ಇಂಡಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ೧೯೩೨ರಲ್ಲಿ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದು ಅಸ್ತಿತ್ವಕ್ಕೆ ಬಂದ ಅತಿ ಹಳೆ ಸಂಘವಾಗಿದೆ. ಇಲ್ಲಿಯವರೆಗೆ ಸಂಘದ ಕಾರ್ಯಚಟುವಟಿಕೆಗಳಿಗಾಗಿ ಸ್ವಂತ ಪತ್ರಿಕಾ ಭವನದ ಕಟ್ಟಡ, ನಿವೇಶನವಾಗಲಿ ಹೊಂದಿರುವುದಿಲ್ಲ. ಆದ್ದರಿಂದ ನಮ್ಮ ಸಂಘದ ಕಾರ್ಯ ಚಟುವಟಿಕೆಗಾಗಿ ತ್ವರಿತವಾಗಿ ಪತ್ರಿಕಾ ಭವನದ ಕಟ್ಟಡಕ್ಕಾಗಿ ನಿವೇಶನ ಮಂಜೂರು ಮಾಡಿಸಿಕೊಡಬೇಕು ಎಂದು ಇಂಡಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರ ಹಾಗೂ ಪ್ರಧಾನಕಾರ್ಯದರ್ಶಿಗಳ ನೇತ್ರತ್ವದಲ್ಲಿ ಎಲ್ಲ ಪಧಾಧಿಕಾರಿಗಳು ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ಮನವಿ ಪತ್ರ ಸಲ್ಲಿಸಿದರು.
ಅಲ್ಲದೆ ಕರ್ನಾಟಕ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಏಕೈಕ ರಾಜ್ಯದ ಭೃಹತ ಸಂಘವಾಗಿದೆ. ಹೀಗಿದ್ದರು ನಮ್ಮ ಸಂಘದ ಬಗ್ಗೆ ಕೆಲವು ತಪ್ಪು ಮಾಹಿತಿ ನೀಡುತ್ತಾ ಬಂದಿದ್ದರಿಂದ ಸೌಲಭ್ಯ ವಂಚಿತವಾಗುತ್ತಾ ಬಂದಿದೆ. ಅತಿ ಹೆಚ್ಚು ಸದಸ್ಯರು ಹೊಂದಿರುವ ಏಕೈಕ ಸಂಘವಾಗಿದ್ದು ಆದ್ದರಿಂದ ದಯವಿಟ್ಟು ಪತ್ರಿಕಾ ಭವನಕ್ಕಾಗಿ ನಿವೇಶನ ಒದಗಿಸಿಕೊಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.
ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ ಈ ಕುರಿತು ಪರಿಶೀಲನೆ ಮಾಡಿ ನಿವೇಶನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಇಂಡಿ ತಾಲೂಕಾ ಕಾನಿಪ ಅಧ್ಯಕ್ಷ ಅಬುಶಾಮಾ ಹವಾಲ್ದಾರ, ಕಾನಿಪ ಪ್ರಧಾನಕಾರ್ಯರ್ಶಿ ರಾಜಕುಮಾರ ಚಾಬುಕಸವಾರ, ಕಾನಿಪ ಜಿಲ್ಲಾ ಕಾರ್ಯದರ್ಶಿ ಸದ್ದಾಮಹುಸೇನ ಜಮಾದಾರ, ಕಾನಿಪ ಕಾರ್ಯದರ್ಶಿ ಸಿದ್ದಯ್ಯ ಹಿರೇಮಠ, ಜಹಾಂಗಿರ ದೇಸಾಯಿ, ಹಸನ ಮುಜಾವರ, ಪ್ರವೀಣ ಮಠ, ಇರಶಾದ ಬೋರಾಮಣಿ ಸೇರಿದಂತೆ ಅನೇಕರು ಇದ್ದರು.
ಪೋಟೊ ಕ್ಯಾಪ್ಸನ್ ೧೦ ಇಂಡಿ ೦೧: ನಗರದ ಪ್ರವಾಸಿ ಮಂದಿರದಲ್ಲಿ ಇಂಡಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರ ಹಾಗೂ ಪ್ರಧಾನಕಾರ್ಯದರ್ಶಿಗಳ ನೇತ್ರತ್ವದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿದರು.