ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ರಾಷ್ಟçಪಿತ ಮಹಾತ್ಮಾ ಗಾಂಧೀಜಿಯವರ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಶಾಂತಿ-ಅಹಿಂಸಾ ಮಾರ್ಗದಲ್ಲಿ ದೇಶವನ್ನು ದಾಸ್ಯಮುಕ್ತಗೊಳಿಸಲು ತಮ್ಮನ್ನೆ ತಾವು ಸಮರ್ಪಣೆಗೊಳಿಸಿ ಮನುವಾದಿಗಳ ಕುತಂತ್ರಕ್ಕೆ ಬಲಿಯಾಗಿ ಇಂದಿಗೆ ೭೮ ವರ್ಷಗಳು ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯ, ವಿಜಯಪುರ ದಲ್ಲಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಗೌರವವನ್ನು ಸಲ್ಲಿಸಲಾಯತು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರು, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ ಮುಶ್ರೀಫ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ವೈಜನಾಥ ಕರ್ಪೂರಮಠ, ಚಾಂದಸಾಬ ಗಡಾಗಲಾವ, ಮಹಾನಗರ ಪಾಲಿಕೆ ಸದಸ್ಯೆ ಆರತಿ ಶಹಾಪೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಾಹೇಬಗೌಡ ಬಿರಾದರ, ಐ.ಎಂ.ಇಂಡೀಕರ, ವಸಂತ ಹೊನಮೊಡೆ, ಸಂತೋಷ ಬಾಲಗಾವಿ, ಅಬ್ದುಲ ಪೀರ ಜಮಖಂಡಿ, ಮೈಬೂಬ ಕಲಾದಗಿ, ವಿಜಯಕುಮಾರ ಕಾಳೆ, ಕೃಷ್ಣಾ ಲಮಾಣಿ, ಮಂಜುಳಾ ಗಾಯಕವಾಡ, ಕುಲದೀಪಸಿಂಗ, ಅಶೋಕ ನಾಯಕೋಡಿ, ಸರಿತಾ ನಾಯಕ, ದೀಲಿಪ, ಪ್ರಭಾಕರ, ನಿರು ಚವ್ಹಾಣ, ಬಸವರಾಜ ಬೂದಿಹಾಳ, ಮುಂತಾದವರು ಉಪಸ್ಥಿತರಿದ್ದರು ಎಂದು ಜಿಲ್ಲಾ ಕಾಂಗ್ರೆಸ ಸಮಿತಿ ವಿಜಯಪುರ ಪಕ್ಷದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.