ಶಾಸಕ ಬಸನಗೌಡ ಪಾಟೀಲ ಯತ್ನಾಳರು ಘೋಷಿಸಿದಂತೆ
ಕಾರ್ ಸರ್ವಿಸ್ ಸೆಂಟರ್ ಮಾಲೀಕನಿಗೆ ರೂ.5 ಲಕ್ಷ ಹಸ್ತಾಂತರ
ವಿಜಯಪುರ: ನಗರದ ಎಚ್.ಎಂ.ಕೆ ಕಾರ್ ಸರ್ವಿಸ್ ಸೆಂಟರ್ ಮಾಲೀಕ ಹನುಮಂತ ಕನಮಡಿ ಅವರಿಗೆ ಸೋಮವಾರ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ವೈಯಕ್ತಿಕವಾಗಿ ರೂ.5 ಲಕ್ಷ ಸಹಾಯಧನ ನೀಡಿದರು.
ನಗರದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿರುವ ಎಚ್.ಎಂ.ಕೆ ಕಾರ್ ಸರ್ವಿಸ್ ಸೆಂಟರ್ ದಲ್ಲಿ ಅಗ್ನಿ ಅವಘಡ ಸಂಭವಿಸಿದ ಹಿನ್ನೆಲೆ ಎರಡು ದಿನಗಳ ಹಿಂದೆ ಸರ್ವಿಸ್ ಸೆಂಟರ್ ಗೆ ಭೇಟಿ ನೀಡಿ ಸಾಂತ್ವನ ಹೇಳಿ, ವೈಯಕ್ತಿಕವಾಗಿ ರೂ.5 ಲಕ್ಷ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಮಾಲೀಕ ಹನುಮಂತ ಕನಮಡಿ ಅವರಿಗೆ ರೂ.5 ಲಕ್ಷ ಹಣವನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಸಿದ್ದೇಶ್ವರ ಸಂಸ್ಥೆಯ ನಿರ್ದೇಶಕ ವಿಜಯಕುಮಾರ ಡೋಣಿ, ಸಿದ್ಧಸಿರಿ ಮಲ್ಟಿ ಸ್ಟೇಟ್ ಮಲ್ಟಿ ಪರ್ಪೋಸ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕ ಗಣಪತಿ ಜಾಧವ, ಶಾಸಕರ ಆಪ್ತ ಸಹಾಯಕ ಉಮೇಶ ಕೋರೆ, ಮುಖಂಡರಾದ ರಾಜು ಜಾಧವ, ಬಿ.ಎಸ್.ಪಾಟೀಲ, ಗಂಗಾಧರ ನಿರ್ವಾಹಣಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.