ಕಾನಿಪದಿಂದ ಧ್ವಜಾರೋಹಣ ಸಂಭ್ರಮ
ಬಾಗಲಕೋಟೆ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿವರ್ಷದಂತೆ ಈ ವರ್ಷವೂ ಗಣರಾಜ್ಯೋತ್ಸವದ ಅಂಗವಾಗಿ ನವ ನಗರದ ಪತ್ರಿಕಾ ಭವನದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಮಹೇಶ ಅಂಗಡಿಯವರು ಧ್ವಜಾರೋಹಣ ನೆರವೇರಿಸಿ ಡಾಕ್ಟರ್ ಬಿ ಆರ್ ಅಂಬೇಡ್ಕರ ಅವರು ಬರೆದಂತ ಸಂವಿಧಾನದ ಆಶಯದಂತೆ ಪ್ರತಿಯೊಬ್ಬರು ನಡೆದುಕೊಳ್ಳಬೇಕೆಂದು ಕರೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಸಂತೋಷ ಕಾಂಬಳೆ, ಕಾರ್ಯದರ್ಶಿ ವಿವೇಕಾನಂದ ಗರಸಂಗಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ಗಾಣಿಗೇರ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಬಸವರಾಜ ಹವಾಲ್ದಾರ, ವಿರೇಶ ನಾಲತ್ತವಾಡ ಭೀಮು ಜಮಖಂಡಿ, ಶಬ್ಬೀರ್ ಬಿಜಾಪುರ, ಪತ್ರಕರ್ತರಾದ ಶಶಿಕುಮಾರ ಕೆರೂರ, ಶ್ರೀಶೈಲ ಬಿರಾದಾರ, ವಿರೇಶ ಹಿರೇಮಠ, ಸಮೀರ್ ರಫುಗರ, ಅಭಿಷೇಕ ಪಾಟೀಲ,ಅಡಿವೆಪ್ಪ ಸರೂರ, ಕಿರಣ್ ನಾರಾಯಣಿ,ಶಿವು ಗಾಣಿಗೇರ,ಶಾಂತು ಚವ್ಹಾಣ, ಆರೀಪ್ ಬೇಪಾರಿ, ಭಾರತ ಸೇವಾದಳದ ಡಾ.ಎಚ್.ಬಿ.ಚೌಧರಿ
ಇದ್ದರು.