ಸಹೋದ್ಯೋಗಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಕೆಲಸ ಮಾಡುವಾಗ ಅಪಘಾತಕ್ಕೀಡಾಗುವುದು ಹೆಚ್ಚಾಗಿದೆ ಇಂದಿನ ಮಕ್ಕಳು ನಾಳಿನ ಐಎಎಸ್ ಐಪಿಎಸ್ ಅಂತಹ ಉನ್ನತ ಅಧಿಕಾರಿಗಳಾಗಿ ತಂದೆ ತಾಯಿ ಹೆಸರನ್ನು ಮಾಡಬೇಕು ಎಂದರು, ಹಿರಿಯ ದಿವಾಣಿ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ
ದಂಡಾಅಧಿಕಾರಿಗಳು ಅಧ್ಯಕ್ಷರು ತಾಲೂಕ ಕಾನೂನು ಸೇವೆಗಳ ಸಮಿತಿ ಇಂಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಕೋಟೆಪ್ಪ ಕಾಂಬಳೆ ಅವರು ಮಾತನಾಡಿ ಮಕ್ಕಳನ್ನು ಲೈಂಗಿಕ ದೃಷ್ಟಿ ಯಿಂದ ನೋಡು ವುದು, ಅಶ್ಲೀಲ ಚಿತ್ರಗಳನ್ನು, ವಾಕ್ಯಗಳನ್ನು ಮಕ್ಕಳಿಗೆ ತೋರಿಸುವುದು,
ಅವರೊಂದಿಗೆ ಅಶ್ಲೀಲವಾಗಿ ಮಾತನಾಡುವುದು ಅಪರಾಧವಾಗುತ್ತದೆ, ಹಾಗೂ ರಸ್ತೆ ಬದಿಯಲ್ಲಿ ಹೋಗುವ ಸಂದರ್ಭದಲ್ಲಿ ಯಾರಾ ದರೂ ಯಾವುದೆ ವ್ಯಕ್ತಿಯನ್ನು ರೇಗಿಸುವುದು, ಕಾಟ ಕೊಡು ವುದು, ಹಿಂದೆ ಸುತ್ತಾಡುವುದು ಕಂಡು ಬಂದಲ್ಲಿ ಪೋಷಕರಿಗೆ ಅಥವಾ ಚೈಲ್ಡ್ ಹೆಲ್ಸ್ ಲೈನ್ ೧೦೯೮ ಗೆ ತಕ್ಷಣ ಕರೆ ಮಾಡಿ ಮಾಹಿತಿ ತಿಳಿಸಬೇಕು ಆಗ ತಕ್ಷಣ ಪ್ರಾಧಿಕಾರಗಳು ತುರ್ತು ಕ್ರಮಕ್ಕೆ ಮುಂದಾಗಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುತ್ತವೆ ಎಂದರು ಮುಖ್ಯ ಅತಿಥಿಗಳುಶ್ರೀ ಸುನಿಲ ಕುಮಾರ ಎಮ.ಎಸ್.ದಿವಾಣಿ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಇಂಡಿ.
ಸದಸ್ಯ ಕಾರ್ಯದರ್ಶಿಗಳು ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಇಂಡಿಶ್ರೀ ವಿಕಾಸ ದಳವಾಯಿ ಹೆಚ್ಚುವರಿ ದಿವಾಣಿ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಇಂಡಿ ಶ್ರೀ ಸದಾಶಿವ ಕಟ್ಟಿಮನಿ ಪೋಲಿಸ್ ಉಪಾಧಿಕ್ಷಕರು, ಉಪ ವಿಭಾಗ, ಇಂಡಿ ಶ್ರೀ ಎಸ್.ಬಿ.ಬೂದಿಹಾಳ ಅಧ್ಯಕ್ಷರು ವಕೀಲರ ಸಂಘ, ಇಂಡಿ,ಶ್ರೀ ಎ.ಎ.ಗಜಾಕೋಶ ಉಪಾಧ್ಯಕ್ಷರು ವಕೀಲರ ಸಂಘ,
ಇಂಡಿ ಶ್ರೀ ಎನ್.ಕೆ.ನಾಡಪುರೋಹಿತ ಕಾರ್ಯದರ್ಶಿಗಳು ವಕೀಲರ ಸಂಘ, ಇಂಡಿ.ಶ್ರೀ ಎಸ್.ಆರ್.ಬಿರಾದಾರ ಅಪರ ಸರ್ಕಾರಿ ವಕೀಲರು ಇಂಡಿ.
ಶ್ರೀಮತಿ ರಾಖಿ ಕಟ್ಟಿಮನಿ ಸಹಾಯಕ ಸರ್ಕಾರಿ ಅಭಿಯೋಜಕರು, ಇಂಡಿಶ್ರೀ ಐ.ಕೆ. ಗಚ್ಚಿನಮಹಲ ಸಹಾಯಕ ಸರ್ಕಾರಿ ಅಭಿಯೋಜಕರು, ಇಂಡಿ.ಶ್ರೀ ಮಲ್ಲೇಶ ಯಂಭತ್ನಾಳ ಸಹಾಯಕ ಸರ್ಕಾರಿ ಅಭಿಯೋಜಕರು, ಇಂಡಿಶ್ರೀ ಉಮೇಶ ಲಮಾಣಿ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಇಂಡಿ ಶ್ರೀ ರಾಜೇಶ ಕೋಳಕರ ತಾಲ್ಲೂಕಾ ಆರೋಗ್ಯಾಧಿಕಾರಿಗಳು, ಇಂಡಿಶ್ರೀ ಚಿದಾನಂದ ಕಟ್ಟಿಮನಿ ಕ್ಷೇತ್ರ ಶಿಕ್ಷಣಾಧಿಕಾರಿಗಳು,
ಚಡಚಣಶ್ರೀ ಡಿ.ಎಮ್.ಚಲುವಾದಿ ಪ್ರಾಂಶುಪಾಲರು ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮರಗೂರ.ಶ್ರೀ ಪ್ರಶಾಂತ ದೂಮಗೊಂಡ ಪ್ರಭಾರಿ ವೈದ್ಯಾಧಿಕಾರಿಗಳು ಪ್ರಾ.ಆ.ಕೇ.ಹಲಸಂಗಿ ಕಾರ್ಯಕ್ರಮದ ನಿರೂಪಣೆ ಚಿತ್ರಕಲಾ ಶಿಕ್ಷಕರಾದ ಶರಣ ಬಸಪ್ಪ ದೊಡ್ಡಮನಿ ಹಾಗೂ ಮುರಾರ್ಜಿ ವಸತಿ ಶಾಲೆ ಪೋಷಕರು ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿದರು.