ವಿಜಯಪುರ ಐತಿಹಾಸಿಕ ವೈಶಿಷ್ಟ್ಯಗಳನ್ನು ಹೊಂದಿರುವ ಅಪೂರ್ವ ನಗರ. ೨೦೧೪ ರಲ್ಲಿಯೇ ಮಹಾನಗರವಾಗಿ ರೂಪುಗೊಂಡಿದೆ, ಆದರೂ ಇಂದಿಗೂ ಅನೇಕ ಕಡೆಗಳಲ್ಲಿ, ಸರ್ಕಾರಿ ದಸ್ತಾವೇಜುಗಳಲ್ಲಿ ನಗರ ಎಂದೇ ಬರೆಯಲಾಗುತ್ತದೆ, ಹೀಗಾಗಿ ಕಡ್ಡಾಯವಾಗಿ ವಿಜಯಪುರ ಮಹಾನಗರ ಎಂದು ಬರೆಯುವಂತಾಗಬೇಕು ಎಂಬುದು ನನ್ನ ಒತ್ತಾಸೆ.
ಆದರೆ ಇನ್ನೂ ಅನೇಕರು ವಿಜಯಪುರ ನಗರ ಎಂದೇ ಪದ ಪ್ರಯೋಗಿಸುತ್ತಿದ್ದಾರೆ. ಹೀಗಾಗಿ ವಿಜಯಪುರ ಮಹಾನಗರ ಎಂಬ ಉದ್ಘೋಷದೊಂದಿಗೆ ಜನಮಾನಸದಲ್ಲಿರಬೇಕು ಎಂಬದು ನನ್ನ ಹಾಗೂ ಸಮಸ್ತ ವಿಜಯಪುರ ವಾಸಿಗಳ ಆಸೆ.
ಆದ್ದರಿಂದ ಎಲ್ಲಾ ಸರ್ಕಾರಿ ಅರೆ ಸರ್ಕಾರಿ, ಖಾಸಗಿ ಸಂಸ್ಥೆಗಳು ವ್ಯಾಪಾರಸ್ಥರು ಪ್ರತಿಯೊಬ್ಬರು ಮಹಾನಗರ ವಿಜಯಪುರ ಎಂಬುದೇ ಇರಬೇಕು ಎಂಬುದು ನನ್ನ ಸದಾಶಯ.
ಐತಿಹಾಸಿಕ ಸ್ಮಾರಕ, ಭವ್ಯ ವಾಸ್ತುಶಿಲ್ಪ, ವಿಭಿನ್ನ ಆಹಾರ ಸಂಸ್ಕೃತಿ ಹೊಂದಿರುವ ವಿಶಿಷ್ಟತೆಯ ಆಗರ. ಆದರೆ ಬಿಜಾಪೂರ ವಿಜಯಪುರವಾಗಿ ಬದಲಾಗಿದೆ, ಆದರೆ ಇಂದಿಗೂ ಅನೇಕರು ಬಿಜಾಪೂರ ಎಂಬ ಪದ ಪ್ರಯೋಗವನ್ನು ಮಾಡುತ್ತಿದ್ದಾರೆ, ಇದು ನಿಲ್ಲಬೇಕು, ವಿಜಯಪುರ ಎಂದೇ ಉಲ್ಲೇಖಿಸಬೇಕಾದ ಅವಶ್ಯಕತೆ ಇದೆ.
ಆದಿಲ್ಶಾಹಿ ವಂಶದ ರಾಜಧಾನಿ ಆಗಿದ್ದ ಐತಿಹಾಸಿಕ ನಗರ ವಿಜಯಪುರದಲ್ಲಿ ನಿರ್ಮಾಣಗೊಂಡ ಗೋಳಗುಮ್ಮಟ ವಿಶ್ವದಲ್ಲಿಯೇ ಅಪೂರ್ವ ವಾಸ್ತುಶಿಲ್ಪದ ವೈಭವ.
ವಿಶ್ವದಲ್ಲೇ ಅತಿದೊಡ್ಡ ಗುಮ್ಮಟಗಳಲ್ಲಿ ಒಂದು, ಧ್ವನಿ ಪ್ರತಿಧ್ವನಿಗೆ ಪ್ರಸಿದ್ದವಾಗಿದರೆ.
ಬಾರಾ ಕಮಾನ್, ಇಬ್ರಾಹಿಂ ರೋಜಾ, ಆಸಾರ್ ಮಹಲ್ ಪ್ರಮುಖ ಸ್ಮಾರಕಗಳು ಇಲ್ಲಿವೆ.
ವಿಜಯಪುರ ಹಿಂದೂ–ಮುಸ್ಲಿಂ ಸಂಸ್ಕೃತಿಗಳ ಸೌಹಾರ್ದತೆಯ ಕೇಂದ್ರವೂ ಹೌದು.
ಉರ್ದು, ಕನ್ನಡ, ಮರಾಠಿ ಭಾಷೆಗಳ ಸಮ್ಮಿಲನವನ್ನೂ ಕಾಣಬಹುದಾಗಿದೆ.
ಭಕ್ತಿ ಭಂಡಾರಿ ಅಣ್ಣ ಬಸವಣ್ಣನವರು, ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಂತಹ ಮಹಾನ್ ವ್ಯಕ್ತಿಗಳು ಜನಿಸಿದ ಪಾವನ ಭೂಮಿ.
ಕೃಷಿ ಮತ್ತು ಆರ್ಥಿಕತೆಯಲ್ಲೂ ವಿಜಯಪುರ ಕಡಿಮೆ ಏನಿಲ್ಲ. ವಿಜಯಪುರದಲ್ಲಿ ಬೆಳೆಯುವ
ದ್ರಾಕ್ಷಿ, ದಾಳಿಂಬೆ, ಲಿಂಬೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೊಡ್ಡ ಬೇಡಿಕೆ ಇದೆ.
ಶಕ್ತಿ ಹೆಚ್ಚಿಸುವ ಕಡಲೆ, ಜೋಳ, ಹೆಸರು ಬೆಳೆ ಬೆಳೆಯಲು ಸಹ ವಿಜಯಪುರ ಹೆಸರುವಾಸಿ.
ವಿಜಯಪುರ ಜಿಲ್ಲೆ ದ್ರಾಕ್ಷಿ ಉತ್ಪಾದನೆಯಲ್ಲಿ ಮುಂಚೂಣಿ
ಯಲ್ಲಿದೆ.
ಸೈನಿಕ ಶಾಲೆ, ಕೃಷಿ ವಿಶ್ವವಿದ್ಯಾಲಯ,
ಅಕ್ಕಮಾಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯ, ಅನೇಕ ವೈದ್ಯಕೀಯ ಮಹಾವಿದ್ಯಾಲಯಗಳು, ಶಾಲಾ ಕಾಲೇಜುಗಳು ಸಹ ಇಲ್ಲಿವೆ.
ರೈಲು ಮತ್ತು ರಸ್ತೆ ಸಂಪರ್ಕ ಮೂಲಕ
ಬೆಂಗಳೂರು, ಪುಣೆ, ಹೈದರಾಬಾದ್, ನೇರ ಸಂಪರ್ಕ ಕಲ್ಪಿಸುವ
ರಾಷ್ಟ್ರೀಯ ಹೆದ್ದಾರಿಗಳ ಮೂಲಕ ವ್ಯಾಪಾರಿಕ ಮಹತ್ವ ಸಾರಿದ ಮಹಾನಗರ.