ಸ್ವಚ್ಛ ಭಾರತ ಮಿಷನ್ 2.0 ಯೋಜನೆ ಅಡಿಯಲ್ಲಿ .ಐ.ಈ.ಸಿ ಕಾರ್ಯಕ್ರಮ
ಇಂಡಿ: ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಸ್ವಚ್ಛ ಭಾರತ ಮಿಷನ್ ( ನಗರ) ನಗರಾಭಿವೃದ್ಧಿ ಇಲಾಖೆ,ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಹಾಗೂ ನಗರ ಸಭೆ ಕಾರ್ಯಾಲಯ ಇಂಡಿ ಇವರ ವತಿಯಿಂದ ಇಂಡಿ ನಗರದ ಬಸವೇಶ್ವರ ಮಂಗಲಕಾರ್ಯಲಯ ಮುಂದೆ ಸಾಮೂಹಿಕ ಸ್ವಚ್ಛತೆ ಕುರಿತ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ನಾಗರಿಕರು, ಸ್ವಚ್ಛತಾ ಕಾರ್ಮಿಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಸ್ವಚ್ಛತೆಯ ಮಹತ್ವವನ್ನು ಜನರಿಗೆ ತಿಳಿಸಿದರು.
ಆ ಸಂದರ್ಭದಲ್ಲಿ ಇಂಡಿ ನಗರ ಸಭೆ ಆರೋಗ್ಯ ಅಧಿಕಾರಿಗಳಾದ ಎಲ್.ಎಸ್.ಸೂಮನಾಯಕ ಮಾತನಾಡಿ ತ್ಯಾಜ್ಯ ವಿಂಗಡನೆ ಕುರಿತು ವಿಶೇಷ ಮಾಹಿತಿ ನೀಡಲಾಗಿದ್ದು, ಒದ್ದೆ ಕಸ, ಒಣ ಕಸ ಹಾಗೂ ಅಪಾಯಕರ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ಬಗ್ಗೆ ಜಾಗೃತಿ ಮೂಡಿಸಲಾಯಿತು. ಸ್ವಚ್ಛತೆ ನಮ್ಮ ಜವಾಬ್ದಾರಿ ಎಂಬ ಸಂದೇಶದೊಂದಿಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಈ ಜಾಗೃತಿ ಕಾರ್ಯಕ್ರಮದಲ್ಲಿ “ಸ್ವಚ್ಛ ಭಾರತ ಮಿಷನ್ 2.0 ಒಂದು ದಿನ, ಎಲ್ಲರ ಜೋತೆ, ಒಂದು ಗಂಟೆ ಎಂಬ ಘೋಷವಾಕ್ಯದೊಂದಿಗೆ ಬ್ಯಾನರ್ಗಳನ್ನು ಹಿಡಿದು ಮೆರವಣಿಗೆ ನಡೆಸಲಾಯಿತು. ಪರಿಸರ ಸಂರಕ್ಷಣೆ, ಆರೋಗ್ಯಕರ ಜೀವನ ಹಾಗೂ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಸ್ವಚ್ಛತೆ ಅತ್ಯಗತ್ಯವೆಂದು ತಿಳಿಸಿದರು.
ಸ್ಥಳೀಯ ಆಡಳಿತದ ಸಹಕಾರದಿಂದ ನಡೆದ ಈ ಕಾರ್ಯಕ್ರಮಕ್ಕೆ ನಾಗರಿಕರಿಂದ ಉತ್ತಮ ಸ್ಪಂದನೆ ದೊರಕಿತು. ಮುಂದಿನ ದಿನಗಳಲ್ಲಿಯೂ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಇಂಡಿ ನಗರ ಸಭೆಯ ಶಶಿ ದೇವರ, ಬಸು ಪಾಟೀಲ. ನಿಂಬಣ್ಣ ರವಳಿ, ಶ್ರೀಶೈಲ ಹಾದಿಮನಿ, ರಾಕೇಶ ಮೂರಮನ, ಸೇರಿದಂತೆ ಸ್ಥಳೀಯರು ಇದ್ದರು.