ನಾಟಕಗಳು ಮನ ಪರಿವರ್ತನಾ ಕೇಂದ್ರಗಳು, ಬಿ.ಡಿ.ಪಾಟೀಲ.
ಇಂಡಿ: ಶ್ರೀ ಮಾತಂಗಿ ಹಾಗೂ ಶ್ರೀ ಎಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಹಿರೇಬೇವನೂರ ಗ್ರಾಮದಲ್ಲಿ ನಡೆದ “ಹೆಣ್ಣಿಗೆ ಶೀಲ ಗಂಡಿಗೆ ಬುದ್ದಿ ಬಂಗಾರ”ಎಂಬ ಸಾಮಾಜಿಕ ನಾಟಕದ ಉದ್ಘಾಟನೆ ನೆರವೇರಿಸಿ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಮಾತನಾಡುತ್ತಾ ನಾಟಕಗಳು ಕೇವಲ ಮನರಂಜನಾ ಕೇಂದ್ರಗಳಲ್ಲ್ , ಮನ ಪರಿವರ್ತನಾ ಕೇಂದ್ರಗಳು ಮಹಾತ್ಮ ಗಾಂಧಿಜೀ ಸತ್ಯ ಹರಿಶ್ಚಂದ್ರ ನಾಟಕ ನೋಡಿ ಮನ ಪರಿವರ್ತನೆ ಹೊಂದಿದ್ದರು, ಎಂದು ತಮ್ಮ ಆತ್ಮ ಕಥೆಯಲ್ಲಿ ಹೇಳಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ನಾಟಕಗಳು ಜೀವಂತವಾಗಿದ್ದು ಸ್ವಾಗತಾರ್ಹ ಎಂದು ಮಾತನಾಡಿದರು.ವೇದಿಕೆ ಮೇಲೆ ಸಾನಿಧ್ಯ ವಹಿಸಿದ ವೇ.ಶ್ರೀ ದಯಾನಂದ ಹಿರೇಮಠ, ಶ್ರೀ ಸೋಮಣ್ಣ ಮಹಾರಾಯ, ಅತಿಥಿಗಳಾಗಿ ನಾಗಣಗೌಡ ಪಾಟೀಲ, ಮುತ್ತಪ್ಪ ಚಿಕ್ಕಬೇವನೂರ,ಸಂಗಣ್ಣ ಬಡಿಗೇರ,ರವಿಗೌಡ ಪಾಟೀಲ, ಭೀಮಾಶಂಕರ ಮೇತ್ರಿ, ಶಾರುಖ್ ಶೇಖ್, ಪ್ರವೀಣ್ ಉಪ್ಪಿನ, ವಿಠಲ ಕೋಳಿ, ಚಂದ್ರಕಾಂತ ವಾಲಿಕಾರ, ಪರಶುರಾಮ ಶಿವಶರಣ,ರಮೇಶ ತಮ್ಮಶಟ್ಪಿ,ಸಿದ್ದರಾಮ ಹಂಜಗಿ, ಶ್ರೀದರ ಬಿರಾದಾರ, ಅಣ್ಣಾರಾಯ ಬಿರಾದಾರ, ಮುಂತಾದವರು ಉಪಸ್ಥಿತರಿದ್ದರು