ವಿಕಲಚೇತನರಿಗೆ ಅನುಕಂಪ ಬೇಡ, ಗೌರವ ಹಾಗೂ ಸೌಲಭ್ಯ ನೀಡಿ,.ಬಿ.ಡಿ.ಪಾಟೀಲ
ಇಂಡಿ: ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ತಾಲೂಕಾ ಘಟಕದ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ ವಿಜಾಪೂರ ಆಶ್ರಯದಲ್ಲಿ 2025/26ನೇ ಸಾಲಿನ ಅಂಗವಿಕಲರ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಮಾತನಾಡುತ್ತಾ ವಿಕಲಚೇತನರಿಗೆ ಅನುಕಂಪ ಬೇಡ ಅವರನ್ನು ಗೌರವ ಹಾಗೂ ಸರ್ಕಾರಿ ಸವಲತ್ತು ಮುಟ್ಟಿಸಿ, ಅವರು ಕೂಡಾ ಸ್ವಾವಲಂಬಿ ಬದುಕು ಸಾಗಿಸುವಂತ ವಾತಾವರಣ ಸಮಾಜ ಹಾಗೂ ಸರ್ಕಾರ ಮಾಡಬೇಕು.ಎಂದು ಮಾತನಾಡಿದರು.ವೇದಿಕೆ ಮೇಲೆ ಶಿಕ್ಷಕರಾದ ವ್ಹಿ ಎಚ್.ಬಿದನೂರು,ಒಕ್ಕೂಟದ ಕಾರ್ಯದರ್ಶಿ ಅಶೋಕ್.ವಾಲಿಕಾರ, ಇಂಡಿ ಘಟಕ ನಿಂಗರಾಜ ಬಿಸನಾಳ,ಮಾಳು ಪವಾರ, ಮುತ್ತು ಮದರಿ, ಬಾಳು ರಾಠೋಡ, ಮೌನೇಶ್ ಬಡಿಗೇರ,ಶಿವರಾಜ ತಡ್ಲಗಿ,ಪದ್ಮಣ ಪೂಜಾರಿ,ಮುಬರಾಕ ಮುಲ್ಲಾ,ಸರೋಜಾ ಹಂಜಗಿ,ತುಕಪ್ಪ ಬಿರಾದಾರ,ಸೋಮಯ ಮೋಮಿನ,ಸೀತಾ ಪೋಜಾರಿ, ಮುಂತಾದವರು ಉಪಸ್ಥಿತರಿದ್ದರು